ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಸಾನಿಯಾ ಚಾಂದೋಕ್ ಅವರನ್ನು 2026ರ ಮಾರ್ಚ್ 5ರಂದು ವಿವಾಹವಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮದುವೆ ಮುಂಬೈನಲ್ಲಿ ಸಾಂಪ್ರದಾಯಿಕ ಹಾಗೂ ಅದ್ಧೂರಿ ಶೈಲಿಯಲ್ಲಿ ನಡೆಯಲಿದೆ ಎನ್ನಲಾಗಿದೆ.
ಇದನ್ನು ಓದಿ: ಪತ್ನಿಯ ನಡತೆಯ ಮೇಲೆ ಸಂಶಯ: ಮಗಳಿಗೆ ನೇಣು ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ…
ವಿವಾಹಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳಲ್ಲೂ ಸಿದ್ಧತೆಗಳು ಆರಂಭವಾಗಿದ್ದು, ಆಪ್ತ ಬಂಧುಗಳು ಮತ್ತು ಗಣ್ಯರು ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮದುವೆಗೂ ಮುನ್ನ ನಡೆಯುವ ಸಂಪ್ರದಾಯಿಕ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿದೆ ಎಂಬ ಮಾತುಗಳಿವೆ. ಆದರೆ ಈ ಕುರಿತು ಸಚಿನ್ ತೆಂಡೂಲ್ಕರ್ ಕುಟುಂಬದಿಂದ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರಬಂದಿಲ್ಲ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದ ಕಾರ್ಯಕ್ರಮಗಳನ್ನು ಹೆಚ್ಚು ಪ್ರಚಾರವಿಲ್ಲದೆ, ಸರಳವಾಗಿ ನಡೆಸಿಕೊಳ್ಳುವವರಾಗಿದ್ದಾರೆ. ಇದಕ್ಕೆ ಉದಾಹರಣೆಯಾಗಿ 2025ರ ಆಗಸ್ಟ್‌ನಲ್ಲಿ ನಡೆದ ಅರ್ಜುನ್ ಅವರ ನಿಶ್ಚಿತಾರ್ಥವೂ ಬಹಿರಂಗವಾಗದೇ, ನಂತರ ಮಾತ್ರ ಅಧಿಕೃತ ಮಾಹಿತಿ ಹೊರಬಂದಿತ್ತು.
ಅರ್ಜುನ್ ಅವರ ಭಾವಿ ಪತ್ನಿ ಸಾನಿಯಾ ಚಾಂದೋಕ್ ಮುಂಬೈ ಮೂಲದ ಖ್ಯಾತ ಉದ್ಯಮಿ ಕುಟುಂಬದವರು. ಅವರು ಗ್ರಾವಿಸ್ ಗ್ರೂಪ್ ಸ್ಥಾಪಕ ರವಿ ಘಾಯಿ ಅವರ ಮೊಮ್ಮಗಳು. ಜೊತೆಗೆ ಸಾನಿಯಾ ಅವರು ‘ಮಿಸ್ಟರ್ ಪಾವ್ಸ್’ ಎಂಬ ಲಕ್ಸುರಿ ಪೆಟ್ ಸ್ಪಾ ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿಯಾಗಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನವೇ ಅರ್ಜುನ್ ತೆಂಡೂಲ್ಕರ್ ಮದುವೆಯಾಗಲಿದ್ದಾರೆ. ಈ ಬಾರಿ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದು, ಮುಂಬೈ ಇಂಡಿಯನ್ಸ್‌ನಿಂದ ಲಕ್ನೋಗೆ ವರ್ಗಾವಣೆಗೊಂಡಿದ್ದಾರೆ. 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡುವ ಮೂಲಕ ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು.






