---Advertisement---

ಜಾಹೀರಾತಿಲ್ಲದೇ ವಿಶ್ವದಾದ್ಯಂತ ಹೆಸರು ಮಾಡಿದ ರಮ್: ಓಲ್ಡ್ ಮಂಕ್ ಹುಟ್ಟಿದ ರೋಚಕ ಕಥೆ…

On: January 6, 2026 3:01 PM
Follow Us:
---Advertisement---

ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ರಮ್ ಬ್ರಾಂಡ್ ಓಲ್ಡ್ ಮಂಕ್ ಹಿಂದೆ ಒಂದು ವಿಶೇಷ ಕಥೆ ಅಡಗಿದೆ. ಸಾಮಾನ್ಯ ಮದ್ಯ ಬ್ರಾಂಡ್ ಅಲ್ಲದೆ, ಇದು ಭಾರತೀಯರ ಭಾವನೆಗಳಿಗೆ ಬೆಸೆದುಕೊಂಡಿರುವ ಹೆಸರಾಗಿದೆ. ಈ ರಮ್ ಬ್ರಾಂಡ್ ಹುಟ್ಟಿದ ಹಿನ್ನಲೆ ತಿಳಿದರೆ ನಿಜಕ್ಕೂ ಕುತೂಹಲ ಹುಟ್ಟಿಸುತ್ತದೆ.

ಇದನ್ನು ಓದಿ: ಮಕ್ಕಳ ಭವಿಷ್ಯಕ್ಕೆ ಭದ್ರ ಉಳಿತಾಯ: ಎಲ್‌ಐಸಿಯ ಜೀವನ್ ತರುಣ್ ಯೋಜನೆ

ಭಾರತದ ಅತ್ಯಂತ ಪ್ರಸಿದ್ಧ ರಮ್ ಬ್ರಾಂಡ್ ಓಲ್ಡ್ ಮಂಕ್ ಅನ್ನು ಸ್ಥಾಪಿಸಿದವರು ವೇದ್ ರತನ್ ಮೋಹನ್. ಅವರು 1954ರಲ್ಲಿ ಈ ಬ್ರಾಂಡ್‌ಗೆ ಚಾಲನೆ ನೀಡಿದರು. ಆದರೆ ‘ಓಲ್ಡ್ ಮಂಕ್’ ಎಂಬ ಹೆಸರಿನ ಹಿಂದೆ ಇರುವ ಕಥೆ ಇನ್ನೂ ಹೆಚ್ಚು ಆಸಕ್ತಿದಾಯಕವಾಗಿದೆ.

ಇದನ್ನು ಓದಿ: ಮದ್ಯದ ಚಟಕ್ಕೆ ಹುಟ್ಟಿಸಿದ ಮಗನ ಬಲಿ ಪಡೆದ ತಂದೆ..!

ಈ ರಮ್‌ಗೆ ‘ಓಲ್ಡ್ ಮಂಕ್’ ಎಂಬ ಹೆಸರು ಯುರೋಪಿನ ಸನ್ಯಾಸಿಗಳಿಂದ ಪ್ರೇರಣೆಯಾಗಿ ಬಂದದ್ದು ಎನ್ನಲಾಗುತ್ತದೆ.ಆ ಕಾಲದಲ್ಲಿ ಯುರೋಪಿಯನ್ ಮಂಕ್‌ಗಳು ಅತ್ಯುತ್ತಮ ಗುಣಮಟ್ಟದ ಮದ್ಯ ತಯಾರಿಸುವುದರಲ್ಲಿ ಪ್ರಸಿದ್ಧರಾಗಿದ್ದರು.

ರಹಸ್ಯ ಮಸಾಲೆಗಳ ಮಿಶ್ರಣದೊಂದಿಗೆ, ಓಕ್ ಮರದ ಪೆಟ್ಟಿಗೆಯಲ್ಲಿ ಸುಮಾರು ಏಳು ವರ್ಷಗಳ ಕಾಲ ಮಾಗಿಸಿ ತಯಾರಿಸಲಾದ ಡಾರ್ಕ್ ರಮ್ ಇದಾಗಿತ್ತು. ಯುರೋಪಿನ ಸನ್ಯಾಸಿಗಳಿಂದ ಈ ಮದ್ಯ ತಯಾರಿಸುವ ಶೈಲಿಯನ್ನು ಕಲಿತ ವೇದ್ ರತನ್ ಮೋಹನ್, ಅವರ ಗೌರವಕ್ಕಾಗಿ ಈ ರಮ್‌ಗೆ ಓಲ್ಡ್ ಮಂಕ್ ಎಂದು ಹೆಸರಿಟ್ಟರು ಎನ್ನುವ ಮಾಹಿತಿ ಲಭ್ಯವಿದೆ.

ಯುರೋಪಿಯನ್ ಸನ್ಯಾಸಿಗಳ ಮದ್ಯ ತಯಾರಿಕೆಯ ಪರಂಪರೆ, ಗುಣಮಟ್ಟ ಮತ್ತು ಶಿಸ್ತುಗೆ ಗೌರವ ಸಲ್ಲಿಸುವ ಉದ್ದೇಶದಿಂದ ‘ಓಲ್ಡ್’ ಎಂಬ ಪದವನ್ನು ಸೇರಿಸಿ ಈ ಬ್ರಾಂಡ್‌ಗೆ ವಿಶೇಷ ಗುರುತು ನೀಡಲಾಯಿತು.

ಓಲ್ಡ್ ಮಂಕ್ ಬಾಟಲಿಯ ಮೇಲಿರುವ ಮುಖ ನಿಜವಾದ ಸನ್ಯಾಸಿಯನ್ನು ಪ್ರತಿನಿಧಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರ ಪ್ರಕಾರ ಅದು ಈ ರಮ್‌ನ ಮೂಲಕ್ಕೆ ಕಾರಣರಾದ ಎಚ್.ಜಿ. ಮೀಕಿನ್ ಅವರನ್ನು ಸೂಚಿಸುತ್ತದೆ ಎನ್ನಲಾಗುತ್ತದೆ. 1970ರಲ್ಲಿ ವೇದ್ ರತನ್ ಮೋಹನ್ ನಿಧನರಾದ ಬಳಿಕ, ಅವರ ಸಹೋದರ ಬ್ರಿಗೇಡಿಯರ್ ಕಪಿಲ್ ಮೋಹನ್ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ವಿಶೇಷವೆಂದರೆ, ಅವರು ತಮ್ಮ ಜೀವನದಲ್ಲಿ ಒಂದೇ ಒಂದು ಸಿಪ್ ಮದ್ಯವೂ ಕುಡಿಯದ ವ್ಯಕ್ತಿಯಾಗಿದ್ದರು.

ಮದ್ಯ ಸೇವಿಸದ ವ್ಯಕ್ತಿಯಾಗಿದ್ದರೂ, ಕಪಿಲ್ ಮೋಹನ್ ಯಾವುದೇ ಜಾಹೀರಾತು ಮಾಡದೆ ಓಲ್ಡ್ ಮಂಕ್ ಬ್ರಾಂಡ್ ಅನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಿದರು. ಅವರ ನೇತೃತ್ವದಲ್ಲಿ ಈ ಬ್ರಾಂಡ್ ಮನೆ ಮಾತಾಗತೊಡಗಿತು.
2000ರ ಆರಂಭದ ವೇಳೆಗೆ ಓಲ್ಡ್ ಮಂಕ್ ಭಾರತದಲ್ಲೇ ಅತಿಹೆಚ್ಚು ಮೆಚ್ಚುಗೆ ಪಡೆದ ರಮ್ ಬ್ರಾಂಡ್ ಆಗಿ ಹೊರಹೊಮ್ಮಿತು. ಇಂದು ಈ ಬ್ರಾಂಡ್ ವಿವಿಧ ರುಚಿಗಳು ಮತ್ತು ಬೆಲೆ ಶ್ರೇಣಿಗಳಲ್ಲಿ ಲಭ್ಯವಿದೆ.

ಪ್ರಸ್ತುತ ಓಲ್ಡ್ ಮಂಕ್ 22ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಆಗುತ್ತಿದೆ. ಇದರ ರಫ್ತು ಮಾರುಕಟ್ಟೆಯ ಮೌಲ್ಯ ಸುಮಾರು 10.3 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಯಾವುದೇ ದೊಡ್ಡ ಜಾಹೀರಾತುಗಳಿಲ್ಲದೇ ಕೇವಲ ಜನರ ನಂಬಿಕೆ ಮತ್ತು ಮದ್ಯಪ್ರಿಯರ ಪ್ರೀತಿಯ ಮೇಲೆ ನಿರ್ಮಾಣವಾದ ಬ್ರಾಂಡ್ ಇದಾಗಿದೆ. ಭಾರತೀಯರು ತಮ್ಮ ಮೆಚ್ಚಿನ ರಮ್ ಬ್ರಾಂಡ್‌ನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಓಲ್ಡ್ ಮಂಕ್ ಅತ್ಯುತ್ತಮ ಉದಾಹರಣೆ. 

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

2 thoughts on “ಜಾಹೀರಾತಿಲ್ಲದೇ ವಿಶ್ವದಾದ್ಯಂತ ಹೆಸರು ಮಾಡಿದ ರಮ್: ಓಲ್ಡ್ ಮಂಕ್ ಹುಟ್ಟಿದ ರೋಚಕ ಕಥೆ…”

Leave a Comment