---Advertisement---

ನಟ ಯಶ್ ತಾಯಿ ಪುಷ್ಪಾ ಮನೆ ಎದುರು ಜೆಸಿಬಿ ಕಾರ್ಯಾಚರಣೆ – ಕಾಂಪೌಂಡ್ ತೆರವು

On: January 4, 2026 8:06 AM
Follow Us:
---Advertisement---

ಹಾಸನದ ವಿದ್ಯಾನಗರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅವರ ಮನೆ ಪಕ್ಕದ ಸೈಟ್ ಸಂಬಂಧಿಸಿದಂತೆ ವಿವಾದ ಉಂಟಾಗಿದೆ. ಪಕ್ಕದ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸಲಾಗಿದೆ.

ಇದನ್ನು ಓದಿ: ಯಾವ ದಿಕ್ಕಿನಲ್ಲಿ ಮಲಗಿದರೆ ಒಳ್ಳೆಯದು? ಅದರ ಹಿಂದಿನ ವೈಜ್ಞಾನಿಕ ಕಾರಣ ಏನು?

ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಸೈಟ್‌ಗೆ ಅಕ್ರಮವಾಗಿ ಕಾಂಪೌಂಡ್ ಹಾಕಲಾಗಿದೆ ಎಂದು ಅವರ ಸಂಬಂಧಿ ದೇವರಾಜ್ ಆರೋಪಿಸಿ ಹಾಸನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಹಾಸನ ಹಿರಿಯ ಜೆಎಂಎಫ್‌ಸಿ ನ್ಯಾಯಾಲಯ ದೇವರಾಜ್ ಪರವಾಗಿ ಆದೇಶ ನೀಡಿದೆ.

ನ್ಯಾಯಾಲಯದಿಂದ ಹಲವಾರು ಬಾರಿ ಸಮನ್ಸ್ ಜಾರಿಯಾದರೂ ಪುಷ್ಪಾ ಅವರು ಕೋರ್ಟ್‌ಗೆ ಹಾಜರಾಗದೇ, ಅಗತ್ಯ ದಾಖಲೆಗಳನ್ನು ಸಲ್ಲಿಸದ ಹಿನ್ನೆಲೆಯಲ್ಲಿ ದೇವರಾಜ್ ಪರ ತೀರ್ಪು ನೀಡಲಾಗಿದೆ ಎನ್ನಲಾಗಿದೆ. ಕೋರ್ಟ್ ಆದೇಶದಂತೆ ಜಾಗ ಖಾಲಿ ಮಾಡುವಂತೆ ದೇವರಾಜ್ ಮನವಿ ಮಾಡಿದರೂ ಸ್ಪಂದನೆ ಸಿಗದ ಕಾರಣ, ಇಂದು ಬೆಳಗ್ಗೆ ಮಾಲೀಕರಿಂದ ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸಲಾಗಿದೆ. ಸುಮಾರು 1,500 ಚದರ ಅಡಿ ಪ್ರದೇಶದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಲಾಗಿತ್ತು ಎಂದು ದೇವರಾಜ್ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ ಅವರು, ತಮ್ಮ ಬಳಿ ಎಲ್ಲಾ ದಾಖಲೆಗಳು ಸರಿಯಾಗಿದ್ದು ಯಾವುದೇ ಒತ್ತುವರಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಪೌಂಡ್ ತೆರವುಗೊಳಿಸಿರುವ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಈ ಕುರಿತು ಪುಷ್ಪಾ ಪರ ವಕೀಲ ಸಂಜಯ್ ಅವರು ಸಹ ನ್ಯಾಯಾಂಗ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

Join WhatsApp

Join Now

RELATED POSTS

1 thought on “ನಟ ಯಶ್ ತಾಯಿ ಪುಷ್ಪಾ ಮನೆ ಎದುರು ಜೆಸಿಬಿ ಕಾರ್ಯಾಚರಣೆ – ಕಾಂಪೌಂಡ್ ತೆರವು”

Comments are closed.