ಬಿಗ್‌ಬಾಸ್ ಕನ್ನಡ–12 ಸ್ಪರ್ಧಿಗಳಲ್ಲೊಬ್ಬರಾದ ಗಾಯಕ ಮಾಳು ನಿಪನಾಳ ಅವರು ದೊಡ್ಮನೆಯಿಂದ ಹೊರಬಂದ ಬಳಿಕ ನಿರಂತರವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಶೋದಿಂದ ಎಲಿಮಿನೇಟ್ ಆದ ನಂತರ ಒಂದಾದ ಮೇಲೊಂದಾಗಿ ಸಂದರ್ಶನ ನೀಡುತ್ತಿರುವ ಮಾಳು, ಕೆಲ ಹೇಳಿಕೆಗಳ ಮೂಲಕ ಗಿಲ್ಲಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.
ಇದನ್ನು ಓದಿ: 2026 ರಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾಗಳು
ಅವರ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವರ ಕಿಡಿಕಾರಿಗೂ ಕಾರಣವಾಗಿದೆ.
ಇತ್ತೀಚೆಗೆ ಮಾತನಾಡಿದ ಮಾಳು ನಿಪನಾಳ, “ಈ ಬಾರಿ ಬಿಗ್‌ಬಾಸ್‌ನಲ್ಲಿ ಯಾರೇ ಗೆದ್ದರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಹೇಳುವ ಮೂಲಕ ಎಲ್ಲ ಸ್ಪರ್ಧಿಗಳ ಮೇಲೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
“ನಾನು ಹೊರ ಬಂದ ದಿನ ಉತ್ತರ ಕರ್ನಾಟಕವೇ ಕಣ್ಣೀರಿಟ್ಟಿದೆ. ಶೋದಲ್ಲಿ ಸರಿಯಾಗಿ ಆಟ ಆಡದವರನ್ನೇ ಉಳಿಸಿಕೊಂಡು ಹೋಗಲಾಗುತ್ತಿದೆ” ಎಂಬ ಅವರ ಹೇಳಿಕೆಗಳು ಸಾಕಷ್ಟು ವಿವಾದ ಸೃಷ್ಟಿಸಿವೆ. ಈ ಮಾತುಗಳಿಗೆ ಪ್ರತಿಕ್ರಿಯೆಯಾಗಿ ಅನೇಕರು ಮಾಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮಾಳು ನಿಪನಾಳ ಅವರು ಅಪಾರ ಆಸ್ತಿ ಹೊಂದಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ತಮ್ಮ ಸಂಪತ್ತಿನ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. “ನಾನು ದುಡ್ಡು ಸಂಪಾದಿಸಿದ್ದೇ ನಿಜ, ಆದರೆ ಕಳೆದುಕೊಂಡದ್ದು ಅದಕ್ಕಿಂತ ಹೆಚ್ಚಾಗಿದೆ. ಒಂದು ದೊಡ್ಡ ಸಮಸ್ಯೆಯಿಂದಾಗಿ ಎಲ್ಲವೂ ಕೈ ತಪ್ಪಿತು. ಅದರಿಂದ ನಾನು ಏನನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೆಸರು ಕೆಡಿಸಿಕೊಳ್ಳುವಂತಹ ಪರಿಸ್ಥಿತಿ ಎದುರಿಸಬೇಕಾಯಿತು. ಲಾಭವೂ ಮಾಡಿಕೊಂಡಿದ್ದೇನೆ, ಲಾಸ್ ಕೂಡ ಅನುಭವಿಸಿದ್ದೇನೆ” ಎಂದು ನೇರವಾಗಿ ಹೇಳಿದ್ದಾರೆ.
ಇನ್ನು ಬಿಗ್‌ಬಾಸ್ ಮನೆಯಿಂದ ಇಷ್ಟು ಬೇಗ ಹೊರಬಂದಿರುವುದಕ್ಕೆ ಮಾಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. “ನಾನು ಇಷ್ಟು ಶೀಘ್ರದಲ್ಲಿ ಔಟ್ ಆಗುವ ಸ್ಪರ್ಧಿಯಲ್ಲ. ನಾನು ಯಾಕೆ ಹೊರ ಬಂದೆ ಅನ್ನೋದು ಇಂದಿಗೂ ನನಗೆ ಸ್ಪಷ್ಟವಾಗಿಲ್ಲ. ನನ್ನ ಅಭಿಮಾನಿಗಳು ನನ್ನನ್ನು ಉಳಿಸಲು ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ಆದರೂ ನಾನು ಹೊರ ಹೋಗಬೇಕಾಯಿತು. ನಾನು ಯಾವ ತಪ್ಪು ಮಾಡಿದೆ ಅನ್ನೋ ಪ್ರಶ್ನೆ ನನಗೂ, ನನ್ನ ಅಭಿಮಾನಿಗಳಿಗೂ ಇನ್ನೂ ಕಾಡುತ್ತಲೇ ಇದೆ” ಎಂದು ಹೇಳುವ ಮೂಲಕ ಶೋ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







1 thought on ““ಏನನ್ನೂ ಉಳಿಯಲಿಲ್ಲಾ..ಹೆಸರು ಕೆಡಿಸಿಕೊಳ್ಳುವಂತಹ ಪರಿಸ್ಥಿತಿ ಎದುರಿಸಬೇಕಾಯಿತು”: ಮಾಳು ನಿಪ್ನಲ್ ರ ಈ ಹೇಳಿಕೆಗೆ ಕಾರಣ ಕೇಳಿದ್ರೆ ಶಾಕ್!!”