---Advertisement---

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಪರಾರಿಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಬುರ್ಕಾ ವೇಷದಲ್ಲಿ ಅರೆಸ್ಟ್

On: December 31, 2025 7:39 PM
Follow Us:
---Advertisement---

ಧೋಲ್‌ಪುರ (ರಾಜಸ್ಥಾನ): ಕೆಲಸ ಕೊಡಿಸುವುದಾಗಿ ನಂಬಿಸಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಉಚ್ಚಾಟಿತ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಆರೋಪಿ ಬುರ್ಕಾ ಧರಿಸಿ ಮಹಿಳೆಯ ವೇಷದಲ್ಲಿದ್ದನು ಎಂಬುದು ಬೆಳಕಿಗೆ ಬಂದಿದೆ.

ಇದನ್ನು ಓದಿ: ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಿದ ರೈತಾ ಸೇವನೆ; ಗ್ರಾಮದಲ್ಲಿ 200 ಮಂದಿಗೆ ರೇಬೀಸ್ ಲಸಿಕೆ

ಪೊಲೀಸರು ನೀಡಿದ ಮಾಹಿತಿಯಂತೆ, ಬಂಧಿತ ಆರೋಪಿ ರಾಮ್ ಭರೋಸಿ ಅಲಿಯಾಸ್ ರಾಜೇಂದ್ರ ಸಿಸೋಡಿಯಾ. ಡಿಸೆಂಬರ್‌ 15ರಂದು ಬಸೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈತ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸಹೋದರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ನಂತರ ಬಾಲಕಿಯ ಸಹೋದರನನ್ನು ಮಾರುಕಟ್ಟೆಗೆ ಕಳುಹಿಸಿ, ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಂಗ್ವಾನ್ ತಿಳಿಸಿದ್ದಾರೆ. ಬಾಲಕಿ ಕಿರುಚಾಡುತ್ತಿದ್ದಂತೆ ಸ್ಥಳೀಯರು ಧಾವಿಸಿದಾಗ, ಆರೋಪಿ ಪರಾರಿಯಾಗಿದ್ದಾನೆ.

ಈ ಕುರಿತು ಸಂತ್ರಸ್ತೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ ಆಗ್ರಾ, ಲಕ್ನೋ, ಗ್ವಾಲಿಯರ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಚರಿಸಿದ್ದಾನೆ. ಹಲವು ಬಾರಿ ಪೊಲೀಸರು ದಾಳಿ ನಡೆಸಿದರೂ ತಪ್ಪಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಆತನ ಬಂಧನಕ್ಕೆ ₹10,000 ಬಹುಮಾನ ಘೋಷಿಸಲಾಗಿತ್ತು.

ಕೊನೆಗೆ ಕೊತ್ವಾಲಿ ಪೊಲೀಸ್ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್ ಶಿವಗಣೇಶ್ ನೇತೃತ್ವದ ತಂಡವು ಉತ್ತರ ಪ್ರದೇಶದ ವೃಂದಾವನದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ.

ಮಹಿಳೆ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ:

ಪೊಲೀಸರ ಪ್ರಕಾರ, ಆರೋಪಿ ಕೆಲವೊಮ್ಮೆ ಟ್ರ್ಯಾಕ್‌ಸೂಟ್ ಅಥವಾ ಜಾಕೆಟ್ ಧರಿಸಿ ವಿಐಪಿಯಂತೆ ನಟಿಸುತ್ತಿದ್ದ. ಕೆಲ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಯಂತೆ ತಿರುಗಾಡುತ್ತಿದ್ದನು. ವೃಂದಾವನದಲ್ಲಿ ಬುರ್ಕಾ ಧರಿಸಿ, ಲಿಪ್‌ಸ್ಟಿಕ್ ಹಾಕಿಕೊಂಡು ಮಹಿಳೆಯ ವೇಷದಲ್ಲಿದ್ದಾಗ ಬಂಧನಕ್ಕೊಳಗಾಗಿದ್ದಾನೆ.

ಇದನ್ನು ಓದಿ: ಅದೃಷ್ಟ ಅಂದ್ರೆ ಇದೇ ! 7 ರೂಪಾಯಿ ಲಾಟರಿ ಪಡೆದು 1 ಕೋಟಿ ರೂ. ಗೆದ್ದ ರೈತ

ಪೋಕ್ಸೋ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಆರೋಪಿ, ಈ ಹಿಂದೆ ರಾಜಸ್ಥಾನ ಸಶಸ್ತ್ರ ಕಾನ್‌ಸ್ಟೇಬ್ಯುಲರಿ (ಆರ್‌ಎಸಿ)ಯ ಕಾನ್‌ಸ್ಟೇಬಲ್ ಆಗಿದ್ದು, ನಂತರ ಸೇವೆಯಿಂದ ವಜಾಗೊಂಡಿದ್ದಾನೆ ಎಂದು ಎಸ್‌ಪಿ ವಿಕಾಸ್ ಸಂಗ್ವಾನ್ ಮಾಹಿತಿ ನೀಡಿದ್ದಾರೆ.

Join WhatsApp

Join Now

RELATED POSTS

1 thought on “16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಪರಾರಿಯಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಬುರ್ಕಾ ವೇಷದಲ್ಲಿ ಅರೆಸ್ಟ್”

Comments are closed.