---Advertisement---

ಅದೃಷ್ಟ ಅಂದ್ರೆ ಇದೇ ! 7 ರೂಪಾಯಿ ಲಾಟರಿ ಪಡೆದು 1 ಕೋಟಿ ರೂ. ಗೆದ್ದ ರೈತ

On: December 30, 2025 2:16 PM
Follow Us:
---Advertisement---

ಪಂಜಾಬ್: ಪಂಜಾಬ್‌ನ ರೈತನೊಬ್ಬನ ಅದೃಷ್ಟ ಒಂದು ಕ್ಷಣದಲ್ಲಿ ಜೀವನವನ್ನೇ ಬದಲಿಸಿದೆ. ಕೇವಲ 7 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿದ್ದ ರೈತರಿಗೆ 1 ಕೋಟಿ ರೂಪಾಯಿ ಬಹುಮಾನ ದೊರೆತಿದೆ.

ಫತೇಘರ್ ಸಾಹಿಬ್ ಜಿಲ್ಲೆಯ ಮಜ್ರಿ ಸೋಧಿಯಾನ್ ಗ್ರಾಮದ ನಿವಾಸಿ ಬಲ್ಕರ್ ಸಿಂಗ್, ಕಳೆದ ಹತ್ತು ವರ್ಷಗಳಿಂದ ಸಿರ್ಹಿಂದ್‌ನಲ್ಲಿರುವ ಒಂದೇ ಲಾಟರಿ ಸ್ಟಾಲ್‌ನಿಂದ ನಿರಂತರವಾಗಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಇತರೆ ದಿನಗಳಂತೆ ಸಾಮಾನ್ಯ ಟಿಕೆಟ್ ಎಂದುಕೊಂಡಿದ್ದ ಅವರು ಖರೀದಿಸಿದ ಟಿಕೆಟ್ ಡಿಸೆಂಬರ್ 29ರಂದು ನಡೆದ ಡ್ರಾದಲ್ಲಿ 1 ಕೋಟಿ ರೂ. ಬಹುಮಾನ ಗೆದ್ದಿದೆ.

ಬಲ್ಕರ್ ಸಿಂಗ್ ಗೆಲುವಿನ ಸುದ್ದಿ ಗ್ರಾಮದಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಧೋಲ್ ಬೀಟ್‌ಗಳಿಗೆ ನೃತ್ಯ, ಸಿಹಿತಿಂಡಿಗಳ ವಿತರಣೆ ಮತ್ತು ಸ್ಥಳೀಯರಿಂದ ಹಾರ ಹಾಕುವ ಮೂಲಕ ಭರ್ಜರಿ ಆಚರಣೆ ನಡೆಯಿತು. ಈ ಸಂಭ್ರಮದ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಮಾನ್ಯ ರೈತ ಜೀವನ ನಡೆಸುತ್ತಿರುವ ಬಲ್ಕರ್ ಸಿಂಗ್, ಇದಕ್ಕೂ ಮೊದಲು ಒಮ್ಮೆ 90,000 ರೂ.ಗಳ ಸಣ್ಣ ಬಹುಮಾನ ಗೆದ್ದ ಅನುಭವವನ್ನೂ ಹೊಂದಿದ್ದಾರೆ. ಕೃಷಿಯೇ ಅವರ ಜೀವನೋಪಾಯವಾಗಿದ್ದು, ಅದರಿಂದಲೇ ಕುಟುಂಬವನ್ನು ಪೋಷಿಸುತ್ತಿದ್ದಾರೆ.

ತಮ್ಮ ಗೆಲುವನ್ನು ದೇವರ ಆಶೀರ್ವಾದವೆಂದು ಬಣ್ಣಿಸಿದ ಅವರು, ಈ ಹಣವನ್ನು ಕೃಷಿ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಬಹುಮಾನ ಮೊತ್ತದ ಸುಮಾರು 10 ಶೇಕಡಾವನ್ನು ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಮೀಸಲಿಡುವುದಾಗಿ ಹೇಳಿದ್ದಾರೆ.

ಈ ಲಾಟರಿ ಟಿಕೆಟ್ ಮಾರಾಟ ಮಾಡಿದ ಸ್ಟಾಲ್ ಮಾಲೀಕ ಮುಖೇಶ್ ಕುಮಾರ್ ಬಿಟ್ಟು, ತಾವು 45 ವರ್ಷಗಳಿಂದ ಲಾಟರಿ ವ್ಯವಹಾರದಲ್ಲಿರುವುದಾಗಿ ತಿಳಿಸಿದರು. ಈವರೆಗೆ ಅವರ ಸ್ಟಾಲ್ ಮೂಲಕ ಗರಿಷ್ಠ 10 ಲಕ್ಷ ರೂ.ವರೆಗೆ ಬಹುಮಾನಗಳು ಬಂದಿದ್ದರೂ, 1 ಕೋಟಿ ರೂ. ಬಹುಮಾನ ಗೆದ್ದಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಅವರು ಹೇಳಿದರು.

ಡಿಸೆಂಬರ್ 24ರಂದು ಲಾಟರಿ ಡ್ರಾ ನಡೆಯಿದ್ದು, ಅದೇ ದಿನ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಸಿಕ್ಕಿಂ ರಾಜ್ಯ ಲಾಟರಿಯನ್ನು ಪ್ರತಿದಿನ ಮಧ್ಯಾಹ್ನ 1 ಗಂಟೆ, ಸಂಜೆ 6 ಗಂಟೆ ಮತ್ತು ರಾತ್ರಿ 8 ಗಂಟೆಗೆ ನಡೆಸಲಾಗುತ್ತದೆ. ಪ್ರತಿ ಲಾಟರಿ ಟಿಕೆಟ್‌ಗೆ 7 ರೂಪಾಯಿ ಬೆಲೆ ಇದ್ದು, ಕೆಲವರು ಸಂಪೂರ್ಣ ಲಾಟರಿ ಪುಸ್ತಕವನ್ನೂ ಖರೀದಿಸುತ್ತಾರೆ, ಇದರ ಬೆಲೆ ಸುಮಾರು 140 ರೂಪಾಯಿ.

Join WhatsApp

Join Now

RELATED POSTS