---Advertisement---

ಎಲಿಮಿನೇಟ್‌ ಆಗಿದ್ದಕ್ಕೆ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ, ಬಿಗ್‌ಬಾಸ್‌ ಯಾರೇ ಗೆದ್ರೂ ನಾನು ಒಪ್ಪಲ್ಲ: ಮಾಳು

On: December 29, 2025 4:35 PM
Follow Us:
---Advertisement---

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ನಡೆದ ಅಚ್ಚರಿ ಎಲಿಮಿನೇಷನ್‌ನಲ್ಲಿ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಹೊರಬಿದ್ದಿದ್ದಾರೆ. ಈ ಸೀಸನ್‌ನಲ್ಲಿನ ಅತಿ ಕಡಿಮೆ ಮಾತನಾಡುವ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಮಾಳು, ಇತ್ತೀಚೆಗಷ್ಟೇ ಫ್ಯಾಮಿಲಿ ರೌಂಡ್‌ನಲ್ಲಿ ವಿಶೇಷ ಹೇರ್‌ಸ್ಟೈಲ್‌ ಮಾಡಿಕೊಂಡು ಕುಟುಂಬದೊಂದಿಗೆ ಖುಷಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಅದರ ಕೆಲವೇ ದಿನಗಳಲ್ಲಿ ಅವರು ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಿದ್ದಾರೆ.
ತಮ್ಮ ಎಲಿಮಿನೇಷನ್‌ ಬಗ್ಗೆ ಮಾಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ನಾನು ಹೊರ ಬಂದಿರುವುದಕ್ಕೆ ಇಡೀ ಉತ್ತರ ಕರ್ನಾಟಕವೇ ಕಣ್ಣೀರಿಡುತ್ತಿದೆ. ಗಿಲ್ಲಿ ಅಲ್ಲ, ಬೇರೆ ಯಾರೇ ಬಿಗ್‌ಬಾಸ್‌ ಗೆದ್ದರೂ ನನಗೆ ಒಪ್ಪಿಗೆ ಇಲ್ಲ” ಎಂದು ಹೇಳಿದ್ದಾರೆ.
ಬಿಗ್‌ಬಾಸ್‌ ಮನೆಯಿಂದ ಹೊರಬಂದ ಬಳಿಕ ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡಿರುವ ಮಾಳು ನಿಪನಾಳ, “ನಾನು ಫಿನಾಲೆ ಮಾತ್ರವಲ್ಲ, ನಾನೇ ಟ್ರೋಫಿ ಗೆಲ್ಲುತ್ತೇನೆ ಎಂಬ ಭರವಸೆ ನನಗಿತ್ತು. ನನಗೆ ತಾಳ್ಮೆಯೂ ಇತ್ತು, ಆಟ ಆಡುವ ಛಲವೂ ಇತ್ತು. ದೇವರ ಆಶೀರ್ವಾದ, ಜನರ ಬೆಂಬಲ ಎಲ್ಲವೂ ನನ್ನೊಂದಿಗೆ ಇತ್ತು. ಮೊದಲಿಗೆ ಎರಡು ವಾರ ಮಾತ್ರ ಇರಬಹುದು ಎಂದುಕೊಂಡಿದ್ದೆ. ಆದರೆ ಜನರು 13 ವಾರಗಳವರೆಗೆ ನನ್ನನ್ನು ಉಳಿಸಿದರು. ಇಷ್ಟರವರೆಗೆ ಉಳಿಸಿದ ಜನ ಫೈನಲ್‌ವರೆಗೆ ಉಳಿಸಲ್ಲ ಅಂತ ಹೇಗೆ ನಂಬಬೇಕು?” ಎಂದು ಪ್ರಶ್ನಿಸಿದ್ದಾರೆ.
ತಮ್ಮ ಎಲಿಮಿನೇಷನ್‌ ಬಗ್ಗೆ ಭಾವುಕರಾಗಿ ಮಾತನಾಡಿದ ಮಾಳು, “ನಾನು ಹೊರ ಬಂದ ನಂತರ ನಮ್ಮ ಮನೆಯವರು ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕವೇ ಅಳುತ್ತಿದೆ. ನನ್ನನ್ನು ಪ್ರೀತಿಸುವ ಅನೇಕ ಹೃದಯಗಳು ಕಣ್ಣೀರಿಟ್ಟಿವೆ. ತುಂಬಾ ಜನ ನನ್ನಿಗಾಗಿ ಹರಕೆ ಹೊತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ನನಗೆ ಏನು ಕಡಿಮೆ ಆಯ್ತು? ಯಾಕೆ ನಾನು ಹೊರಗೆ ಬಂದೆ ಅನ್ನೋ ಪ್ರಶ್ನೆ ಕಾಡುತ್ತದೆ” ಎಂದಿದ್ದಾರೆ.
ಗಿಲ್ಲಿ ಕುರಿತು ಪ್ರತಿಕ್ರಿಯಿಸಿದ ಮಾಳು, “ಗಿಲ್ಲಿಯನ್ನು ಪ್ರೀತಿಸುವವರು ಇದ್ದಾರೆ ಅನ್ನೋದರಲ್ಲಿ ಅನುಮಾನ ಇಲ್ಲ. ಅವರು ಕಾಮಿಡಿ ಮಾಡ್ತಾರೆ, ಎಂಟರ್‌ಟೇನ್‌ ಮಾಡ್ತಾರೆ, ಅದು ಒಪ್ಪಿಕೊಳ್ಳುತ್ತೇನೆ. ಆದರೆ ಟಾಸ್ಕ್‌ಗಳಲ್ಲಿ ಅವರು ಆಡಿರುವುದನ್ನು ನಾನು ನೋಡಲೇ ಇಲ್ಲ. ನನ್ನ ವಿಷಯಕ್ಕೆ ಬಂದರೆ ಮಾತನಾಡಲ್ಲ ಅಂದ್ರೂ ಮಾತು, ಕಾಮಿಡಿ ಮಾಡಲ್ಲ ಅಂದ್ರೂ ಮಾತು ಬರುತ್ತೆ. ಹೀಗಾಗಿ ಈಗ ಬಿಗ್‌ಬಾಸ್‌ನಲ್ಲಿ ಯಾರೇ ಗೆದ್ದರೂ ನನಗೆ ಒಪ್ಪಿಗೆ ಇಲ್ಲ” ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಹೊರಗೆ ಜನ ನನಗೆ ಸ್ಪಂದಿಸುವ ರೀತಿ ನೋಡಿದ್ರೆ, ನಾನು ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಇರಬೇಕಿತ್ತು ಅಂತ ಅನಿಸುತ್ತದೆ. ನಾನು ಸರಿಯಾಗಿರಲಿ, ತಪ್ಪಾಗಿರಲಿ—ಜನ ನನ್ನಿಗಾಗಿ ಗೋಳಾಡುವುದನ್ನು ನೋಡಿದಾಗ ಒಳಗಿರುವವರು ಗೆಲ್ಲುವುದನ್ನು ಸುಲಭವಾಗಿ ಒಪ್ಪಲು ಸಾಧ್ಯವಿಲ್ಲ. ನನಗೆ ಫೈಟ್‌ ಮಾಡುವ, ಆಟ ಆಡೋ, ಗೆಲ್ಲೋ ಹಠ ಮತ್ತು ಛಲ ಎಲ್ಲವೂ ಇತ್ತು. ಆದ್ದರಿಂದ ಯಾರೇ ಬಿಗ್‌ಬಾಸ್‌ ಗೆದ್ದರೂ ನನಗೆ ಒಪ್ಪಿಗೆ ಇಲ್ಲ” ಎಂದು ಅಸಮಾಧಾನ ಹೊರಹಾಕಿದ್ದಾರೆ.

Join WhatsApp

Join Now

RELATED POSTS

Leave a Comment