---Advertisement---

ಕಿಬ್ಬೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ಹೋದ 82 ವರ್ಷದ ವೃದ್ಧೆಗೆ ಸ್ಕ್ಯಾನಿಂಗ್ ವರದಿ ನೋಡಿ ಆಘಾತ

On: December 29, 2025 2:24 PM
Follow Us:
---Advertisement---

ವೈದ್ಯಕೀಯ ಲೋಕದಲ್ಲಿ ಕೆಲವೊಂದು ಘಟನೆಗಳು ಅಚ್ಚರಿಗೂ ಮೀರಿದಂತಿರುತ್ತವೆ. ಇಂತಹ ಅಪರೂಪದ ಪ್ರಕರಣವೊಂದು ಕೊಲಂಬಿಯಾದಲ್ಲಿ ಬೆಳಕಿಗೆ ಬಂದಿದೆ. ಗರ್ಭಾಶಯದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 82 ವರ್ಷದ ಮಹಿಳೆಗೆ ಸ್ಕ್ಯಾನಿಂಗ್ ವರದಿ ಭಾರೀ ಆಘಾತವನ್ನುಂಟುಮಾಡಿದೆ.

ವೈದ್ಯರು ಪರೀಕ್ಷೆ ನಡೆಸಿದ ವೇಳೆ ಮಹಿಳೆಯ ಪೆಲ್ವಿಕ್ ಭಾಗದಲ್ಲಿ ‘ಸ್ಟೋನ್ ಬೇಬಿ’ ಅಥವಾ ‘ಲಿಥೋಪೀಡಿಯನ್’ ಎಂದು ಕರೆಯಲಾಗುವ ಕ್ಯಾಲ್ಸಿಫೈ ಆದ ಭ್ರೂಣ ಪತ್ತೆಯಾಗಿದೆ. ಈ ಭ್ರೂಣ ಗರ್ಭಾಶಯದಲ್ಲಿ ಅಲ್ಲದೆ ಹೊಟ್ಟೆಯೊಳಗಿನ ಪೆಲ್ವಿಕ್ ಭಾಗದಲ್ಲಿ, ಸೊಂಟ ಮತ್ತು ಬೆನ್ನುಮೂಳೆಯ ಕೆಳಭಾಗದ ಮೂಳೆಗಳ ನಡುವಿನ ಜಾಯಿಂಟ್‌ನಲ್ಲಿ ಇತ್ತು. ಅಚ್ಚರಿಯ ಸಂಗತಿಯೆಂದರೆ, ಈ ಸ್ಟೋನ್ ಬೇಬಿ ಸುಮಾರು 40 ವರ್ಷಗಳಿಂದ ಮಹಿಳೆಯ ದೇಹದೊಳಗೆ ಇದ್ದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಟೆಲಿಗ್ರಾಫ್ ವರದಿಯ ಪ್ರಕಾರ, ಮಹಿಳೆ ಹಲವು ದಶಕಗಳಿಂದ ಸುಮಾರು ನಾಲ್ಕು ಪೌಂಡ್ ತೂಕದ ಕ್ಯಾಲ್ಸಿಯಂ ಭರಿತ ಭ್ರೂಣವನ್ನು ತನ್ನ ದೇಹದಲ್ಲಿ ಹೊಂದಿದ್ದರೂ, ಅದಿನ ಬಗ್ಗೆ ಯಾವುದೇ ಅರಿವು ಹೊಂದಿರಲಿಲ್ಲ. ಎಕ್ಸ್‌ರೇ ಪರೀಕ್ಷೆಯ ಬಳಿಕವೇ ವೈದ್ಯರಿಗೆ ಈ ಅಪರೂಪದ ಸ್ಥಿತಿ ಬಗ್ಗೆ ತಿಳಿದುಬಂದಿದೆ. ನಂತರ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣವನ್ನು ಯಶಸ್ವಿಯಾಗಿ ಹೊರತೆಗೆದುಕೊಳ್ಳಲಾಗಿದೆ.

ವೈದ್ಯ ಗಾರ್ಸಿ ಅವರ ಪ್ರಕಾರ, ಗರ್ಭಾಶಯದ ಬದಲು ಹೊಟ್ಟೆಯೊಳಗೆ ಗರ್ಭಧಾರಣೆ ಸಂಭವಿಸಿದಾಗ ಮತ್ತು ಗರ್ಭಾವಸ್ಥೆ ವಿಫಲವಾದಾಗ ಈ ರೀತಿಯ ಲಿಥೋಪೀಡಿಯನ್ ರಚನೆಯಾಗುತ್ತದೆ. ಭ್ರೂಣಕ್ಕೆ ಅಗತ್ಯವಾದ ರಕ್ತ ಪೂರೈಕೆ ಸಿಗದಾಗ ಮತ್ತು ದೇಹವು ಅದನ್ನು ಹೊರಹಾಕಲು ಸಾಧ್ಯವಾಗದ ಸಂದರ್ಭಗಳಲ್ಲಿ, ರೋಗನಿರೋಧಕ ವ್ಯವಸ್ಥೆ ಭ್ರೂಣವನ್ನು ಕ್ಯಾಲ್ಸಿಫೈ ಮಾಡಿ ಕಲ್ಲಿನಂತಾಗಿಸುತ್ತದೆ.

ಈ ಪ್ರಕ್ರಿಯೆ ದೇಹವನ್ನು ಸೋಂಕಿನಿಂದ ರಕ್ಷಿಸುವುದಕ್ಕಾಗಿ ನಡೆಯುತ್ತದೆ. ಮೊಣಕಾಲಿನ ಹಳೆಯ ಕಾರ್ಟಿಲೆಜ್ ಕ್ಯಾಲ್ಸಿಫೈ ಆಗುವ ರೀತಿಯಲ್ಲೇ ಈ ಭ್ರೂಣವೂ ಕಲ್ಲಿನ ರೂಪ ಪಡೆಯುತ್ತದೆ. ಹೀಗಾಗಿ ಈ ಸ್ಟೋನ್ ಬೇಬಿ ಹಲವು ವರ್ಷಗಳ ಕಾಲ ಯಾವುದೇ ಲಕ್ಷಣವಿಲ್ಲದೆ ದೇಹದೊಳಗೆ ಉಳಿಯುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಇಂತಹ ಕಿಬ್ಬೊಟ್ಟೆಯ ಗರ್ಭಧಾರಣೆಗಳು ಪ್ರತಿ 10,000 ಗರ್ಭಧಾರಣೆಯಲ್ಲಿ ಒಬ್ಬರಿಗೆ ಮಾತ್ರ ಸಂಭವಿಸುವ ಅಪರೂಪದ ಪ್ರಕರಣವಾಗಿದೆ. ಈ ಘಟನೆ ಸುಮಾರು 13 ವರ್ಷಗಳ ಹಿಂದೆ ನಡೆದಿದ್ದರೂ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು, ಈ ರೀತಿಯೂ ಘಟನೆ ನಡೆಯಬಹುದೇ ಎಂಬ ಪ್ರಶ್ನೆಯೊಂದಿಗೆ ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Join WhatsApp

Join Now

RELATED POSTS

1 thought on “ಕಿಬ್ಬೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ಹೋದ 82 ವರ್ಷದ ವೃದ್ಧೆಗೆ ಸ್ಕ್ಯಾನಿಂಗ್ ವರದಿ ನೋಡಿ ಆಘಾತ”

Comments are closed.