---Advertisement---

ಪತಿಗೆ ಸಂಬಂಧಿಸಿದ ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಗೆ ಬುಟ್ಟಿಗೆ ಹಾಕೊಂಡ ಪೊಲೀಸ್

On: December 28, 2025 8:07 AM
Follow Us:
---Advertisement---

ವಿಜಯಪುರ, ಡಿಸೆಂಬರ್ 27: ಕುಟುಂಬ ಕಲಹದ ಹಿನ್ನೆಲೆಯಲ್ಲಿ ಪತಿ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ದೂರುದಾರರಾದ ಅನುರಾಧಾ ಆಲಮೇಲ್ ಅವರು ತಮ್ಮ ಪತಿಯ ವರ್ತನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಾಯ ಕೋರಿದ್ದರು. ಆದರೆ ದೂರು ವಿಚಾರಣೆ ವೇಳೆ ಠಾಣೆಯ ಎಎಸ್‌ಐ ಮನೋಹರ್ ಕಾಂಚಗಾರ ಅವರು ದೂರು ದಾಖಲಿಸುವ ಬದಲು ಪತಿಯನ್ನು ಠಾಣೆಗೆ ಕರೆಸಿಕೊಂಡು, ನಂತರ ಮಹಿಳೆಯೊಂದಿಗೆ ನಂಬರ್ ಪಡೆದು ವೈಯಕ್ತಿಕವಾಗಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಸಂಬಂಧ ಮಹಿಳೆ ಹಾಗೂ ಪೊಲೀಸ್ ಅಧಿಕಾರಿಯ ನಡುವಿನ ವಾಟ್ಸಾಪ್ ಸಂದೇಶಗಳು ಬಹಿರಂಗಗೊಂಡಿದ್ದು, ಪ್ರಕರಣವು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ವಿಷಯದ ಬಗ್ಗೆ ಗಮನ ಹರಿಸಿದ್ದು, ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಘಟನೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ.

Join WhatsApp

Join Now

RELATED POSTS