ತುಮಕೂರು, ಡಿಸೆಂಬರ್ 20: ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಪ್ರವೀಣ್ ಎಂಬವರು ತಮ್ಮ ಸಾಕು ನಾಯಿ ‘ಖುಷಿ’ಗೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಪ್ರೀತಿಯ ನಾಯಿಯ ಗರ್ಭಧಾರಣೆಯನ್ನು ಸಂಭ್ರಮದಿಂದ ಆಚರಿಸಿದ ಅವರು, ಸುಮಾರು 20 ಸಾವಿರ ರೂಪಾಯಿ ವೆಚ್ಚದಲ್ಲಿ 50 ಕೆಜಿ ಗೀ ರೈಸ್ ಮತ್ತು 50 ಕೆಜಿ ಚಿಕನ್ ಗ್ರೇವಿಯನ್ನು ತಯಾರಿಸಿ, ಸುಮಾರು 500 ಜನರಿಗೆ ಭೋಜನ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮದಲ್ಲಿ ಖುಷಿಗೆ ಹೊಸ ಬಟ್ಟೆ ಧರಿಸಿ, ಹೂವಿನ ಅಲಂಕಾರ ಮಾಡಿ, ಕೇಕ್ ಕಟ್ ಮಾಡುವ ಮೂಲಕ ಸೀಮಂತವನ್ನು ಆಚರಿಸಲಾಯಿತು. ಮಾನವನಂತೆ ಪ್ರೀತಿಯಿಂದ ಶ್ವಾನಕ್ಕೂ ಸೀಮಂತ ನಡೆಸಿದ ಪ್ರವೀಣ್ ಅವರ ಈ ವಿಶಿಷ್ಟ ಶ್ವಾನ ಪ್ರೀತಿ ಇಡೀ ಗ್ರಾಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.






