---Advertisement---

ಬೆಳಗಾವಿ: ಸಂಜೆ 7 ನಂತರ ಮೊಬೈಲ್‌–ಟಿವಿಗೆ ಬ್ರೇಕ್‌!! ಈ ಡಿಜಿಟಲ್ ಡೈಟಾಕ್ಸ್ ಎಂದರೇನು???

On: December 20, 2025 7:39 AM
Follow Us:
---Advertisement---

ಊರಿನಲ್ಲಿ ಸಂಜೆ 7 ಗಂಟೆಯ ನಂತರ ಮೊಬೈಲ್‌ ಹಾಗೂ ಟಿವಿ ಬಳಸುವುದಕ್ಕೆ ಅವಕಾಶವಿಲ್ಲ. ಕೆಲವರಿಗೆ ಇದು ಕಿರಿಕಿರಿಯಂತೆ ಕಂಡರೂ, ಹಲವರಿಗೆ ಈ ಕ್ರಮ ಉತ್ತಮ ನಿರ್ಧಾರವಾಗಿ ತೋರುತ್ತಿದೆ. ಬೆಳಗಾವಿ ಸಮೀಪದ ಹಲಗಾ ಗ್ರಾಮವು ಪ್ರತಿದಿನ ಸಂಜೆ ಎರಡು ಗಂಟೆಗಳ ಕಾಲ ಎಲ್ಲಾ ಡಿಜಿಟಲ್ ಸಾಧನಗಳನ್ನು ಸಂಪೂರ್ಣವಾಗಿ ಆಫ್ ಮಾಡುವ ಡಿಜಿಟಲ್ ಡಿಟಾಕ್ಸ್ ಕ್ರಮವನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಈ ರೀತಿಯ ನಿರ್ಧಾರವನ್ನು ಜಾರಿಗೊಳಿಸಿದ ರಾಜ್ಯದ ಮೊದಲ ಗ್ರಾಮವೆಂದು ಹಲಗಾ ಗುರುತಿಸಿಕೊಂಡಿದೆ.
ಮಕ್ಕಳ ಅಧ್ಯಯನಕ್ಕೆ ಉತ್ತೇಜನ ನೀಡುವುದು ಮತ್ತು ಗ್ರಾಮಸ್ಥರ ನಡುವೆ ನೇರ ಸಂವಹನವನ್ನು ಹೆಚ್ಚಿಸುವ ಉದ್ದೇಶದಿಂದ ಈ ವಿಶಿಷ್ಟ ಕ್ರಮ ಕೈಗೊಳ್ಳಲಾಗಿದೆ.

ಸಮುದಾಯದ ಒಗ್ಗಟ್ಟಿನೊಂದಿಗೆ ಜಾರಿಗೆ ಬಂದ ಈ ನಿಯಮದಂತೆ, ಸಂಜೆ 7 ರಿಂದ ರಾತ್ರಿ 9 ರವರೆಗೆ ದೂರದರ್ಶನ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಸೇರಿದಂತೆ ಎಲ್ಲಾ ಡಿಜಿಟಲ್ ಸಾಧನಗಳನ್ನು ಬಳಕೆ ಮಾಡದೇ ಇಡಲಾಗುತ್ತದೆ. ಸಂಜೆ 7 ಗಂಟೆಗೆ ಸೈರನ್ ಮೊಳಗಿದ ತಕ್ಷಣ ಎಲ್ಲರೂ ತಮ್ಮ ಗ್ಯಾಜೆಟ್‌ಗಳನ್ನು ಆಫ್ ಮಾಡುತ್ತಾರೆ.

ಸುಮಾರು 12 ಸಾವಿರ ಜನಸಂಖ್ಯೆ ಹೊಂದಿರುವ ಹಾಗೂ ಬೆಳಗಾವಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಹಲಗಾ ಗ್ರಾಮದಲ್ಲಿ ಬುಧವಾರದಿಂದ ಈ ಪದ್ಧತಿ ಜಾರಿಯಾಗಿದೆ.

ಸಮೀಪದ ಗ್ರಾಮಗಳಲ್ಲಿ ನಡೆದಿದ್ದ ಇಂತಹದೇ ಪ್ರಯತ್ನಗಳಿಂದ ಪ್ರೇರಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ–ಮಹಾರಾಷ್ಟ್ರ ಗಡಿಭಾಗದ ಅಥಣಿ ತಾಲ್ಲೂಕಿನ ವಡ್ಗಾಂವ್ ಗ್ರಾಮದಲ್ಲಿ, ಕೋವಿಡ್-19 ಕಾಲದಲ್ಲಿ ಹೆಚ್ಚಿದ ಗ್ಯಾಜೆಟ್ ವ್ಯಸನದ ಬಗ್ಗೆ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ, ಮಕ್ಕಳಲ್ಲಿ ಅತಿಯಾದ ಸ್ಕ್ರೀನ್ ಬಳಕೆಯನ್ನು ತಡೆಯಲು ಗ್ರಾಮ ಪಂಚಾಯತ್ ಸಂಜೆ 7ರಿಂದ ರಾತ್ರಿ 9ರವರೆಗೆ ಟಿವಿ ಮತ್ತು ಮೊಬೈಲ್ ಬಳಕೆಯನ್ನು ನಿರ್ಬಂಧಿಸುವ ನಿರ್ಣಯವನ್ನು ಈ ಹಿಂದೆಲೇ ಅಂಗೀಕರಿಸಿತ್ತು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment