ತುಮಕೂರು ಜಿಲ್ಲೆಯಲ್ಲಿ 946 ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ**
ಬೆಂಗಳೂರು: SSLC ಪಾಸಾದ ಮಹಿಳೆಯರಿಗೆ ಖುಷಿ! ತುಮಕೂರು ಜಿಲ್ಲೆಯಲ್ಲಿನ 117 ಅಂಗನವಾಡಿ ಕಾರ್ಯಕರ್ತೆ ಮತ್ತು 829 ಅಂಗನವಾಡಿ ಸಹಾಯಕಿ ಹುದ್ದೆಗಳ ಗೌರವಧನ ಸೇವಾ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾಧಿಕಾರಿಗಳ ಅನುಮೋದನೆಯಂತೆ, ತುಮಕೂರು ಜಿಲ್ಲೆಯ 11 ತಿರು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊಸ ಮಾರ್ಗಸೂಚಿ ಪ್ರಕಾರ ಭರ್ತಿ ಮಾಡಲಾಗುತ್ತಿದೆ.
➡️ ಅರ್ಜಿ ದಿನಾಂಕಗಳು
10-12-2025 ರಿಂದ 09-01-2026 (ಸಂಜೆ 5:30 ರವರೆಗೆ)
➡️ ಆನ್ಲೈನ್ ಅರ್ಜಿ ಸಲ್ಲಿಸಲು
ವೆಬ್ಸೈಟ್: https://karnemakaone.kar.nic.in/abcd/
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಮುಖ್ಯ ಸೂಚನೆಗಳು
ಆನ್ಲೈನ್ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅಭ್ಯರ್ಥಿಗಳು ಮಾರ್ಗಸೂಚಿ/ನಿಬಂಧನೆಗಳನ್ನು ಓದಿ, ಅಗತ್ಯ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. Digilocker ಬಳಸಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆನ್ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು: ಜನನ ಪ್ರಮಾಣ ಪತ್ರ / SSLC ಅಂಕಪಟ್ಟಿ (DOB ಸಹಿತ) ವಿದ್ಯಾರ್ಹತೆಗಿನ ಅಂಕಪಟ್ಟಿ ತಹಶೀಲ್ದಾರರಿಂದ ಪಡೆದ 3 ವರ್ಷಗಳೊಳಗಿನ ವಾಸಸ್ಥಳ ಪ್ರಮಾಣ ಪತ್ರ ಸ್ಥಳೀಯತಾ ದೃಢೀಕರಣ: ಆಧಾರ್, ರೇಷನ್ ಕಾರ್ಡ್, ಮತದಾರರನ್ನು ಗುರುತಿನ ಚೀಟಿ ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ) ಅಂಗವಿಕಲತೆ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ + ಬೋನಸ್ ಅಂಕಗಳು) ವಿಚ್ಛೇದಿತೆಯರಿಗೆ ನ್ಯಾಯಾಲಯದ ವಿಚ್ಛೇದನ ಪ್ರಮಾಣ ಪತ್ರ (+5 ಬೋನಸ್ ಅಂಕಗಳು) ಮಾಜಿ ದೇವದಾಸಿಯರ ಮಕ್ಕಳಿಗೆ ನಿಗಮದಿಂದ ಪಡೆದ ಪ್ರಮಾಣ ಪತ್ರ (+5 ಬೋನಸ್ ಅಂಕಗಳು) ಇಲಾಖಾ ಸುಧಾರಣಾ ಸಂಸ್ಥೆ/ನಿಲಯ ನಿವಾಸಿಗಳ ಪ್ರಮಾಣ ಪತ್ರ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ (+5 ಬೋನಸ್ ಅಂಕಗಳು)
ವಿಧವೆಯರಿಗೆ ವಿಶೇಷ ಆದ್ಯತೆ
ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪ್ರಥಮ ಆದ್ಯತೆ ಇತರ ವಿಧವೆಯರಿಗೆ ಮೂರನೇ ಆದ್ಯತೆ ಮರಣ ಪ್ರಮಾಣಪತ್ರ/ವಿಧವಾ ಪ್ರಮಾಣ ಪತ್ರ ಕಡ್ಡಾಯ ಒಂದೇ ಹುದ್ದೆಗೆ ಇಬ್ಬರು ವಿಧವೆಯರು ಬಂದರೆ ಅಂಕಗಳ ಆಧಾರವಾಗಿ ಆಯ್ಕೆ






