“ಅಮ್ಮಾ, ನಿನ್ನ ಮನಸ್ಸಿಗೆ ನಾನು ಹಲವಾರು ಬಾರಿ ನೋವುಂಟುಮಾಡಿದ್ದೇನೆ, ಕ್ಷಮಿಸು. ಇದು ನನ್ನ ಕೊನೆಯ ತಪ್ಪು. ಈಗ ತೆಗೆದುಕೊಂಡಿರುವ ಈ ತೀರ್ಮಾನಕ್ಕೂ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಶಾಲೆಯಲ್ಲಿ ನಡೆದ ಸಂಗತಿಯನ್ನು ಎದುರಿಸಲು ನನಗೆ ಬೇರೆ ದಾರಿ ಕಾಣಲಿಲ್ಲ,” ಎಂದು ಬರೆದು 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ದೆಹಲಿ ಮೆಟ್ರೋ ಹಳಿಗೆ ಹಾರಿ ಜೀವತ್ಯಾಗ ಮಾಡಿದ ಘಟನೆ ಪೋಷಕರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮಂಗಳವಾರ ಮಧ್ಯಾಹ್ನ, ಶಾಲಾ ಸಮವಸ್ತ್ರದಲ್ಲೇ 16 ವರ್ಷದ ಶೌರ್ಯ ಪಾಟೀಲ್ ಮೆಟ್ರೋ ನಿಲ್ದಾಣಕ್ಕೆ ತೆರಳಿ ಪ್ಲಾಟ್ಫಾರ್ಮ್ನಿಂದ ನೇರವಾಗಿ ಹಳಿಗೆ ಜಿಗಿದಿದ್ದಾನೆ. ಘಟನೆಯನ್ನು ಕಂಡವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳ ಪರಿಶೀಲನೆಯ ವೇಳೆ ಅವನ ಬ್ಯಾಗ್ನಲ್ಲಿ ಒಂದು ಡೆತ್ ನೋಟ್ ಪತ್ತೆಯಾಗಿದೆ.ಸೇಂಟ್ ಕೊಲಂಬಾಸ್ ಎಂಬ ಪ್ರಮುಖ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಶೌರ್ಯನನ್ನು ಶಿಕ್ಷಕರು ಸರಿಯಾಗಿ ವರ್ತಿಸದೆ ಕಿರುಕುಳ ನೀಡುತ್ತಿದ್ದರೆಂದು ಆತ ಮನೆಗೆ ಹೇಳಿಕೊಂಡಿದ್ದ. ಇದನ್ನು ಪೋಷಕರು ಶಾಲೆಗೆ ಹಲವಾರು ಬಾರಿ ತಿಳಿಸಿದ್ದರು. ಆದರೆ ಶಾಲಾ ಆಡಳಿತ ಕ್ರಮ ಕೈಗೊಳ್ಳುವುದಕ್ಕಿಂತ ಬದಲಾಗಿ ಅವನಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಒತ್ತಡ ಹಾಕಿದ್ದರೆಂದು ಹೇಳಲಾಗಿದೆ. ಇದರಿಂದ ಶೌರ್ಯನ ಮನದಾಳದಲ್ಲಿ ಒತ್ತಡ ಮತ್ತಷ್ಟು ಹೆಚ್ಚಿತ್ತು.
ಸೇಂಟ್ ಕೊಲಂಬಾಸ್ ಎಂಬ ಪ್ರಮುಖ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಶೌರ್ಯನನ್ನು ಶಿಕ್ಷಕರು ಸರಿಯಾಗಿ ವರ್ತಿಸದೆ ಕಿರುಕುಳ ನೀಡುತ್ತಿದ್ದರೆಂದು ಆತ ಮನೆಗೆ ಹೇಳಿಕೊಂಡಿದ್ದ. ಇದನ್ನು ಪೋಷಕರು ಶಾಲೆಗೆ ಹಲವಾರು ಬಾರಿ ತಿಳಿಸಿದ್ದರು. ಆದರೆ ಶಾಲಾ ಆಡಳಿತ ಕ್ರಮ ಕೈಗೊಳ್ಳುವುದಕ್ಕಿಂತ ಬದಲಾಗಿ ಅವನಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಒತ್ತಡ ಹಾಕಿದ್ದರೆಂದು ಹೇಳಲಾಗಿದೆ. ಇದರಿಂದ ಶೌರ್ಯನ ಮನದಾಳದಲ್ಲಿ ಒತ್ತಡ ಮತ್ತಷ್ಟು ಹೆಚ್ಚಿತ್ತು.ಡೆತ್ ನೋಟ್ನಲ್ಲಿದ್ದ ವಿಷಯ
ಡೆತ್ ನೋಟ್ನಲ್ಲಿದ್ದ ವಿಷಯ
ಶೌರ್ಯ ಬರೆದಿದ್ದ ಪತ್ರದಲ್ಲಿ ಮೂವರು ಶಿಕ್ಷಕರ ಬಗ್ಗೆ ಸ್ಪಷ್ಟವಾಗಿ ದೂರಿಸಲಾಗಿತ್ತು. “ಈ ಪತ್ರ ಸಿಕ್ಕವರು ಮೊದಲು ಈ ನಂಬರ್ಗೆ ಕರೆ ಮಾಡಿ” ಎಂದು ಸೂಚಿಸಿರುವ ಆತ, “ಅಮ್ಮಾ, ನಾನು ಹಲವು ಬಾರಿ ನಿನ್ನ ಮನ ನೋಯಿಸಿದ್ದೇನೆ… ಈಗ ಕೊನೆಯ ಬಾರಿ. ಅಣ್ಣಾ, ನಾನು ನಿನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದೇನೆ, ಕ್ಷಮಿಸು. ಅಪ್ಪಾ, ನಿಮ್ಮಂತಾಗಬೇಕು ಎಂದು ಪ್ರಯತ್ನಿಸಿದ್ದೇನೆ… ಎಲ್ಲದರಿಗೂ ಕ್ಷಮೆ,” ಎಂದು ಬರೆಯಲಾಗಿದೆ.
ಇದೇ ಪತ್ರದಲ್ಲಿ ತನ್ನ ಅಂಗಾಂಗಗಳು ಚೆನ್ನಾಗಿದ್ದರೆ ಅವುಗಳನ್ನು ಯಾರಿಗಾದರೂ ದಾನ ಮಾಡಲು ವಿನಂತಿಸಿದ್ದಾನೆ. ಜೊತೆಗೆ “ನನಗೆ ಕಿರುಕುಳ ನೀಡಿದ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಿ. ನನ್ನಂತೆ ಮತ್ತೊಬ್ಬ ಮಗು ಇಂತಹ ನಿರ್ಧಾರಕ್ಕೆ ತಳ್ಳಲ್ಪಡಬಾರದು,” ಎಂದು ಬರೆದಿರುವುದು ಕಂಡುಬಂದಿದೆ.
ಘಟನೆಯ ದಿನ ನಡೆದ ಅವಮಾನ
ಆ ದಿನ ಶಾಲೆಯಲ್ಲಿ ಡ್ಯಾನ್ಸ್ ಅಭ್ಯಾಸದ ವೇಳೆ ವೇದಿಕೆಯ ಮೇಲೆ ತಪ್ಪಾಗಿ ಬಿದ್ದ ಶೌರ್ಯನನ್ನು ಶಿಕ್ಷಕರು ಎಲ್ಲರ ಮುಂದೆಯೇ ಗದರಿಸಿದ್ದಾರೆ. ಅವನು ಅಳಲು ಹಿಡಿದರೂ, “ಎಷ್ಟು ಬೇಕಾದರೂ ಅಳು, ನನಗೇನೂ ಪರವಾಗಿಲ್ಲ,” ಎಂದು ಶಿಕ್ಷಕರು ಹೇಳಿದ್ದರಿಂದ ಆತ ಇನ್ನಷ್ಟು ವಿಷಾಧಗೊಂಡಿದ್ದಾನೆ ಎಂದು ತಿಳಿದುಬಂದಿದೆ. “ನಿಮಗೆ ಬೇಕಿದ್ದರೆ ಸಹಾಯ ಮಾಡುತ್ತೇವೆ” ಎಂದು ನಂತರ ಪ್ರಾಂಶುಪಾಲರು ಕರೆ ಮಾಡಿದಾಗ, “ನನಗೆ ನನ್ನ ಮಗನನ್ನೇ ಹಿಂದಿರಿಸಿ” ಎಂದ ತಂದೆಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಪ್ರದೀಪ್ ಪಾಟೀಲ್ ವಿದ್ರಾವಕವಾಗಿ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಶಿಕ್ಷಕರ ವರ್ತನೆಯ ಬಗ್ಗೆ ಶೌರ್ಯ ಪೋಷಕರಿಗೆ ಹೇಳುತ್ತಿದ್ದರೂ, ಶಾಲೆಯವರು “ಅವನ ಗಣಿತ ಅಂಕ ಕಡಿಮೆ, ಓದಿನ ಮೇಲೆ ಗಮನ ಕೊಡಲಿ” ಎಂದು ಹೇಳಿ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮತ್ತೆ ಪ್ರಶ್ನಿಸಿದಾಗ, ಅವನಿಗೆ ಟ್ರಾನ್ಸ್ಫರ್ ಸರ್ಟಿಫಿಕೇಟ್ ಕೊಡುತ್ತೇವೆ ಎಂದು ಬೆದರಿಸಲಾಗಿದೆ.
ವಿದ್ಯಾರ್ಥಿಗಳಿಗೆ ಸಲಹೆ ಕಿರುಕುಳವಾದರೆ ಏನು ಮಾಡಬೇಕು?
ಶಾಲೆಯಲ್ಲಿ ಶಿಕ್ಷಕರು ಅಥವಾ ಸಿಬ್ಬಂದಿಯಿಂದ ಕಿರುಕುಳ ನೀಡುತ್ತಿದ್ದರೆ, ಮೊದಲಿಗೆ ಪ್ರಾಂಶುಪಾಲರಿಗೆ ಅಥವಾ ಮಕ್ಕಳ ರಕ್ಷಣೆಗೆ ನೇಮಿಸಲಾದ ಶಿಕ್ಷಕರಿಗೆ ವಿಷಯ ತಿಳಿಸಬೇಕು. ಪರಿಹಾರ ದೊರೆಯದಿದ್ದರೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (KSCPCR) ಗೆ ದೂರು ಸಲ್ಲಿಸಬಹುದು.
KSCPCR ಆಯೋಗ ಬೆಂಗಳೂರು ನೃಪತುಂಗ ರಸ್ತೆಯ ಸಮೀಪ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಕೃಷಿ ಭವನದ ನಾಲ್ಕನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೂರವಾಣಿ ಮೂಲಕ ದೂರು ನೀಡಲು +91 80 22115291 ಸಹಾಯವಾಣಿ ಲಭ್ಯವಿದೆ.
ದೈಹಿಕ ದೌರ್ಜನ್ಯ ಅಥವಾ ಗಂಭೀರ ಅಪರಾಧಗಳಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು. ಮಕ್ಕಳ ಕಲ್ಯಾಣ ಸಮಿತಿ ಅಥವಾ ಬಚಪನ್ ಬಚಾವೋ ಆಂದೋಲನದಂತಹ ಸಂಸ್ಥೆಗಳ ಸಹಾಯವೂ ಪಡೆಯಬಹುದು.
ದೂರು ಸಲ್ಲಿಸುವಾಗ, ಘಟನೆ ನಡೆದ ದಿನ, ಸಮಯ, ಸ್ಥಳ ಹಾಗೂ ಮಾತನಾಡಿದ ದಾಖಲೆಗಳನ್ನು ಸಂಕ್ಷಿಪ್ತವಾಗಿ ಬರೆಯುವುದು ಮುಖ್ಯ. ಸಾಮಾನ್ಯ ಆರೋಪಗಳ ಬದಲು ನಿಖರ ವಿವರಗಳೊಂದಿಗೆ ದೂರು ನೀಡುವುದು ಪರಿಣಾಮಕಾರಿಯಾಗುತ್ತದೆ.







1 thought on ““ಕ್ಷಮಿಸು ಅಮ್ಮಾ… ಶಾಲೆಯಲ್ಲಿ ನಡೆದ ಸಂಗತಿ ಎದುರಿಸಲು ನನಗೆ ಬೇರೆ ದಾರಿ ಕಾಣಲಿಲ್ಲ” ಮೆಟ್ರೋಗೆ ಹಳಿಗೆ ಹಾರಿ 10ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ..”