ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಗ್ರಾಮದಲ್ಲಿ ಭುಜದ ನೋವಿಗಾಗಿ ಚಿಕಿತ್ಸೆ ಪಡೆಯಲು ಇಂಜೆಕ್ಷನ್ ತೆಗೆದುಕೊಂಡ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಆಕ್ರೋಶ ಮೂಡಿಸಿದೆ.
ಮೃತನನ್ನು ಸುಂಟಿಕೊಪ್ಪ ಗ್ರಾಮದ ನಿವಾಸಿ ಶೇಖರ್ ಅವರ ಪುತ್ರ ವಿನೋದ್ ಎಂದು ಗುರುತಿಸಲಾಗಿದೆ. ವಿನೋದ್ ಭುಜದ ತೀವ್ರ ನೋವಿನಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆ ಪಡೆಯಲು ಸುಂಟಿಕೊಪ್ಪದಲ್ಲಿರುವ ಖಾಸಗಿ ಕ್ಲಿನಿಕ್‌ಗೆ ಭೇಟಿ ನೀಡಿದ್ದರು.
ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಯಶೋಧರ್ ಪೂಜಾರಿ ಮೊದಲಿಗೆ ಇಂಜೆಕ್ಷನ್ ಹಾಗೂ ಕೆಲವು ಮಾತ್ರೆಗಳು ನೀಡಿದ್ದರು. ಆದರೆ ನೋವು ಕಡಿಮೆಯಾಗದೆ ಇರುವುದರಿಂದ ಮತ್ತೊಂದು ಇಂಜೆಕ್ಷನ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮನೆಗೆ ಬಂದ ತಕ್ಷಣವೇ ವಿನೋದ್ ಅಸ್ವಸ್ಥನಾಗಿ ಬಿದ್ದು ಪ್ರಜ್ಞಾಹೀನನಾದರು. ತಕ್ಷಣ ಸ್ಥಳೀಯರು ಆಟೋದಲ್ಲಿ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ವಿನೋದ್‌ಗೆ ಭುಜದ ನೋವು ಹೊರತುಪಡಿಸಿ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯದಿಂದಲೇ ಮಗನ ಸಾವಾಗಿದೆ ಎಂದು ಪೋಷಕರು ಆರೋಪಿಸಿದ್ದು, ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಜವಾದ ಕಾರಣ ತಿಳಿದುಬರಲಿದೆ.
ಕೊಡಗು: ಭುಜದ ನೋವಿಗೆ ಇಂಜೆಕ್ಷನ್ ತೆಗೆದುಕೊಂಡ ಯುವಕನ ದಾರುಣ ಸಾವು, ವೈದ್ಯರ ನಿರ್ಲಕ್ಷ್ಯ!!!
By krutika naik
On: November 14, 2025 1:46 PM
---Advertisement---







1 thought on “ಕೊಡಗು: ಭುಜದ ನೋವಿಗೆ ಇಂಜೆಕ್ಷನ್ ತೆಗೆದುಕೊಂಡ ಯುವಕನ ದಾರುಣ ಸಾವು, ವೈದ್ಯರ ನಿರ್ಲಕ್ಷ್ಯ!!!”