ಬಳ್ಳಾರಿಯಲಿ ಪೊಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದು, ವ್ಯಕ್ತಿ ಒಬ್ಬನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದವರನ್ನು ಅರೆಸ್ಟ್ ಮಾಡಿದ್ದಾರೆ ಪ್ರಕರಣದ ತನಿಖೆ ನಡೆಸಿ ಪೊಲೀಸರು 10 ಆರೋಪಿಗಳನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿ ಠಾಣೆ ಪೋಲೀಸರು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ.
ಅಕ್ಟೋಬರ್ 23 ರಂದು ರಾತ್ರಿ ಸುತ್ತಿಗೆಯಿಂದ ಹೊಡೆದು ರವಿ (30) ಎನ್ನುವ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಅಸುಂಡಿ ಗ್ರಾಮದ ಬಳಿ ರವಿ ಕೊಲೆಯಾಗಿದೆ. ವಾರದ ಹಿಂದೆ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ಅತ್ಯಾಚಾರ ಸಂತ್ರಸ್ತೆಯ ಪರವಾಗಿ ನಿಂತಿದ್ದಕ್ಕೆ ಈ ಒಂದು ಗ್ಯಾಂಗ್ ರವಿಯನ್ನು ಸುತ್ತಿಗೆನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಆರೋಪಿಗಳು ಜೈಲಿಗೆ ಹೋಗಿದ್ದಕ್ಕೆ ರವಿಯ ಮೇಲೆ ಅತ್ಯಾಚಾರ ಕೇಸ್ ನ ಆರೋಪಿ ಲಿಂಗಣ್ಣ ಸಂಬಂಧಿಕರಿಂದ ರವಿ ಹತ್ಯೆಯಾಗಿದೆ ತನ್ನ ಸಹೋದರರಿಗೆ ಹೋಗಿದ್ದಕ್ಕೆ ಸಂಚುರೂಪಿಸಿ ರವಿಯನ್ನು ಹೊನ್ನೂರಸ್ವಾಮಿ ಮತ್ತು ಗ್ಯಾಂಗ್ ಕೊಲೆ ಮಾಡಿದೆ. ರವಿ ತಲೆ ಮತ್ತು ಮುಖಕ್ಕೆ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾರೆ. ರಸ್ತೆಯ ಮೇಲೆ ಶವ ಬೀಸಾಕಿ ಅಪಘಾತದಲ್ಲಿ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಘಟನೆಯ ಬಗ್ಗೆ ಪಿಡಿ ಹಳ್ಳಿ ಪೊಲೀಸರು ಸಂಶಯದಿಂದ ತನಿಖೆ ನಡೆಸಿದ್ದಾರೆ.
ಪ್ರಕರಣ ಸಂಬಂಧಿಸಿದಂತೆ 10 ಆರೋಪಿಗಳನ್ನು ಪರಮದೇವನಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಣಿ ಮಾಹಿತಿ ನೀಡಿದರು.
ಬಳ್ಳಾರಿ: ಸುತ್ತಿಗೆಯಿಂದ ಹೊಡೆದು ಕೊಂದು ಅಪಘಾತವೆಂದು ತೋರಿಸಲು ಯತ್ನಿಸಿದ 10 ಆರೋಪಿಗಳು ಸೆರೆ!!
By krutika naik
On: October 28, 2025 2:17 PM
---Advertisement---






