ಮಾನ್ಯತಾ ಹೊಂದಿರುವ ಪತ್ರಕರ್ತರಿಗೆ ಈ ಹಿಂದೆ ನೀಡುತ್ತಿದ್ದ ರೈಲ್ವೆ ರಿಯಾಯಿತಿ ಪಾಸ್ ಮರು ಆರಂಭಿಸುವ ಬಗ್ಗೆ ನೀಡಿರುವ ನಮ್ಮ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದನೆ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿದ್ದ ಪತ್ರಕರ್ತರ ರಿಯಾಯಿತಿ ರೈಲ್ವೆ ಪಾಸ್ ಪುನರಾರಂಭಗೊಳ್ಳದೆ ಇರುವುದು ಹಲವಾರು ವರ್ಷ ಕಳೆದಿದೆ ಇದೀಗ ಬೀದರ್ ಜಿಲ್ಲೆಯ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಬೀದರ್ ಘಟಕದ ವತಿಯಿಂದ ಇತ್ತೀಚಿಗೆ ಬೀದರ್‌ಗೆ ಬಂದಿದ್ದ ರೈಲ್ವೆ ರಾಜ್ಯ ಸಚಿವ ಪತ್ರಕರ್ತರಿಗೆ ರೈಲ್ವೆ ಪಾಸ್ ಸಂಪಾದಕರ ಸಂಘದ ಬೇಡಿಕೆಗೆ ರೈಲ್ವೆ ಇಲಾಖೆ ಸ್ಪಂದನೆ : v sommana ಗಮನಕ್ಕೆ ಈ ವಿಷಯ ತರಲಾಗಿದೆ.
ರೈಲ್ವೆ ರಿಯಾಯಿತಿ ಪಾಸ್‌ನಿಂದ ಪತ್ರಕರ್ತರು ದೇಶಾದ್ಯಂತ ಓಡಾಡಲು ಅನುಕೂಲ
ರೈಲ್ವೆ ರಿಯಾಯಿತಿ ಪಾಸ್‌ನಿಂದ ಪತ್ರಕರ್ತರು ದೇಶಾದ್ಯಂತ ಓಡಾಡಲು ಅನುಕೂಲವಾಗಿತ್ತು. ಅದು ಕೋವಿಡ ಸಂದರ್ಭದಲ್ಲಿ ಇತರ ರಿಯಾಯಿತಿ ಪಾಸ್ ಜೊತೆ ಪತ್ರಕರ್ತರ ಪಾಸ್ ಸಹ ನಿಲ್ಲಿಸಲಾಗಿತ್ತು. ಈ ವಿಷಯ ಮನಗಂಡಿರುವ ಸಂಘ ಬೀದರ್ ಗೆ ಬಂದಿದ್ದ ರೈಲ್ವೆ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ಸೋಮಣ್ಣ ಅವರನ್ನು ಸಂಘದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ನೇತೃತ್ವದಲ್ಲಿ ಅವರ ತಂಡ ಸಚಿವರಿಗೆ ಮನವಿ ಪತ್ರ ನೀಡಿ ದೇಶದಲ್ಲಿ ಬಂದಾಗಿರುವ ರೈಲ್ವೆ ರಿಯಾಯಿತಿ ಪಾಸ್ ಮರು ಪ್ರಾರಂಭಗೊಳಿಸಿ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರ ನೀಡಲಾಗಿತ್ತು. ಇಂದು ರೈಲ್ವೆ ಸಚಿವ ಸಚಿವಾಲಯದಿಂದ ಸಚಿವರ ಪತ್ರ ಸಂಘದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಅವರಿಗೆ ಇಂದು ತಲುಪಿದೆ. ಅದರಲ್ಲಿ ರಿಯಾಯಿತಿ ಪಾಸ್ ಮರು ಪ್ರಾರಂಭಿಸುವ ಬಗ್ಗೆ ತಾವು ಸಲ್ಲಿಸಿದ ಪತ್ರ ಸ್ವೀಕೃತಗೊಂಡಿದೆ.