---Advertisement---

ಕೇವಲ ಮುಖ ನೋಡಿದರೂ ಗೊತ್ತಾಗುತ್ತೆ ಆರೋಗ್ಯದ ಸ್ಥಿತಿ!ಒಣ ಚರ್ಮದಿಂದ ಕೂದಲು ಉದುರುವವರೆಗಿನ ಎಲ್ಲ ಲಕ್ಷಣಗಳ ಅರ್ಥ ನಿಮಗೆ ಗೊತ್ತಾ??

On: October 26, 2025 7:08 PM
Follow Us:
---Advertisement---

ವೈದ್ಯರನ್ನು ಭೇಟಿಯಾದಾಗ, ಮೊದಲು ಅವರು ನಿಮ್ಮ ಮುಖವನ್ನು ನೋಡುತ್ತಾರೆ. ಬಳಿಕ ಕೈ ಉಗುರು, ನಾಡಿ, ಹೃದಯ ಬಡಿತ ಇತ್ಯಾದಿ ಪರಿಶೀಲಿಸುತ್ತಾರೆ. ಕೆಲವೊಮ್ಮೆ ವೈದ್ಯರು ಕೇವಲ ನಿಮ್ಮ ಮುಖ ನೋಡಿದಷ್ಟರಲ್ಲಿ ದೇಹದಲ್ಲಿ ಏನಾದರೂ ತೊಂದರೆ ಇದೆ ಎಂಬುದನ್ನು ಊಹಿಸಬಲ್ಲರು. ಕಾರಣ ಮುಖವೇ ನಮ್ಮ ಆರೋಗ್ಯದ ನೇರ ಪ್ರತಿಬಿಂಬ. ಹಾಗಾದರೆ ಮುಖದಿಂದ ತಿಳಿಯಬಹುದಾದ ಕೆಲವು ಪ್ರಮುಖ ಲಕ್ಷಣಗಳೇನು ನೋಡೋಣ.

1. ಒಣ ಚರ್ಮ ಮತ್ತು ತುಟಿ ಬಿರುಕು

ನಿಮ್ಮ ಚರ್ಮವು ತುಂಬಾ ಒಣಗಿದಂತಾಗಿದ್ದರೆ ಅಥವಾ ತುಟಿಗಳು ಬಿರುಕು ಬಿಟ್ಟಂತಿದ್ದರೆ, ಅದು ದೇಹದಲ್ಲಿ ನೀರಿನ ಕೊರತೆಯ ಲಕ್ಷಣ. ಇದು ಕೆಲವೊಮ್ಮೆ ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗಿರುವ (ಹೈಪೋಥೈರಾಯ್ಡಿಸಮ್) ಅಥವಾ ಮಧುಮೇಹದ ಸೂಚನೆಯಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಶೀತ ತಾಳಲಾರದೆ ತೂಕ ಹೆಚ್ಚಾಗುವುದು, ನಿಶ್ಯಕ್ತಿ, ಹೆಚ್ಚು ಬಾಯಾರಿಕೆ, ಪದೇಪದೇ ಮೂತ್ರ ವಿಸರ್ಜನೆ ಮತ್ತು ದೃಷ್ಟಿ ಮಂದವಾಗುವುದು ಕಂಡುಬರುತ್ತವೆ. ಇಸಬು, ಸೋರಿಯಾಸಿಸ್, ಅಥವಾ ಔಷಧ ಅಲರ್ಜಿಯೂ ಕೂಡ ಕಾರಣವಾಗಬಹುದು.

2. ಮುಖದಲ್ಲಿ ಅತಿಯಾದ ಕೂದಲ ಬೆಳವಣಿಗೆ

ಗಲ್ಲ, ತುಟಿಯ ಮೇಲ್ಭಾಗ ಅಥವಾ ದವಡೆ ಬಳಿ ಹೆಚ್ಚು ಕೂದಲು ಬೆಳೆಯುತ್ತಿರುವುದು ಕಂಡುಬಂದರೆ, ಅದು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ನ ಲಕ್ಷಣವಾಗಬಹುದು. ಈ ಸಮಸ್ಯೆಯಲ್ಲಿ ಮಹಿಳೆಯರಲ್ಲಿ ಪುರುಷ ಹಾರ್ಮೋನ್‌ಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತವೆ. ಆದರೆ ಇದು ಯಾವಾಗಲೂ ಗಂಭೀರ ಅರ್ಥ ಕೊಡದು ಕೆಲವು ಮಹಿಳೆಯರಲ್ಲಿ ಇದು ಅನುವಂಶೀಯವಾಗಿಯೂ ಇರಬಹುದು.

3. ಕಣ್ಣಿನ ರೆಪ್ಪೆಗಳ ಹತ್ತಿರ ಹಳದಿ ಕಲೆಗಳು

ಕಣ್ಣಿನ ಸುತ್ತಲೂ ಹಳದಿ ಬಣ್ಣದ ಚುಕ್ಕೆಗಳು ಅಥವಾ ಕಲೆಗಳು ಕಂಡುಬಂದರೆ ಅದು ಕೊಲೆಸ್ಟ್ರಾಲ್ ಹೆಚ್ಚಿರುವ ಲಕ್ಷಣ. ಇದನ್ನು ವೈದ್ಯಕೀಯವಾಗಿ ಕ್ಸಾಂಥೆಲಾಸ್ಮಾ ಎಂದು ಕರೆಯುತ್ತಾರೆ. ಈ ಕಲೆಗಳು ಇರುವವರಿಗೆ ಹೃದಯಾಘಾತದ ಅಪಾಯ ಹೆಚ್ಚು ಎಂದು ಸಂಶೋಧನೆಗಳು ತಿಳಿಸಿವೆ.

4. ಕಣ್ಣಿನ ಕೆಳಭಾಗ ಊದಿಕೊಂಡಿರುವುದು

ಕಣ್ಣುಗಳ ಕೆಳಭಾಗ ಉಬ್ಬಿಕೊಂಡು ಕಪ್ಪು ಬಣ್ಣ ಕಾಣಿಸುತ್ತಿದ್ದರೆ, ಅದು ಅಲರ್ಜಿ, ನಿದ್ರಾಹೀನತೆ, ಅಥವಾ ಥೈರಾಯ್ಡ್ ಸಮಸ್ಯೆ ಸೂಚನೆ. ಅಲರ್ಜಿಯಿಂದ ರಕ್ತನಾಳಗಳು ದುರ್ಬಲವಾಗಿ ಸೋರಿಕೆಯಾಗುವ ಕಾರಣ ಚರ್ಮ ಊದಿಕೊಳ್ಳುತ್ತದೆ ಮತ್ತು ಕಣ್ಣುಗಳು “ಬಳಲಿದಂತೆ” ಕಾಣುತ್ತವೆ.

5. ಮುಖ ಮರಗಟ್ಟಿದಂತಾಗುವುದು

ಮುಖದ ಒಂದು ಭಾಗ ಚಲಿಸದಂತೆ, ನಗಲು ಅಥವಾ ಮಾತನಾಡಲು ಕಷ್ಟವಾದರೆ ಅದು ಪಾರ್ಶ್ವವಾಯು (ಸ್ಟ್ರೋಕ್) ಅಥವಾ ಬೆಲ್ಸ್ ಪಾಲ್ಸಿ ಯ ಪ್ರಾರಂಭಿಕ ಲಕ್ಷಣವಾಗಿರಬಹುದು. ಈ ಸಂದರ್ಭ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಕೈ-ಕಾಲು ದುರ್ಬಲತೆ ಅಥವಾ ದೃಷ್ಟಿ ಎರಡೆರಡು ಕಾಣಿಸುವಂತೆಯೂ ಲಕ್ಷಣಗಳು ಇರಬಹುದು.

6. ಮೈಬಣ್ಣ ಮಾಸುವುದು

ಚರ್ಮದ ಬಣ್ಣ ಬದಲಾಗುವುದು ದೇಹದ ಒಳಗಿನ ಸಮಸ್ಯೆಯ ಸೂಚನೆ. ಚರ್ಮ ಬಿಳಗಿದಂತಾದರೆ ಅದು ರಕ್ತಹೀನತೆ ಲಕ್ಷಣ. ಹಳದಿಯಾದರೆ ಯಕೃತ್ (ಲಿವರ್) ಸಮಸ್ಯೆ. ತುಟಿ ಅಥವಾ ಉಗುರು ನೀಲಿ ಬಣ್ಣದಾಗಿದರೆ ಹೃದಯ ಅಥವಾ ಶ್ವಾಸಕೋಶದ ತೊಂದರೆಯ ಸೂಚನೆ.

7. ದದ್ದುಗಳು ಮತ್ತು ಮಚ್ಚೆಗಳು

ಮುಖ ಅಥವಾ ದೇಹದ ಚರ್ಮದಲ್ಲಿ ತುರಿಕೆ ಅಥವಾ ಕೆಂಪು ದದ್ದುಗಳು ಕಾಣಿಸಿಕೊಂಡರೆ ಅದು ಜೀರ್ಣಕ್ರಿಯೆಯ ಸಮಸ್ಯೆ ಅಥವಾ ಗ್ಲುಟೇನ್ ಅಲರ್ಜಿ ಯ ಸೂಚನೆ. ಮೂಗಿನ ಸೇತುವೆ ಮತ್ತು ಕೆನ್ನೆಯ ಮೇಲೆ ಚಿಟ್ಟೆ ಆಕಾರದ ದದ್ದುಗಳು ಕಂಡುಬಂದರೆ ಅದು ಲೂಪಸ್ ಎಂಬ ಆಟೋಇಮ್ಯೂನ್ ಕಾಯಿಲೆಯ ಲಕ್ಷಣವಾಗಬಹುದು. ಇಸಬು, ರೊಸಾಸಿಯಾ ಅಥವಾ ಅಲರ್ಜಿಯೂ ಇದೇ ರೀತಿಯ ದದ್ದು ಉಂಟುಮಾಡಬಹುದು.

8. ಕೂದಲು ಉದುರುವಿಕೆ

ಹುಬ್ಬು ಅಥವಾ ಕಣ್ಣಿನ ರೆಪ್ಪೆಗಳ ಕೂದಲು ಉದುರುವಿಕೆ ಕಂಡುಬಂದರೆ ಅದು ಅಲೋಪೆಸಿಯಾ ಅರೆಟಾ ಎಂಬ ಕಾಯಿಲೆಯ ಲಕ್ಷಣವಾಗಬಹುದು. ಇದು ದೇಹದ ರೋಗ ನಿರೋಧಕ ವ್ಯವಸ್ಥೆ ತಪ್ಪಾಗಿ ಕೂದಲಿನ ಬೇರುಗಳನ್ನು ಹಾನಿಗೊಳಿಸುವ ಆಟೋಇಮ್ಯೂನ್ ಸಮಸ್ಯೆ. ಚಿಕಿತ್ಸೆ ದೊರೆಯುತ್ತದಾದರೂ ಶಾಶ್ವತ ಪರಿಹಾರ ಇಲ್ಲ.

9. ಹೊಸ ಮಚ್ಚೆಗಳು

ಹೊಸ ಮಚ್ಚೆ ಬೆಳೆದು ಬಂದರೆ ಅಥವಾ ಹಳೆಯ ಮಚ್ಚೆಯ ಆಕಾರ ಬದಲಾಗಿದೆಯೆಂದು ಗಮನಿಸಿದರೆ, ಅದನ್ನು ಚರ್ಮರೋಗ ತಜ್ಞರಿಂದ ಪರೀಕ್ಷಿಸಿಕೊಳ್ಳಿ. ಕೆಲವೊಮ್ಮೆ ಇದು ಚರ್ಮ ಕ್ಯಾನ್ಸರ್ ನ ಮೊದಲ ಸೂಚನೆಯಾಗಿರಬಹುದು ಅಥವಾ ಅನುವಂಶೀಯ ಕಾಯಿಲೆಯ ಸೂಚನೆಯೂ ಆಗಿರಬಹುದು.

ನಿನ್ನ ಮುಖವು ನಿನ್ನ ಆರೋಗ್ಯದ ಸಂಪೂರ್ಣ ಕಥೆ ಹೇಳುತ್ತದೆ, ಕೇವಲ ಅದನ್ನು ಗಮನಿಸುವ ಕಣ್ಣು ಬೇಕು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment