ಸೆಪ್ಟೆಂಬರ್ 29, 2025 — ಭಾರತದ ಅತಿದೊಡ್ಡ ದಾನಶೀಲ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಫೌಂಡೇಶನ್, 2025–26 ನೇ ಸಾಲಿನ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿ ಒಟ್ಟು 5,100 ವಿದ್ಯಾರ್ಥಿಗಳು ನೆರವನ್ನು ಪಡೆಯಲಿದ್ದಾರೆ — 5,000 ಪದವಿ ವಿದ್ಯಾರ್ಥಿಗಳು ಮತ್ತು 100 ಸ್ನಾತಕೋತ್ತರ ವಿದ್ಯಾರ್ಥಿಗಳು.
ವಿದ್ಯಾರ್ಥಿವೇತನದ ಮುಖ್ಯ ಅಂಶಗಳು
ಪದವಿ (UG) ವಿದ್ಯಾರ್ಥಿಗಳಿಗೆ: ಪೂರ್ಣ ಕೋರ್ಸ್ ಅವಧಿಗೆ ಗರಿಷ್ಠ ₹2,00,000 ನೆರವು. ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೆ: ಪೂರ್ಣ ಕೋರ್ಸ್ ಅವಧಿಗೆ ಗರಿಷ್ಠ ₹6,00,000 ನೆರವು. ಆರ್ಥಿಕ ನೆರವಿನ ಜೊತೆಗೆ ಮೆಂಟರ್‌ಶಿಪ್, ಉದ್ಯಮ ಪರಿಚಯ, ಕಾರ್ಯಾಗಾರಗಳು, ನೆಟ್‌ವರ್ಕಿಂಗ್ ಅವಕಾಶಗಳು ಸೇರಿದಂತೆ ಸಂಪೂರ್ಣ ಅಭಿವೃದ್ಧಿ ಬೆಂಬಲ.
ಪದವಿ (UG) ವಿದ್ಯಾರ್ಥಿಗಳಿಗೆ ಅರ್ಹತೆ
ಭಾರತೀಯ ನಾಗರಿಕರಾಗಿರಬೇಕು ಮತ್ತು ಭಾರತದಲ್ಲೇ ವಾಸವಾಗಿರಬೇಕು. 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳು ಇರಬೇಕು. 2025–26 ಸಾಲಿನಲ್ಲಿ ಮೊದಲನೇ ವರ್ಷದ ಪದವಿ ಕೋರ್ಸ್ (ಯಾವುದೇ ಕ್ಷೇತ್ರ) ನಲ್ಲಿ ಪೂರ್ಣಾವಧಿ ಓದುತ್ತಿರಬೇಕು. ಕುಟುಂಬದ ವಾರ್ಷಿಕ ಆದಾಯ ₹15,00,000 ಕ್ಕಿಂತ ಕಡಿಮೆ ಇರಬೇಕು (₹2,50,000 ಕ್ಕಿಂತ ಕಡಿಮೆ ಆದಾಯದವರಿಗೆ ಮೊದಲ ಆದ್ಯತೆ). ಎಲ್ಲಾ ವಿದ್ಯಾರ್ಥಿಗಳು ಅಪ್ಟಿಟ್ಯೂಡ್ ಟೆಸ್ಟ್ (ಸಾಮರ್ಥ್ಯ ಪರೀಕ್ಷೆ) ಬರೆಯುವುದು ಕಡ್ಡಾಯ.
ಅರ್ಹರಲ್ಲದವರು:
2ನೇ ವರ್ಷ ಅಥವಾ ಮೇಲಿನ ವಿದ್ಯಾರ್ಥಿಗಳು, ಡಿಸ್ಟೆನ್ಸ್/ಆನ್‌ಲೈನ್/ಪಾರ್ಟ್‌ಟೈಮ್ ಕೋರ್ಸ್‌ಗಳನ್ನು ಓದುತ್ತಿರುವವರು, ಇಂಟಿಗ್ರೇಟೆಡ್/ಡ್ಯುಯಲ್-ಡಿಗ್ರಿ ವಿದ್ಯಾರ್ಥಿಗಳು.
ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೆ ಅರ್ಹತೆ
2025–26 ಸಾಲಿನ ಮೊದಲನೇ ವರ್ಷದ ಪೂರ್ಣಾವಧಿ ಸ್ನಾತಕೋತ್ತರ ಕೋರ್ಸ್ ಓದುತ್ತಿರಬೇಕು. ಎಂಜಿನಿಯರಿಂಗ್, ಟೆಕ್ನಾಲಜಿ, ಲೈಫ್ ಸೈನ್ಸ್ ಮೊದಲಾದ ಆಯ್ಕೆಮಾಡಿದ ಕ್ಷೇತ್ರಗಳಿಗೆ ಮಾತ್ರ ಅನ್ವಯ. ಈ ಕೆಳಗಿನ ಅರ್ಹತೆಗಳಲ್ಲಿ ಒಂದನ್ನು ಪೂರೈಸಿರಬೇಕು: GATE ಅಂಕಗಳು 550–1000 ನಡುವೆ ಇರಬೇಕು UG CGPA 7.5+ (ಅಥವಾ ಸಮಾನವಾದ ಅಂಕಗಳು).
ಅರ್ಹರಲ್ಲದವರು: ಇಂಟಿಗ್ರೇಟೆಡ್, ಪಾರ್ಟ್‌ಟೈಮ್, ಆನ್‌ಲೈನ್ ಅಥವಾ ಹೈಬ್ರಿಡ್ ಕೋರ್ಸ್ ಓದುತ್ತಿರುವವರು.
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು ಮತ್ತು ಅಪ್ಟಿಟ್ಯೂಡ್ ಟೆಸ್ಟ್ ಬರೆಯುವುದು ಕಡ್ಡಾಯ. ಕೊನೆಯ ದಿನಾಂಕ: ಅಕ್ಟೋಬರ್ 4, 2025 (ರಾತ್ರಿ 11:59 IST). PG ವಿದ್ಯಾರ್ಥಿಗಳಿಗೆ ಹಣವನ್ನು ಹಂತ ಹಂತವಾಗಿ ನೀಡಲಾಗುತ್ತದೆ — ಪ್ರತಿ ವರ್ಷ ಪ್ರಾರಂಭದಲ್ಲಿ 80% ಮೊತ್ತ ಮತ್ತು ನಂತರ 20% ಮೊತ್ತ ವೃತ್ತಿ ಅಭಿವೃದ್ಧಿ ಹಾಗೂ ಇತರ ವೆಚ್ಚಗಳಿಗೆ.
ಯೋಜನೆಯ ಮಹತ್ವ
ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ನೆರವು ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಉದ್ದೇಶ ಕೇವಲ ಆರ್ಥಿಕ ನೆರವಲ್ಲ, ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಶೋಧನಾ ಚಟುವಟಿಕೆ, ಉದ್ಯಮಶೀಲತೆ ಬೆಳೆಸುವದರಲ್ಲಿದೆ.
ಈ ಮೂಲಕ ಗ್ರಾಮೀಣ ಹಾಗೂ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣವನ್ನು ಪಡೆಯಲು ದಾರಿ ಸುಗಮವಾಗಲಿದೆ.






