ಕನ್ನಡ ಸಿನಿರಂಗದಲ್ಲಿ ಒಂದರ ಹಿಂದೆ ಒಂದಾಗಿ ಕೇಳಿಬರುತ್ತಿರುವ ಸಾವಿನ ಸುದ್ದಿಯಿಂದಲೇ ಅಭಿಮಾನಿಗಳು ಬೆಚ್ಚಿಬಿದ್ದಿರುವಾಗ, ಇದೀಗ ಸಾಹಿತ್ಯ ಲೋಕವೂ ದುಃಖದ ನೆರಳಿಗೆ ಸಿಲುಕಿದೆ. ಸಿನಿಮಾ ಕ್ಷೇತ್ರದಲ್ಲಿ ನಿರಂತರ ಶೋಕ ಸುದ್ದಿಗಳು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸುತ್ತಿರುವಾಗ, ಕನ್ನಡ ಸಾಹಿತ್ಯ ಜಗತ್ತಿಗೂ ಆ ದುಃಖದ ಅಲೆ ತಟ್ಟಿದೆ. ಸಿನಿರಂಗದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿರುವಂತೆಯೇ, ಸಾಹಿತ್ಯ ಲೋಕವೂ ಈಗ ಆ ನೋವಿನ ತಟ್ಟಡಿಗೆ ಒಳಗಾಗಿದ್ದು, ಕನ್ನಡಿಗರನ್ನು ದುಃಖದಲ್ಲಿ ಮುಳುಗಿಸಿದೆ.
ಜಗತ್ತಿನ ಲಿಪಿಗಳ ರಾಣಿ ಅಂತಾ ಕರೆಸಿಕೊಳ್ಳುವ ಕನ್ನಡ ಭಾಷೆಯಲ್ಲಿ ತಮ್ಮದೇ ಶೈಲಿಯ ಬರಹಗಳ ಮೂಲಕ ಹೆಸರು & ಖ್ಯಾತಿ ಗಳಿಸಿದ್ದ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಇಂದು ಆಘಾತವೇ ಎದುರಾಗಿದೆ.
ಜ್ಞಾನಪೀಠ ಪ್ರಶಸ್ತಿಯೇ ಇರಲಿ ಅಥವಾ ಸಾಹಿತ್ಯಕ್ಕೆ ಸಿಗುವ ಇನ್ಯಾವುದೇ ಅವಾರ್ಡ್ ಇರಲಿ ಅಲ್ಲಿ ಕನ್ನಡಿಗರು ಸದ್ದು ಮಾಡುವುದು ಖಂಡಿತ. ಅದರಲ್ಲೂ ಕನ್ನಡ ಸಾಹಿತ್ಯವನ್ನು ಪರಭಾಷಿಕರು ಕೂಡ ತಲೆಬಾಗಿ ಒಪ್ಪಿಕೊಳ್ಳುತ್ತಾರೆ. ಕನ್ನಡಿಗರ ಸಾಹಿತ್ಯ ಅಷ್ಟೊಂದು ಹೆಸರು ಮಾಡಿದ್ದು, ಜಗತ್ತಿನ ಮೂಲೆ ಮೂಲೆಗೂ ಹಬ್ಬುತ್ತಿದೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿಮಾನಿಗಳು ಇದ್ದಾರೆ. ಆದರೆ ಇಂತಹ ಮಹಾನ್ ಸಾಹಿತ್ಯ ಭಂಡಾರ ಹೊಂದಿರುವ ಕನ್ನಡ ಭಾಷಾ ಇತಿಹಾಸದಲ್ಲಿ ಎಂದೂ ಮರೆಯಲಾಗದ ಕಹಿ ಘಟನೆಯೂ ಇಂದು ಸಂಭವಿಸಿದೆ.
ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇಂದು ಕನ್ನಡಿಗರನ್ನು ಬಿಟ್ಟು ಹೋಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಕೊನೆಯುಸಿರು ಎಳೆದಿದ್ದಾರೆ. ವಯೋಸಹಜ ಕಾಯಿಲೆ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿಯೇ ಕಳೆದ 3 ತಿಂಗಳಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಅವರೀಗ ಚಿಕಿತ್ಸೆ ಫಲಿಸದೆ ತಮ್ಮ 94ನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಈ ಸುದ್ದಿ ಕನ್ನಡ ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ನೋವಿನ ವಾತಾವರಣ ಸೃಷ್ಟಿಸಿದೆ.
ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇನ್ನಿಲ್ಲ ಎಂಬ ಸುದ್ದಿ ದೇಶಾದ್ಯಂತ ಭಾರಿ ನೋವು ತರಿಸಿದೆ. ಓದುಗರಿಗೆ ಮಾತ್ರವಲ್ಲದೆ ರಾಜಕೀಯ ನಾಯಕರಿಗೂ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಇಷ್ಟವಾಗುತ್ತಿದ್ದರು. ತಮ್ಮ ನೇರ ನುಡಿಗಳಿಂದಲೂ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಹೆಸರಾಗಿದ್ದರು. ಆದರೆ ಇದೀಗ ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿಯು ಸಂಚಲನ ಸೃಷ್ಟಿಸಿದೆ. ಪಿಎಂ ನರೇಂದ್ರ ಮೋದಿ ಅವರು & ಸಿಎಂ ಸಿದ್ದರಾಮಯ್ಯ ಅವರು ಇದೀಗ ಕನ್ನಡದ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಗಣ್ಯರು ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಈ ನಷ್ಟವನ್ನು ಕನ್ನಡ ಸಾಹಿತ್ಯ ಲೋಕ ಭರಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.







1 thought on “ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನ…”