---Advertisement---

ಬೀದರ: 48 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಾನ ಮಸಾಲಾ, ತಂಬಾಕುಪಾಕೆಟ್ ‌ ವಶಕ್ಕೆ ಪಡೆದ ಪೊಲೀಸರು

On: September 24, 2025 9:52 AM
Follow Us:
---Advertisement---

ಬೀದರ: ಬೀದರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್ ಅವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಲ್ಲಿ, ಮೇಹಕರ ಪೊಲೀಸ್ ಠಾಣೆ ತಂಡವು ಭಾಲ್ಕಿ-ನಿಲಂಗಾ ಮಾರ್ಗದ ಬಳಿ ಕೇಸರ ಜವಳಗಾ ಗ್ರಾಮದಲ್ಲಿ ವಾಹನವನ್ನು ವಶಕ್ಕೆ ಪಡೆದು, ಅಕ್ರಮವಾಗಿ ಸಾಗಿಸುತ್ತಿದ್ದ ಪಾನ ಮಸಾಲಾ ಮತ್ತು ತಂಬಾಕು ಪಾಕೆಟ್‌ಗಳನ್ನು ಜಪ್ತಿ ಮಾಡಿದೆ.

ಮಾಹಿತಿಯ ಪ್ರಕಾರ, ವಶಪಡಿಸಿರುವ ವಸ್ತುಗಳ ಮೌಲ್ಯ:

ತಂಬಾಕು ಪಾಕೆಟ್‌ಗಳು: ₹7,63,200 ಪಾನ ಮಸಾಲಾ ಪಾಕೆಟ್‌ಗಳು: ₹30,52,800 ಒಟ್ಟು: ₹38,16,000

ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ ಮೇಹಕರ ಪೊಲೀಸ್ ಎಸ್‌ಐ ಶ್ರೀ ಸುದರ್ಶನ ರೆಡ್ಡಿ, ಎಎಸ್‌ಐ ಶ್ರೀ ಚಂದ್ರಶೇಖರ, ಸಿ.ಪಿ.ಸಿ ಶ್ರೀ ಪ್ರಕಾಶ ಮತ್ತು ಗೃಹ ರಕ್ಷಕದಳದ ಶ್ರೀ ರಾಜೇಂದ್ರರ ಕಾರ್ಯ ಶ್ಲಾಘನೀಯವಾಗಿದೆ.

ಅಕ್ರಮ ಸಾಗಾಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬೀದರ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಪೊಲೀಸರು ಕ್ರಮಗಳನ್ನು ಮುಂದುವರಿಸುತ್ತಿದ್ದಾರೆ.

Join WhatsApp

Join Now

RELATED POSTS