ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಬುರುಡೆ ಪ್ರಕರಣದ ಹಿನ್ನಲೆಯಲ್ಲಿ, ಬಂಗ್ಲೆಗುಡ್ಡೆ ಪ್ರದೇಶದಲ್ಲಿ S.I.T ಅಧಿಕಾರಿಗಳು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಧರ್ಮಸ್ಥಳದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಗಮನಾರ್ಹ ವಸ್ತುಗಳು ಸಿಕ್ಕಿವೆ. ತಪಾಸಣಾ ತಂಡವು ಬಂಗ್ಲೆಗುಡ್ಡೆಯ 9 ವಿಭಿನ್ನ ಸ್ಥಳಗಳಲ್ಲಿ ಸಣ್ಣ ಪುಟ್ಟ ಕಳೇಬರಗಳನ್ನು ಪತ್ತೆಹಚ್ಚಿದ್ದು, ಪ್ರಕರಣದಲ್ಲಿ ಹೊಸ ಟ್ವಿಸ್ಟ್ ನೀಡುವ ಸಾಧ್ಯತೆಯನ್ನು ಮೂಡಿಸಿದೆ.
ಬಂಗ್ಲೆಗುಡ್ಡದ 13 ಎಕರೆ ಪ್ರದೇಶದಲ್ಲಿ ಎಸ್.ಐ.ಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಗೆ ಒಟ್ಟು ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಒಂದೇ ತಂಡಕ್ಕೆ ಒಂಬತ್ತು ಸ್ಥಳಗಳಲ್ಲಿ ಕಳೆಬರಗಳು ಪತ್ತೆಯಾಗಿವೆ. ಚಿನ್ನಯ್ಯರ ಹೇಳಿಕೆಯ ಆಧಾರದ ಮೇಲೆ ಬಂಗ್ಲೆಗುಡ್ಡದಲ್ಲಿ ಶೋಧ ಮುಂದುವರಿಯುತ್ತಿದ್ದು, ಮೂಳೆ ಅವಶೇಷಗಳು ಮತ್ತು ಬಟ್ಟೆ ತುಂಡುಗಳು ಸಿಕ್ಕಿವೆ. ಮೂಳೆ ಪತ್ತೆಯಾಗಿರುವ ಭಾಗದ ಮಣ್ಣು ಮಾದರಿಯನ್ನು ತಂಡ ಪರಿಶೀಲನೆಗೆ ಪಡೆದುಕೊಂಡಿದೆ.
ಶೋಧ ಕಾರ್ಯಕ್ಕೆ ವಸ್ತುಗಳ ಸಂಗ್ರಹ ಮತ್ತು ಸಾಗಣೆ ಸುರಕ್ಷಿತವಾಗಿರಲು, ಸಿಬ್ಬಂದಿ ಪ್ಲಾಸ್ಟಿಕ್ ಪೈಪ್, ಉಪ್ಪು, ಪ್ಲಾಸ್ಟಿಕ್ ಬಾಕ್ಸ್, ಬಟ್ಟೆ ಪ್ಯಾಕಿಂಗ್ ಸಾಮಗ್ರಿ ಹಾಗೂ ಸೀಲ್ ಹಾಕುವ ಮೇಣಗಳನ್ನು ಬಳಸಿಕೊಂಡಿದ್ದಾರೆ. ಸಿಕ್ಕಿರುವ ಮೂಳೆಗಳನ್ನೆಲ್ಲಾ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಬಂಗ್ಲೆಗುಡ್ಡದ ಕಾಡಿನಲ್ಲಿ ಎಸ್.ಐ.ಟಿ ಶೋಧ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ತಂಡ ಊಟದ ವಿರಾಮವನ್ನು ತೆಗೆದುಕೊಳ್ಳದೇ ಕಾರ್ಯಾಚರಣೆ ನಡೆಸುತ್ತಿದೆ.
ಸ್ಥಳ ಮಹಜರಿನ ಬಳಿಕ ವಿಠಲ್ ಆರೋಪ ಮಾಡಿರುವಂತೆ ಹಲವಾರು ಅಸ್ಥಿಪಂಜರಗಳು ಸಿಕ್ಕಿರುವ ಸುದ್ದಿ ಸೌಜನ್ಯ ಮಾವನ ವಿಡಿಯೋ ಹೇಳಿಕೆಯಲ್ಲಿ ವ್ಯಕ್ತವಾಗಿದೆ. ವಿಠಲ್ ಗೌಡ ಹೇಳುವುದಾದರೆ, ಭೂಮಿಯ ಮೇಲ್ಭಾಗದಲ್ಲೇ ಐದು ಮೃತದೇಹಗಳ ಅಸ್ಥಿಪಂಜರಗಳು ಕಂಡುಬಂದಿವೆ. ಮಗುವಿನ ಕಳೇಬರವೂ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮುಂಚೆ ತುಕಾರಾಮ್ ಗೌಡ, ಪುರಂದರ್ ಗೌಡರೂ ಇದೇ ರೀತಿಯ ಆರೋಪ ಮಾಡಿದ್ದಾರೆ. ಜೊತೆಗೆ ಚಿನ್ನಯ್ಯ ಕೂಡ ಬಂಗ್ಲೆಗುಡ್ಡದಲ್ಲಿ ಕಳೇಬರ ಸಿಕ್ಕಬಹುದು ಎಂದು ಹೇಳಿದ್ದರು. ಈ ಕಾರಣದಿಂದಾಗಿ ಎಸ್‌ಐಟಿ ಅಧಿಕಾರಿಗಳು 50 ಕ್ಕೂ ಹೆಚ್ಚು ಸಿಬ್ಬಂದಿ ಜೊತೆ ಕಾಡು ಪ್ರದೇಶಕ್ಕೆ ಪ್ರವೇಶಿಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಭೂಮಿಯ ಮೇಲ್ಭಾಗದಲ್ಲಿ ಕೆಲವು ಬಟ್ಟೆ ತುಂಡುಗಳು ಮತ್ತು ಕೆಲವೊಮ್ಮೆ ಮೂಳೆ ಚೂರುಗಳು ಸಿಕ್ಕಿವೆ. ವಿಠಲ ಗೌಡನ ಹೇಳಿಕೆಯು ಈ ಬೆಳವಣಿಗೆಯನ್ನು ಇನ್ನಷ್ಟು ಕುತೂಹಲಕಾರಿ ಮಾಡಿದೆ. ಇಂದಿನ ಶೋಧ ಕಾರ್ಯದ ವೇಳೆ ವಿಠಲ ಗೌಡರನ್ನು ಹಾಜರಿಲ್ಲದಂತೆ ಮಾಡಲಾಯಿತು; ಸಿಬ್ಬಂದಿಯೇ ಶೋಧ ಸಲಕರಣೆಗಳನ್ನು ತೆಗೆದುಕೊಂಡು ಬಂಗ್ಲೆಗುಡ್ಡೆ ಮಹಜರಿಗೆ ತೆರಳಿದ್ದಾರೆ.
ಬುರುಡೆ ಪ್ರಕರಣವನ್ನು ಸಂಬಂಧಿಸಿದಂತೆ S.I.T ತಂಡ ಗೊಂದಲಕ್ಕೆ ಸಿಲುಕಿದಂತೆ ಕಾಣಿಸಿತು. ಬಂಗ್ಲೆಗುಡ್ಡ ಶೋಧದ ವಿಚಾರದಲ್ಲಿ ಗೊಂದಲ ಉಂಟಾಗಿ, ಶೋಧದ ದಿಕ್ಕು ಮತ್ತು ಪರಿಮಾಣವನ್ನು ನಿರ್ಧರಿಸಲು ಕಾನೂನು ತಜ್ಞರ ಸಲಹೆ ಪಡೆಯಲಾಗಿತ್ತು. ವಿಠಲ ಗೌಡನು ಸೂಚಿಸಿದ ಜಾಗದಲ್ಲಿ ಮಾತ್ರ ಶೋಧ ನಡೆಸಬೇಕೇ ಅಥವಾ ಸಂಪೂರ್ಣ ಬಂಗ್ಲೆಗುಡ್ಡದಲ್ಲಿ ಶೋಧ ಮಾಡಬೇಕೇ ಎಂಬ ನಿರ್ಧಾರ ತೆಗೆದುಕೊಳ್ಳಲು ಕಾನೂನು ಸಲಹೆ ಅಗತ್ಯವಾಯಿತು. ಕೊನೆಗೆ ಸಂಪೂರ್ಣ ಬಂಗ್ಲೆಗುಡ್ಡೆ ಶೋಧ ನಡೆಸಲು ನಿರ್ಧಾರವಾಯಿತು.
ಧರ್ಮಸ್ಥಳ ಪ್ರಕರಣ: ಒಂದೆರಡು ಅಲ್ಲ, ಬಂಗ್ಲೆಗುಡ್ಡದಲ್ಲಿ 9 ಸ್ಥಳಗಳಲ್ಲಿ ಮೂಳೆ ಪತ್ತೆ!
By krutika naik
On: September 17, 2025 7:25 PM
---Advertisement---






