ಬೆಂಗಳೂರು ನಗರದ ವ್ಯಸ್ತ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಯ ಬ್ರೇಕ್ ಕೆಲಸ ಮಾಡದ ಕಾರಣ ಅದು ನಿಯಂತ್ರಣ ತಪ್ಪಿ ಆಟೋ ಹಾಗೂ ಕಾರಿಗೆ ಗುದ್ದಿದ ಪರಿಣಾಮ ಘಟನೆ ನಡೆದಿದೆ. ಡಿಕ್ಕಿ ಅಷ್ಟು ಭಾರಿಯಾಗಿತ್ತು ಎಂಬುದರಿಂದ ಆಟೋ ಸಂಪೂರ್ಣವಾಗಿ ಜಜ್ಜುಗುಜ್ಜಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿ ಇದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ.
ನಾಗರಭಾವಿ ದಿಕ್ಕಿನಿಂದ ಬಂದ ಲಾರಿ, ಕಾಮಾಕ್ಷಿಪಾಳ್ಯ ಮುಖ್ಯರಸ್ತೆಯ ಸುಮ್ಮನಹಳ್ಳಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಆಟೋ ಮತ್ತು ಕಾರಿಗೆ ಢಿಕ್ಕಿ ಹೊಡೆದಿದೆ. ತೀವ್ರ ವೇಗದ ಡಿಕ್ಕಿಯಿಂದ ರಸ್ತೆ ಅಲುಗಾಡುವಂತಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ ಲಾರಿಯ ಬ್ರೇಕ್ ಫೇಲ್ ಆದದ್ದೇ ಈ ಭೀಕರ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ.
ಬೆಂಗಳೂರು ನಗರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋದಲ್ಲಿ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದುರಂತದಲ್ಲಿ ಆಟೋದಲ್ಲಿದ್ದ ಯೇಸು ಡಿ. ಮತ್ತು ಜೆನಿಫರ್ ಎಂಬ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿ ಗರ್ಭಿಣಿ ಮಹಿಳೆಯೊಬ್ಬಳು ಸಹ ಇದ್ದರು. ಅದೃಷ್ಟವಶಾತ್ ಆಕೆಗೆ ಯಾವುದೇ ಪ್ರಾಣಾಪಾಯ ಸಂಭವಿಸದೆ ಪಾರಾಗಿರುವ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಕುರಿತು ಕಾರು ಚಾಲಕ ವಿಜಯ್ ಹೇಳಿದ್ದು, “ನನ್ನ ಹೆಂಡತಿ ಗರ್ಭಿಣಿಯಾಗಿದ್ದರಿಂದ ಅವಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆ ವೇಳೆಗೆ ಪೂಜಾ ಕಲ್ಯಾಣ ಮಂಟಪದ ರಸ್ತೆಯಿಂದ ಬಂದ ಲಾರಿ ಅಕಸ್ಮಾತ್ ನಿಯಂತ್ರಣ ತಪ್ಪಿ ಮೊದಲು ಆಟೋಗೆ ಡಿಕ್ಕಿ ಹೊಡೆದು ಬಳಿಕ ನಮ್ಮ ಕಾರಿಗೂ ಗುದ್ದಿತು” ಎಂದು ವಿವರಿಸಿದರು. ಅಪಘಾತದ ದೃಶ್ಯ ಕಣ್ಣು ಮುಂದೆ ನಡೆದಿದ್ದು, ಅಲ್ಲಿ ಹಾಜರಿದ್ದವರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಯಿತು.
ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಪಘಾತದಿಂದಾಗಿ ಲಾರಿ ಮುಖ್ಯ ರಸ್ತೆಯಲ್ಲಿ ಅಡ್ಡಲಾಗಿ ನಿಂತಿದ್ದರಿಂದ ರಸ್ತೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದೀಗ ಲಾರಿಯನ್ನ ಕ್ರೇನ್ ಮೂಲಕ ತೆರವುಗೊಳಿಸಲಾಗಿದ್ದು, ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಅಲ್ಲದೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.
ಬೆಂಗಳೂರು ಭೀಕರ ಅಪಘಾತ: ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು, ಕಾರಿನಲ್ಲಿದ್ದ ಗರ್ಭಿಣಿಗೆ ಪಾರು!
By krutika naik
On: September 16, 2025 6:38 PM
---Advertisement---






