ಬೆಳ್ಳಾರೆ ಹತ್ತಿರದ ಅಯ್ಯನಕಟ್ಟೆಯಲ್ಲಿ ಬೆಚ್ಚಿಬೀಳಿಸುವಂತಹ ಘಟನೆ ವರದಿಯಾಗಿದೆ. ತೆಂಗಿನ ಕಾಯಿ ಕಿಳಿಯಲು ಅಲ್ಯೂಮಿನಿಯಂ ಗಳೆ ಬಳಸುತ್ತಿದ್ದಾಗ ಅದು ಆಕಸ್ಮಿಕವಾಗಿ ಹತ್ತಿರದಲ್ಲಿದ್ದ ವಿದ್ಯುತ್ ಲೈನ್ಗೆ ತಾಗಿದ್ದು, ತೀವ್ರ ಕರೆಂಟ್ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಅಚಾನಕ್ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ತೆಂಗಿನ ಕಾಯಿ ಕಿಳಿಯುವ ವೇಳೆ ಎಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಸಂಭವಿಸಬಹುದೆಂಬುದಕ್ಕೆ ಇದು ಒಂದು ಉದಾಹರಣೆ.
ಈ ದುರಂತದಲ್ಲಿ ಮೃತಪಟ್ಟವರು ತಂಬಿನಮಕ್ಕಿಯ ನಿವಾಸಿ ರಾಮ ಎಂದು ಗುರುತಿಸಲಾಗಿದೆ. ಪರಿಶ್ರಮಿ ಹಾಗೂ ಕುಟುಂಬದ ಆಧಾರಸ್ತಂಭರಾಗಿದ್ದ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರಲ್ಲಿ ಆಘಾತದ ಅಲೆ ಹರಡಿದೆ.
ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಮ ಅವರು ಅಯ್ಯನಕಟ್ಟೆಯ ನಿವಾಸಿಯೊಬ್ಬರ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ದುರ್ಘಟನೆ ಸಂಭವಿಸಿದೆ. ಆಕಸ್ಮಿಕ ವಿದ್ಯುತ್ ಶಾಕ್ನಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಬೆಳ್ಳಾರೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಸ್ವಾಭಾವಿಕ ಮರಣ ಪ್ರಕರಣವನ್ನು ದಾಖಲಿಸಲಾಗಿದೆ.






