---Advertisement---

ಹೂಡಾ(ಬಿ) ಗ್ರಾಮದ ಬಸಲಿಂಗಮ್ಮ – ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆ

On: September 16, 2025 6:05 AM
Follow Us:
ಹೂಡಾ(ಬಿ) ಗ್ರಾಮದ ಬಸಲಿಂಗಮ್ಮ – ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆ
---Advertisement---

ಸೇಡಂ ತಾಲೂಕು, ಹೂಡಾ(ಬಿ): ಸೇಡಂ ತಾಲೂಕಿನ ಹೂಡಾ(ಬಿ) ಗ್ರಾಮದ ದೊಡ್ಡ ಸುಬ್ಬಣ್ಣ ಮತ್ತು ಸಾಬಮ್ಮ ದಂಪತಿಯ ಪುತ್ರಿ ಬಸಲಿಂಗಮ್ಮ ದೊಡ್ಡ ಸುಬ್ಬಣ್ಣ ವಿಕಾರಾಬಾದ್ ಅವರು ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಈ ಸಾಧನೆ ಗ್ರಾಮದ ಹೆಮ್ಮೆ ಹೆಚ್ಚಿಸಿದ್ದು, ಕುಟುಂಬ, ಬಂಧುಬಳಗ ಮತ್ತು ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದೆ.

ಗ್ರಾಮದಲ್ಲಿ ಕೆಲವೇ ಸರ್ಕಾರಿ ನೌಕರರಿರುವ ಪರಿಸ್ಥಿತಿಯಲ್ಲಿಯೇ ಬಸಲಿಂಗಮ್ಮ ಅವರು ಸರ್ಕಾರಿ ಹುದ್ದೆ ಗಳಿಸಿರುವುದು ಗ್ರಾಮದ ಯುವಜನತೆಗೆ ಪ್ರೇರಣೆಯ ಬೆಳಕಾಗಿದೆ. ನಿರಂತರ ಪರಿಶ್ರಮ, ಶ್ರಮ ಮತ್ತು ಶಿಸ್ತಿನಿಂದ ಕನಸನ್ನು ನನಸು ಮಾಡಿಕೊಳ್ಳುವ ಮೂಲಕ ಅವರು “ಸಾಧಿಸಲು ಛಲವಿದ್ದರೆ ಯಾವ ಸಾಧನೆಯೂ ಅಸಾಧ್ಯವಲ್ಲ” ಎಂಬುದನ್ನು ಸಾಬೀತು ಮಾಡಿದ್ದಾರೆ.

ಬಸಲಿಂಗಮ್ಮ ಅವರ ಮುಂದಿನ ಗುರಿ ಕೆಎಎಸ್ ಅಧಿಕಾರಿಯಾಗುವದು. ಅವರ ಈ ಕನಸು ಕೂಡ ಶೀಘ್ರದಲ್ಲಿ ನೆರವೇರಲಿ ಎಂಬುದು ಗ್ರಾಮಸ್ಥರ ಹಾರೈಕೆ.

ಗ್ರಾಮದ ಹಲವು ಗಣ್ಯರು, ಶಿಕ್ಷಕರು ಮತ್ತು ಸಾರ್ವಜನಿಕರು ಅವರ ಸಾಧನೆಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದು, “ಈ ಸಾಧನೆ ನಮಗೂ, ನಮ್ಮ ಗ್ರಾಮಕ್ಕೂ ಹೆಮ್ಮೆಯ ಸಂಗತಿ. ಇಂತಹ ಗ್ರಾಮೀಣ ಪ್ರತಿಭೆಗಳು ಇನ್ನಷ್ಟು ಹೊರಹೊಮ್ಮಲಿ” ಎಂದು ಹೇಳಿದ್ದಾರೆ.

Join WhatsApp

Join Now

RELATED POSTS

2 thoughts on “ಹೂಡಾ(ಬಿ) ಗ್ರಾಮದ ಬಸಲಿಂಗಮ್ಮ – ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆ”

Comments are closed.