ಸೆಪ್ಟೆಂಬರ್ 14ರಂದು ನಡೆದ 2025ರ ಏಷ್ಯಾ ಕಪ್ ಗುಂಪು ಹಂತದ ಪಂದ್ಯದಲ್ಲಿ, ಭಾರತ ತಂಡ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಮಣಿಸಿತು. ಪಂದ್ಯ ಅಂತ್ಯವಾದ ಬಳಿಕ ಪಾಕಿಸ್ತಾನಿ ಆಟಗಾರರು ಕೈಕುಲುಕಲು ಎದುರು ನೋಡುತ್ತಿದ್ದರೂ, ಯಾವುದೇ ಭಾರತೀಯ ಆಟಗಾರರು ಹತ್ತಿರ ಹೋಗಲಿಲ್ಲ. ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ, ಅವರು ತಮ್ಮ ಸಹ ಆಟಗಾರ ಶಿವಂ ದುಬೆ ಅವರೊಂದಿಗೆ ಮೈದಾನದಿಂದ ಹೊರನಡೆದರು.
ಪಾಕಿಸ್ತಾನಿಗಳಿಗೆ ತಕ್ಕ ಉತ್ತರ ನೀಡಿದ ಸೂರ್ಯಕುಮಾರ್ ಯಾದವ್. ಸೂರ್ಯಕುಮಾರ್ ಯಾದವ್ ಮತ್ತು ಟೀಮ್ ಇಂಡಿಯಾ ಕೈಕುಲುಕದ ನಿರ್ಧಾರ ತಾಳಿದ ನಂತರ, ಭಾರತೀಯ ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಇದರ ವಿರುದ್ಧ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮಾಧ್ಯಮದಿಂದ ಹಿಡಿದು ಮಾಜಿ ಆಟಗಾರರವರೆಗೂ, “ಇದು ಕ್ರೀಡಾ ಮನೋಭಾವಕ್ಕೆ ಅವಮಾನ” ಎಂದು ಹೇಳುತ್ತಿದ್ದಾರೆ. ಆದರೆ ಸೂರ್ಯ ನೀಡಿದ ಸ್ಪಷ್ಟ ಉತ್ತರವು ಪಾಕಿಸ್ತಾನಿಗಳಿಗೆ ಮಾತೇ ಬಾರದಂತೆ ಮಾಡಿದೆ.
ಪಂದ್ಯ ಅಂತ್ಯವಾದ ಬಳಿಕ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಅಸಮಾಧಾನದಿಂದ ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ಗೆ ಹಾಜರಾಗಲಿಲ್ಲ. ಆದರೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಾತ್ರ ಪಾಕಿಸ್ತಾನಿಗಳಿಗೆ ಪಾಠ ಹೇಳಲು ಹಿಂದೆ ಸರಿಯಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಒಬ್ಬ ಪತ್ರಕರ್ತರು, “ಟೀಮ್ ಇಂಡಿಯಾಗೆ ಕೈಕುಲುಕದ ನಿರ್ಧಾರ ನಿಮ್ಮದೇನಾ ಅಥವಾ ಬೇರೆ ಯಾರದ್ದೇ?” ಎಂದು ಪ್ರಶ್ನಿಸಿದರು.
“ಜೀವನದಲ್ಲಿ ಕ್ರೀಡಾ ಮನೋಭಾವಕ್ಕಿಂತ ಕೆಲವು ವಿಷಯಗಳು ದೊಡ್ಡವು ಎಂದು ಹೇಳಿದರು. ”ನಾವು ಇಲ್ಲಿಗೆ ಕ್ರಿಕೆಟ್ ಆಡಲು ಮಾತ್ರ ಬಂದಿದ್ದೇವೆ ಮತ್ತು ಅದನ್ನೇ ನಾವು ಮಾಡಿದ್ದೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮರಣ ಹೊಂದಿದವರಿಗೆ ಮಾತ್ರ ಈ ಗೆಲುವು ಸಮರ್ಪಿತವಾಗಿದೆ ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ತಾನು ಈಗಾಗಲೇ ಹೇಳಿದ್ದೇನೆ ಮತ್ತು ಭಾರತೀಯ ಸಶಸ್ತ್ರ ಪಡೆಗಳು ನಮ್ಮನ್ನು ಖುಷಿಯಾಗಿರುವಂತೆ ನೋಡಿಕೊಳ್ಳುತ್ತದೆ. ಕ್ರಿಕೆಟ್ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ನಮ್ಮ ದೇಶಕ್ಕೆ ಸಂತೋಷವನ್ನು ನೀಡುತ್ತಲೇ ಇರಬೇಕು” ಎಂದು ಸೂರ್ಯ ಹೇಳಿದರು. ಸೂರ್ಯನ ಈ ಹೇಳಿಕೆಯು ನಿನ್ನೆ ರಾತ್ರಿಯಿಂದ ಕ್ರೀಡಾ ಮನೋಭಾವದ ಬಗ್ಗೆ ಮಾತನಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸಿದೆ.
IND vs PAK: ಕೈಕುಲುಕದ ಪ್ರಶ್ನೆಗೆ ಸೂರ್ಯ ನೀಡಿದ ತಿರುಗೇಟು ಪಾಕಿಸ್ತಾನಿಗಳನ್ನು ಮೌನಗೊಳಿಸಿದೆ!
By krutika naik
On: September 16, 2025 11:05 AM
---Advertisement---






