---Advertisement---

ನನಗೆ ವಿಷ ಕೊಡಿ ಪರಪ್ಪನ ಅಗ್ರಹಾರ ಜೈಲಿನ ಕಠಿಣ ಜೀವನದಿಂದ ದರ್ಶನ್ ಭಾವನಾತ್ಮಕ ಮನವಿ

On: September 9, 2025 9:10 AM
Follow Us:
ನನಗೆ ವಿಷ ಕೊಡಿ!’ – ಪರಪ್ಪನ ಅಗ್ರಹಾರ ಜೈಲಿನ ಕಠಿಣ ಜೀವನದಿಂದ ದರ್ಶನ್ ಭಾವನಾತ್ಮಕ ಮನವಿ
---Advertisement---

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್‌ನಲ್ಲಿ ರದ್ದು ಆಗುತ್ತಿದ್ದಂತೆಯೇ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಯಿತು. ಈ ಬಾರಿ ಯಾವುದೇ ವಿಶೇಷ ಸವಲತ್ತುಗಳನ್ನು ಅವರಿಗೆ ನೀಡದೆ, ಸಾಮಾನ್ಯ ಕೈದಿಗಳಂತೆ ಕಠಿಣ ನಿಯಮ ಪಾಲನೆ ಮಾಡಲಾಗುತ್ತಿದೆ.

ಜೈಲು ಜೀವನವೇ ನರಕ ಎಂದು ದರ್ಶನ್

ಪರಪ್ಪನ ಅಗ್ರಹಾರ ಜೈಲಿನ ಕಠಿಣ ನಿಯಮಗಳಿಂದ ತೀವ್ರವಾಗಿ ಹೈರಾಣಗೊಂಡ ದರ್ಶನ್, ನ್ಯಾಯಾಲಯದ ಮುಂದೆ ಭಾವನಾತ್ಮಕ ಮನವಿ ಮಾಡಿದ್ದಾರೆ. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಹೆಚ್ಚುವರಿ ದಿಂಬು ಹಾಗೂ ಬೇಡ್‌ಶೀಟ್ ಬೇಡಿಕೆಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಅವರು ವಿಡಿಯೋ ಕಾಲ್ ಮೂಲಕ ಹಾಜರಾಗಿದ್ದರು.

ವಿಚಾರಣೆಯ ಸಮಯದಲ್ಲಿ ದರ್ಶನ್ ಕೈ ಎತ್ತಿ,

“ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈಗಳಿಗೆ ಫಂಗಸ್ ಬಂದಿದೆ. ನನಗೆ ಮಾತ್ರ ಪಾಯಿಸನ್ ಕೊಡಿ. ಕೋರ್ಟ್ ನಿಂದಲೇ ಆದೇಶ ಬರಬೇಕು”ಎಂದು ಬೇಡಿಕೊಂಡಿದ್ದಾರೆ.

ಈ ಮಾತು ಕೇಳಿ ನ್ಯಾಯಾಧೀಶರು ಕ್ಷಣಕಾಲ ಬೆಚ್ಚಿಬಿದ್ದು,

“ಹಾಗೆ ಕೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ

ಸುಪ್ರೀಂ ಕೋರ್ಟ್ ದರ್ಶನ್ ಜಾಮೀನು ರದ್ದು ಮಾಡುವಾಗ, ಅವರಿಗೆ ಯಾವುದೇ ವಿಶೇಷ ಸವಲತ್ತು ಸಿಗಬಾರದು ಎಂಬುದಾಗಿ ಸ್ಪಷ್ಟ ಆದೇಶ ನೀಡಿತ್ತು. ಅದಕ್ಕಾಗಿ ಈ ಬಾರಿ ಜೈಲಿನಲ್ಲಿಯೂ ಅವರಿಗೂ ಸಾಮಾನ್ಯ ಕೈದಿಗಳಂತೆಯೇ ವ್ಯವಸ್ಥೆ ಮಾಡಲಾಗಿದೆ. ಇದರಿಂದಲೇ ದರ್ಶನ್ ಮಾನಸಿಕವಾಗಿ ಹೈರಾಣಗೊಂಡಿದ್ದಾರೆ ಎಂಬ ಸುದ್ದಿ ಈಗ ಹೊರಬಿದ್ದಿದೆ.

ಮುಂದಿನ ವಿಚಾರಣೆ

ನ್ಯಾಯಾಲಯ ದರ್ಶನ್ ಅವರ ಅರ್ಜಿಯನ್ನು 3 ಗಂಟೆಗೆ ಮುಂದೂಡಿದ್ದು, ಜೈಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುವುದಾಗಿ ತಿಳಿಸಿದೆ. ಈಗ ದರ್ಶನ್ ಗೆ ಹೆಚ್ಚುವರಿ ದಿಂಬು ಹಾಗೂ ಬೇಡ್‌ಶೀಟ್ ಸಿಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

Join WhatsApp

Join Now

RELATED POSTS

1 thought on “ನನಗೆ ವಿಷ ಕೊಡಿ ಪರಪ್ಪನ ಅಗ್ರಹಾರ ಜೈಲಿನ ಕಠಿಣ ಜೀವನದಿಂದ ದರ್ಶನ್ ಭಾವನಾತ್ಮಕ ಮನವಿ”

Leave a Comment