ಈ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಇದು ಕೇವಲ ದಂಡವಲ್ಲ, ಬಿಜೆಪಿ ಸರ್ಕಾರದಿಂದ ನಡೆಯುತ್ತಿರುವ ರಾಜಕೀಯ ಪ್ರತೀಕಾರ ಎಂದು ಆರೋಪಿಸಿದ್ದಾರೆ. “ನನ್ನ ವಾಹನಕ್ಕೆ ಬಂದಿರುವ ದಂಡದ ಚಲನ್‌ಗೆ ನಾನು ಪಾವತಿ ಮಾಡಲು ಹೇಳಿದ್ದೇನೆ. ಆದರೆ, ಇದು ಕೇವಲ ನಿಯಮ ಜಾರಿ ಅಲ್ಲ, ನಮ್ಮನ್ನು ಗುರಿಯಾಗಿಸಲು ನಡೆಯುತ್ತಿರುವ ರಾಜಕೀಯ ಆಟ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ.






