ಆರೋಪಿ ಶಿಕ್ಷಕ ಬಾಲಕಿಯ ತಂದೆಯನ್ನು ಕೊಲ್ಲುವಂತೆ ಬೆದರಿಕೆ ನೀಡಿರುವುದರಿಂದ, ಬಾಲಕಿ ಈ ಘಟನೆಯನ್ನು ಮುಚ್ಚಿಟ್ಟುಕೊಂಡಿದ್ದಳು. ಆದರೆ, ಶಾಲೆಗೆ ಹೋಗುವುದಕ್ಕೆ ನಿರಾಕರಿಸಿದ ಬಳಿಕ, ಘಟನೆಯ ಬಗ್ಗೆ ತನ್ನ ತಂದೆಗೆ ತಿಳಿಸಿದಾಗಲೇ ಇದು ಬೆಳಕಿಗೆ ಬಂತು. ನಂತರ, 28 ಸೆಪ್ಟೆಂಬರ್ 2025ರಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ದಾಖಲಿಸಿದ್ದು, ಪ್ರಕರಣ ತಡವಾಗಿ ಸಾರ್ವಜನಿಕ ಗಮನಕ್ಕೆ ಬಂದಿದೆ.
ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿ ಶಿಕ್ಷಕ ರಯೀಸ್ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ತೀವ್ರಗೊಳಿಸಲಾಗಿದೆ. ಪೊಲೀಸ ಮೂಲಗಳ ಪ್ರಕಾರ, ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಈಗಾಗಲೇ ನಡೆಯುತ್ತಿದೆ.
ತಂದೆಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಶಿಕ್ಷಕ. ಇದರಿಂದ ಬೆದರಿದ ಬಾಲಕಿಯು ಘಟನೆಯನ್ನು ಮುಚ್ಚಿಟ್ಟಿದ್ದಳು. ಆದರೆ, ಆಕೆ ಶಾಲೆಗೆ ಹೋಗಲು ನಿರಾಕರಿಸಿದಾಗ, ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಘಟನೆ ತಂದೆಯ ಗಮನಕ್ಕೆ ಬಂದಿದೆ. ಆಗಷ್ಟ 28, 2025ರಂದು ಬಾಲಕಿಯ ತಂದೆ ದೂರು ದಾಖಲಿಸಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಪ್ರಕಟವಾಗಿದಂತೆ ಸ್ಥಳೀಯರು ಅತ್ಯಂತ ಕೋಪಗೊಂಡಿದ್ದು, ಶಾಲೆಯ ಆಡಳಿತದ ಬಗ್ಗೆ ತೀವ್ರ ಪ್ರಶ್ನೆಗಳು ಎದ್ದು ಬಂದಿವೆ. ಬಾಲಕಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಚಿಕಿತ್ಸೆ ಮತ್ತು ಬೆಂಬಲ ನೀಡಲು ಸ್ಥಳೀಯರು ನಿರಂತರ ಒತ್ತಾಯ ಮಾಡುತ್ತಿದ್ದಾರೆ.






