ಧಾರವಾಡದ ಬೈಕ್ ಸವಾರರೇ, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಹೀಗೆ ಆಗತ್ತೆ ನೋಡಿ. ಒಬ್ಬ ಸವಾರನಿಗೆ 45 ಟಿಎಂಸಿ ಕೇಸ್ ದಾಖಲಾಗಿದ್ದು, ಪೊಲೀಸರೇ ಅವರಿಗೆ ದಂಡದ ಚಲಾನ್ ಕಟ್ಟಿ ಕೊಟ್ಟಿದ್ದು, 50% ರಿಯಾಯಿತಿ ಒಳಗೊಂಡಂತೆ 12 ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಚಾರಿ ಠಾಣೆಯ ಪೊಲೀಸರು ಸ್ವತಃ ಆ ಬೈಕ್ ಸವಾರನ ಮನೆಗೆ ತೆರಳಿ, ರಿಯಾಯಿತಿಯ ಅಡಿಯಲ್ಲಿ ವಿಧಿಸಲಾದ ಮೊತ್ತವನ್ನು ವಸೂಲಿಸಿ, ದಂಡದ ರಶೀದಿ ಹಸ್ತಾಂತರಿಸಿದರು. ಇದರಿಂದಾಗಿ ಅಜಯ್ ಕಲಾಲ್ ಅವರ ಮೇಲೆ ಬಾಕಿ ಉಳಿದಿದ್ದ ಅನೇಕ ಕೇಸುಗಳಿಗೆ ಸಂಬಂಧಿಸಿದ ದಂಡ ಪಾವತಿ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಂಡಿತು.
ಧಾರವಾಡದ ಅಜಯ್ ಕಲಾಲ್ ಎಂಬುವವರ ಮನೆಗೆ ಹೋದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ವಿಠಲ ಮಾಯಣ್ಣವರ ಹಾಗೂ ಮಂಜುನಾಥ್ ಹಟ್ಟಿಮನಿ ಅವರು, ಬೈಕ್ ಸವಾರನಿಗೆ ದಂಡದ ರಶೀದಿ ನೀಡಿ ರಿಯಾಯಿತಿ ಪ್ರಕಾರ 12,250 ರೂಪಾಯಿ ದಂಡ ಪಾವತಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ನಮ್ಮನ್ಯಾರು ಟ್ರಾಫಿಕ್ ಪೊಲೀಸರು ಗಮನಿಸಿಲ್ಲ ಎಂದು ಸಂಚಾರಿ ನಿಯಮ ಗಾಳಿಗೆ ತೂರಿ ವಾಹನ ಚಲಾಯಿಸುವವರಿಗೆ ಈಗ ಧಾರವಾಡ ಸಂಚಾರಿ ಠಾಣೆಯ ಪೊಲೀಸರು 50% ಆಫ್ ನೀಡುವುದರ ಜತೆಗೆ ದಂಡ ಪಾವತಿಸಿಕೊಳ್ಳುವ ಮೂಲಕ ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಗೆ ಬಿಸಿಮುಟ್ಟಿಸಿದ್ದಾರೆ.






