ಬೀದರ್ ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ದಾಳಿ ನಡೆಸಿದರು. ಎರಡು ಕಡೆ ಶೋಧ ನಡೆಸಿ 2.20 ಕೋಟಿ ರೂ. ಮೌಲ್ಯದ ಪಾನ್ ಮಸಾಲಾ ಮತ್ತು ತಂಬಾಕು ವಸ್ತುಗಳನ್ನು ವಶಪಡಿಸಿಕೊಂಡರು. ಗಾಂಧಿಗಂಜ್ ಠಾಣೆ ವ್ಯಾಪ್ತಿಯ ಚಿದ್ರಿಬುತ್ತಿ ಬಸವಣ್ಣ ಹತ್ತಿರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗುಟ್ಕಾ ಸಾಮಗ್ರಿ ಪತ್ತೆಯಾಯಿತು. ಮೂಟೆಗಟ್ಟಲೇ ಪಾನ್ ಮಸಾಲಾ ಮತ್ತು ಕಲಬೆರಕೆ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದರು. ಈ ಕಾರ್ಯಾಚರಣೆಯಿಂದ ಅಕ್ರಮ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ.
ಕೋಳಾರ ಕೈಗಾರಿಕಾ ಪ್ರದೇಶದಲ್ಲಿರುವ ಶೇಡ್ ಮೇಲೆ ನೂತನ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಹೊರಗೆ ‘ಟು ಲೆಟ್’ ಬೋರ್ಡ್ ಹಾಕಿದ್ದರೂ, ಒಳಗೆ ಪರವಾನಗಿ ಇಲ್ಲದೆ ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾದ ರಾಸಾಯನಿಕ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಸುಮಾರು 43.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, 2 ಪ್ರಕರಣಗಳಲ್ಲಿ 8 ಜನರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಹೆಚ್ಚಿನವರು ಹೊರ ರಾಜ್ಯದವರು. ಬಂಧಿತರು ಹೈದರಾಬಾದ್ ಮೂಲದ ತನ್ವೀರ್, ಬೀದರ್ ಮೂಲದ ರಿಜ್ವಾನ್, ಬೀದರ್ ಮೂಲದ ತನ್ವೀರ್ ಶೇರಿಕಾರ್, ಮಣಿಪುರ ಮೂಲದ ಯಾಸೀನ್, ಮಣಿಪುರ ಮೂಲದ ಎಂ.ಡಿ. ಸಿರಾಜ್, ಮಣಿಪುರ ಮೂಲದ ಎಂಡಿ ಶರೀಫ್, ಮಣಿಪುರ ಮೂಲದ ಎಂಡಿ. ಅನಾಸ್, ಮಣಿಪುರ ಮೂಲದ ಎಂಡಿ ರೋಹಿತ್, ಮಣಿಪುರ ಮೂಲದ ಚೇಸಾನ್, ಮಣಿಪುರ ಮೂಲಕ ಮೊಹ್ಮದ್ ಅನಾಸ್, ಬೀದರ್ ಮೂಲದ ಬಸೀರುದ್ದೀನ್ ಎಂದು ಎಸ್ಪಿ ಪ್ರದೀಪ್ ಗುಂಟೆ ಮಾಹಿತಿ ನೀಡಿದ್ದಾರೆ.
ಬಂಧಿತರ ವಿರುದ್ಧ ಬಿಎನ್ಎಸ್ ಕಾಯ್ದೆ 2023ರ ಕಲಂ 7 ಹಾಗೂ ಕೋಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ. ಹೊರರಾಜ್ಯದವರು ಕರ್ನಾಟಕಕ್ಕೆ ಬಂದು ಕಲಬೆರಕೆ ಗುಟ್ಕಾ ತಯಾರಿಸಿ ಕೋಟಿ ಕೋಟಿ ರೂ. ಲಾಭ ಗಳಿಸುತ್ತಿದ್ದರು ಎಂಬುದು ಪತ್ತೆಯಾಗಿದೆ. ಇಂತಹ ಅಪರಾಧಿಗಳು ಮತ್ತೆ ಚಿಗುರದಂತೆ ಪೊಲೀಸರು ಕಠಿಣ ಕ್ರಮ ಕೈಗೊಂಡು ಕಣ್ಣಿನ ಮೇಲೆ ಕಣ್ಣು ಇಡುವ ಅಗತ್ಯವಿದೆ.
ಬೀದರ್ 2.20 ಕೋಟಿ ರೂ ಮೌಲ್ಯದ ಪಾನ್ ಮಸಾಲಾ ಮತ್ತು ತಂಬಾಕು ವಶಕ್ಕೆ , ಎಂಟು ಮಂದಿ ಬಂಧನ
By krutika naik
On: September 6, 2025 1:12 PM
---Advertisement---






