---Advertisement---

ಶಾಸಕ ನಾರಾ ಭರತರೆಡ್ಡಿ: ಬಳ್ಳಾರಿಯ ಸಂಪೂರ್ಣ ಅಭಿವೃದ್ಧಿ ಹೊಣೆ ನನ್ನ ಮೇಲಿದೆ.

On: September 5, 2025 7:32 AM
Follow Us:
ಶಾಸಕ ನಾರಾ ಭರತರೆಡ್ಡಿ: ಬಳ್ಳಾರಿಯ ಸಂಪೂರ್ಣ ಅಭಿವೃದ್ಧಿ ಹೊಣೆ ನನ್ನ ಮೇಲಿದೆ.
---Advertisement---

ಬಳ್ಳಾರಿಯ ಸಂಪೂರ್ಣ ಅಭಿವೃದ್ಧಿ ಹೊಣೆ ನನ್ನ ಮೇಲಿದೆ ಎಂದು ಶಾಸಕ ನಾರಾ ಭರತರೆಡ್ಡಿ ತಿಳಿಸಿದ್ದಾರೆ. ಬಳ್ಳಾರಿ ನಗರದ 17ನೇ ವಾರ್ಡಿನ ಹನುಮಾನ್ ನಗರದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನಾನು ಶಾಸಕನಾಗಬೇಕು ಎಂದು ಜನರು ಮತ ನೀಡಿ ಆಶೀರ್ವದಿಸಿದ್ದಾರೆ. ನನ್ನ ಗೆಲುವಿಗಾಗಿ ಅನೇಕರು ಪ್ರತ್ಯಕ್ಷವಾಗಿ – ಪರೋಕ್ಷವಾಗಿ ಶ್ರಮಿಸಿದ್ದಾರೆ” ಎಂದರು.

“ಕಾಂಗ್ರೆಸ್ ಪಕ್ಷ ಒಂದು ಕುಟುಂಬ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿರುವ ಕಾರ್ಯಕರ್ತರಿಗೆ ಅರ್ಹ ಹುದ್ದೆಯನ್ನು ಸೂಕ್ತ ಕಾಲದಲ್ಲಿ ನೀಡುವುದು ನಮ್ಮ ಜವಾಬ್ದಾರಿ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಎಲ್ಲರನ್ನೂ ಸ್ವಾಗತಿಸುವೆ” ಎಂದು ಹೇಳಿದರು.

“ಈಗ ಪಕ್ಷ ಸೇರ್ಪಡೆ ಆಗಿರುವ ಹೊನ್ನೂರಪ್ಪ ಮತ್ತು ಅವರ ಪುತ್ರರು ಹಾಗೂ ಇತರ ಬೆಂಬಲಿಗರು ಮೊದಲು ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಕಾರಣಾಂತರಗಳಿಂದ ಬೇರೆ ಪಕ್ಷಕ್ಕೆ ಹೋಗಿ, ಈಗ ಪುನಃ ಮಾತೃ ಪಕ್ಷಕ್ಕೆ ಹಿಂದಿರುಗಿದ್ದಾರೆ. ಇವರೆಲ್ಲರಿಗೂ ಸ್ವಾಗತ” ಎಂದರು.

“ಬಳ್ಳಾರಿ ವಿಧಾನ ಸಭಾ ಕ್ಷೇತ್ರದಲ್ಲಿ 1,200 ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಆರಂಭವಾಗಿದೆ, ಪ್ರಾಥಮಿಕ ಹಂತದಲ್ಲಿ 260 ಕೋಟಿ ರೂ.ಗಳ ಟೆಂಡರ್ ಆಗಿದ್ದು, ಸರ್ವೇ ಕಾರ್ಯ, ಪೈಪಲೈನ್-ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಪೂರ್ವಭಾವಿ ಕೆಲಸಗಳು ನಡೆದಿವೆ” ಎಂದು ಅಭಿವೃದ್ದಿ ಕುರುತು ಮಾತನಾಡಿದರು.

ಡಿಸಿಸಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, “ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಹೊಂದಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವ ಪ್ರತಿಯೊಬ್ಬರಿಗೂ ಸ್ವಾಗತ” ಎಂದರು.

ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಹಗರಿ ಗೋವಿಂದ, ಮಾಜಿ ಮೇಯರ್ ರಾಜೇಶ್ವರಿ, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ರಾಮಾಂಜನೇಯ, ಜಬ್ಬಾರ್, ಶಿವರಾಜ್, ರಾಕಿ, ಬ್ಲಾಕ್ ಅಧ್ಯಕ್ಷ ಅಭಿಲಾಶ್, ಥಿಯೇಟರ್ ಶಿವು, ರಘು, ನಾಗರಾಜ, ಬಾಲರಾಜು ಮೊದಲಾದವರು ಹಾಜರಿದ್ದರು.

17ನೇ ವಾರ್ಡಿನ ಹಿರಿಯರಾದ ಹೊನ್ನೂರಪ್ಪ ಮತ್ತವರ ಪುತ್ರರಾದ ಸತೀಶ್, ಸಚಿನ್, ಸೋಮಶೇಖರ, ನಿವೃತ್ತ ತಹಶೀಲ್ದಾರ ರಂಗಮ್ಮ, ಶಿವಮೂರ್ತಿ, ಯೋಗೇಂದ್ರ ರೆಡ್ಡಿ, ಅವಿನಾಶ್, ಕಾರ್ತಿಕ್ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಶಾಸಕ ನಾರಾ ಭರತ್ ರೆಡ್ಡಿಯವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment