ನೇಹಾ ಹಿರೇಮಠ ಹತ್ಯೆ ಪ್ರಕರಣ ಸಂಬಂಧ ಹಂತಕ ಫಯಾಜ್ ಜಾಮೀನಿಗಾಗಿ ಹೈಕೋರ್ಟ್ಗೆ ಹಾಜರಾದಿದ್ದಾರೆ. ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ತಡೆಯಲ್ಪಟ್ಟರೂ, ಹಂತಕ ಇನ್ನೂ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಸೆಪ್ಟೆಂಬರ್ 3ರಂದು ಧಾರವಾಡ ಹೈಕೋರ್ಟ್ನಲ್ಲಿ ಫಯಾಜ್ ಜಾಮೀನಿನ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂಚೆ ಹುಬ್ಬಳ್ಳಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಬಂಧನ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ ಮತ್ತು ಪೋಷಕರಿಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಈ ನೆಲೆಯನ್ನು ಉಲ್ಲೇಖಿಸಿ, ಫಯಾಜ್ ಪರ ವಕೀಲರು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಹಂತಕ ಕಳೆದ 1 ವರ್ಷ 5 ತಿಂಗಳಿಂದ ಧಾರವಾಡ ಕಾರಾಗೃಹದಲ್ಲಿದ್ದಾನೆ.
ಇನ್ನೂ ಜಾಮೀನಿನ ಮೇಲೆ ಹೊರಬರುವ ಫಯಾಜ್ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಈಗ ಹೈಕೋರ್ಟ್ ಮೊರೆ ಹೋದ ಫಯಾಜ್ ಪರ ವಕೀಲರು, ಏಪ್ರಿಲ್ 18, 2024ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಲು ಸರ್ಕಸ್ ನಡೆಸಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ವಾಮ ಮಾರ್ಗದ ಮೂಲಕ ಜಾಮೀನಿಗಾಗಿ ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯ ಮಗಳಿಗೆ ನ್ಯಾಯಕೊಡಿಸುವ ಭರವಸೆ ಇದೆ ಎಂದು ನೇಹಾ ತಂದೆ ಹೇಳಿದ್ದಾರೆ. ಆರೋಪಿ ಫಯಾಜ್ ಪರ ವಕೀಲರು ಜಾಮೀನಿಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಎಳೆದು ತಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ನೀಡಲಾಗಿದೆ. ಇದರಂತೆ ಫಯಾಜ್ಗೂ ಜಾಮೀನು ನೀಡಿ ಎಂಬ ವಾದವನ್ನು ಫಯಾಝ್ ಪರ ವಕೀಲು ಮಂಡಿಸಿದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಇಲ್ಲಿ ಆರೋಪಿ ಫಯಾಜ್ಗೆ ಜಾಮೀನು ನೀಡಿ ಎಂದು ವಾದಿಸಿದ್ದಾರೆ. ದರ್ಶನ್ ಪ್ರಕರಣ ಮುಂದಿಟ್ಟು ಜಾಮೀನು ಕೇಳುವುದು ಸರಿಯಲ್ಲ. ದರ್ಶನ್ ನಟನೆ ಮಾದರಿಯಾಗಲಿ, ಆದರೆ ಇಂತಹ ವಿಚಾರಗಳಲ್ಲಿ ಎಂದು ನೇಹಾ ತಂದೆ ಅಸಮಧಾನ ಹೊರಹಾಕಿದ್ದಾರೆ.
ಇನ್ನು ಕಳೆದ ವರ್ಷ, ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರೀತಿಯಲ್ಲಿ ಬಲೆಯಲ್ಲಿ ಬೀಳಿಸಲು ಆರೋಪಿ ಫಯಾಜ್ ಭಾರಿ ರಣತಂತ್ರ ಹೂಡಿದ್ದ. ಆದರೆ ಯಾವುದು ಫಲಿಸದಾಗ, ನೇರವಾಗಿ ನೇಹಾ ಹಿರೇಮಠ ಮೇಲೆ ದಾಳಿ ನಡೆಸಿದ್ದ. ಕಾಲೇಜು ಕ್ಯಾಂಪಸ್ಗೆ ನುಗ್ಗಿದ ಆರೋಪಿ ಫಯಾಜ್ ಚಾಕುವಿನಿಂದ ನೇಹಾ ಮೇಲೆ ದಾಳಿ ಮಾಡಿದ್ದ. ಗಂಭೀರ ಗಾಯಗೊಂಡ ನೇಹಾ ಹಿರೇಮಠ ಮೃತಪಟ್ಟಿದ್ದಳು. ಈ ಪ್ರಕರಣ ಕರ್ನಾಟಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.






