ಭಾರೀ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಪರಿಶೀಲನೆ – ರೈತರಿಗೆ ತುರ್ತು ನೆರವು ಭರವಸೆ

ಗ್ರಾಮಗಳ ಪ್ರವಾಸದ ವೇಳೆ ಸಂಸದರು ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಅವರ ಅಳಲುಗಳನ್ನು ಆಲಿಸಿದರು. ಅವರು ಬೆಳೆದಿದ್ದ ಜೋಳ, ಸೊಯಾಬಿನ್ ಹಾಗೂ ಇತರ ಖರೀಫ್ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿರುವುದು ಗಮನಿಸಿದರು. ಮಳೆಯಿಂದ ಉಂಟಾದ ಆರ್ಥಿಕ ಸಂಕಷ್ಟ, ಪಶು ಆಹಾರದ ತೊಂದರೆ ಮತ್ತು ಹೊಲಗಳಲ್ಲಿ ನಿಂತಿರುವ ನೀರಿನ ಸಮಸ್ಯೆಗಳನ್ನು ಗ್ರಾಮಸ್ಥರು ಸಂಸದರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸಾಗರ ಖಂಡ್ರೆ ಅವರು, “ಈ ಪರಿಸ್ಥಿತಿಯನ್ನು ನಾನು ಸರ್ಕಾರದ ಗಮನಕ್ಕೆ ತಂದು, ತುರ್ತು ಪರಿಹಾರ ಒದಗಿಸಲು ಮತ್ತು ಪರಿಹಾರಧನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ರೈತರಿಗೆ ತಕ್ಷಣ ಸಹಾಯ ದೊರೆಯುವಂತೆ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು,” ಎಂದು ಭರವಸೆ ನೀಡಿದರು.
ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯತ್ ಸದಸ್ಯರು, ಕೃಷಿ ಅಧಿಕಾರಿಗಳು ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.






