ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ, ತನ್ನ 18 ವರ್ಷದ ಮಗಳು ಅನ್ಯಜಾತಿಯ ಹುಡುಗನೊಂದಿಗೆ ಪ್ರೀತಿಯಲ್ಲಿ ತೊಡಗಿದ್ದ ಕಾರಣಕ್ಕೆ, ತಂದೆಯೇ ಕೊಂದು ಸುಟ್ಟು ಹಾಕಿರುವ ದಾರುಣ ಘಟನೆ ನಡೆದಿದೆ. ಇದರ ಮೂಲಕ ಕೆಲ ದಿನಗಳಿಂದ ಶಾಂತವಾಗಿದ್ದ ಮರ್ಯಾದೆ ಹತ್ಯೆಯ ವಿಷಯ ಮತ್ತೆ ಚರ್ಚೆಗೆ ಬಂದಿದೆ.
ಹತ್ಯೆಗೀಡಾದ ಮಗಳ ಹೆಸರು ಕವಿತಾ. ಪ್ರಕರಣದ ಹಿನ್ನೆಲೆಯಲ್ಲಿ ಫರಹತಾಬಾದ್ ಠಾಣೆಯ ಪೊಲೀಸರು ತಂದೆ ಶಂಕರ್ ಕೊಳ್ಳುರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಸಹಕಾರ ನೀಡಿದ ಶರಣು ಹಾಗೂ ದತ್ತಪ್ಪರಿಗೂ ಪೊಲೀಸರು ಸುತ್ತು ಹಾಕಿದ್ದಾರೆ.
ಲಿಂಗಾಯತ ಸಮುದಾಯದ ಕವಿತಾ, ಅದೇ ಗ್ರಾಮದ ಕುರುಬ ಸಮಾಜದ ಮಾಳಪ್ಪ ಪೂಜಾರಿಯೊಂದಿಗೆ ಪ್ರೀತಿಸುತ್ತಿದ್ದಳು. ಪಿಯುಸಿ ಕಲಿಯಲು ಕಲಬುರಗಿಗೆ ಹೋಗುವಾಗ ಇವರಿಬ್ಬರು ಹತ್ತಿರವಾದರು. ಮೂರು–ನಾಲ್ಕು ತಿಂಗಳ ಹಿಂದೆ ಪ್ರೇಮದ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆಯೇ, ಆಕೆಗೆ ಓದು ನಿಲ್ಲಿಸಲಾಯಿತು.
ಈ ಮಧ್ಯೆ ಕವಿತಾ ಮಾಳಪನನ್ನು ಮದುವೆ ಆಗುತ್ತೇನೆ. ಮದುವೆ ಮಾಡದಿದ್ದರೆ ಓಡಿ ಹೋಗುತ್ತೇನೆ ಎಂದು ಹೇಳಿದ್ದಳು. ಮನೆಯವರು ಅನ್ಯ ಜಾತಿಯ ಯುವಕನನ್ನು ಮದುವೆ ಆಗುವುದನ್ನು ನಿರಾಕರಿಸಿದ್ದು, ಹೆದರಿಸಿದ್ದಾರೆ. ಆದರೂ ಕವಿತಾ ಪಟ್ಟು ಬಿಡದೇ ಮದುವೆ ಆಗುತ್ತೇನೆಂದು ಹಠ ಹಿಡಿದಿದ್ದಳು.
ವಿಷ ಕುಡಿದಿರುವುದಾಗಿ ಕಥೆ ಕಟ್ಟಿದ್ದ ತಂದೆ
ಈ ನಡುವೆ ಮಧ್ಯರಾತ್ರಿ ಯುವತಿ ತಂದೆ ಶಂಕರ್, ಸಹೋದರ ಶರಣು, ಸಂಬಂಧಿ ದತ್ತು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಕ್ರಿಮಿನಾಶಕ ಸಿಂಪಡಿಸಿ ವಿಷ ಸೇವಿಸಿ, ಮೃತಪಟ್ಟಿದ್ದಾಳೆಂದು ಬಿಂಬಿಸಿದ್ದಾರೆ. ನಂತರ ಬೆಳಗ್ಗೆ 9ಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಸಂಬಂಧಿಕರ ಜಮೀನಿನಲ್ಲಿ ದೇಹವನ್ನು ಸುಟ್ಟು ಹಾಕಿದ್ದಾರೆ.
ಹೆತ್ತ ಮಗಳನ್ನು ಕೊಂದು ಮೊದಲು ಆತ್ಮಹತ್ಯೆ ಕುಡಿದುಕೊಂಡಿದ್ದಾಳೆಂದು ಬಿಂಬಿಸಿದ್ದರು. ಆದರೆ ಪೊಲೀಸರ ತನೀಖೆಯ ವೇಳೆ ಈ ಘನಘೋರ ಕೃತ್ಯ ಬಯಲಾಗಿದೆ. ಇಂತಹದೊಂದು ಘೋರ ಕೃತ್ಯಕ್ಕೆ ಇಡೀ ಜಿಲ್ಲೆ ಬೆಚ್ಚಿ ಬಿದಿದ್ದು, ಊರಿಗೆ ಊರೇ ಬೂದಿ ಮುಚ್ಚಿದ ಕೆಂಡದಂತಾಗಿದೆ. ಯಾಕೆಂದರೆ ಇಡೀ ಗ್ರಾಮದಲ್ಲಿ ಯಾರೂ ಕೂಡ ಮಾತನಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಪಿಐ ಮಂಜುನಾಥ ಇಕ್ಕಳಕಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಒಟ್ಟಿನಲ್ಲಿ ಇಷ್ಟು ದಿನ ರಾಜ್ಯದಲ್ಲಿ ತಣ್ಣಗಾಗಿದ್ದ ಮರ್ಯಾದೆ ಹತ್ಯೆ ಎಂಬ ಕೃತ ಮತ್ತೆ ಮುನ್ನಲೆಗೆ ಬಂದಿದ್ದು ನಿಜಕ್ಕೂ ದುರಂತವೇ ಸರಿ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ನಡುವೆ ಕವಿತಾ, “ನಾನು ಮಾಳಪ್ಪನನ್ನೇ ಮದುವೆಯಾಗುತ್ತೇನೆ. ಮದುವೆ ಆಗದಿದ್ದರೆ ಮನೆ ಬಿಟ್ಟು ಓಡಿ ಹೋಗುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಳು. ಆದರೆ ಮನೆಯವರು ಅನ್ಯಜಾತಿಯ ಹುಡುಗನನ್ನು ಮದುವೆಯಾಗುವುದನ್ನು ತೀವ್ರವಾಗಿ ವಿರೋಧಿಸಿ, ಆಕೆಯನ್ನು ಬೆದರಿಸಿದ್ದರು. ಆದರೂ ಕವಿತಾ ತನ್ನ ಹಠ ಬಿಡದೆ ಮದುವೆಯಾಗುವುದರಲ್ಲೇ ಒತ್ತಾಯಿಸುತ್ತಿದ್ದಳು.
ತಂದೆ ಶಂಕರ್ ಮೊದಲು “ಮಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಸುಳ್ಳು ಕಥೆ ಕಟ್ಟಿದ್ದ. ಆದರೆ ನಿಜವಾಗಿ ಮಧ್ಯರಾತ್ರಿ ತಂದೆ ಶಂಕರ್, ಸಹೋದರ ಶರಣು ಮತ್ತು ಸಂಬಂಧಿ ದತ್ತಪ್ಪರು ಸೇರಿ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಕ್ರಿಮಿನಾಶಕ ಸಿಂಪಡಿಸಿ “ವಿಷ ಸೇವಿಸಿ ಸತ್ತಿದ್ದಾಳೆ” ಎಂದು ಬಿಂಬಿಸಿದರು. ಬೆಳಗ್ಗೆ 9 ಗಂಟೆ ವೇಳೆಗೆ ಸಂಬಂಧಿಕರ ಜಮೀನಿಗೆ ದೇಹವನ್ನು ಕೊಂಡೊಯ್ದು ಸುಟ್ಟು ಹಾಕಿದರು.
ಮಗಳ ಹತ್ಯೆಯನ್ನು ಆತ್ಮಹತ್ಯೆಯಂತೆ ತೋರಿಸಲು ಯತ್ನಿಸಿದರೂ, ಪೊಲೀಸರ ತನಿಖೆಯಲ್ಲಿ ನಿಜ ಬೆಳಕಿಗೆ ಬಂದಿದೆ. ಈ ಕೃತ್ಯ ಇಡೀ ಜಿಲ್ಲೆ ಬೆಚ್ಚಿಬೀಳುವಂತೆ ಮಾಡಿದ್ದು, ಊರಿನಲ್ಲಿ ಯಾರೂ ಮಾತನಾಡದಂತಹ ಭೀತಿಯ ವಾತಾವರಣ ನಿರ್ಮಾಣವಾಗಿದೆ.






