ಇನ್ಸ್ಟೆಂಟ್ ನೂಡಲ್ಸ್ ಇಂದಿನ ಕಾಲದಲ್ಲಿ ಎಲ್ಲರಿಗೂ ಬಹಳ ಇಷ್ಟ. ಹಸಿವಾದಾಗ ತಕ್ಷಣವೇ ಪ್ಯಾಕ್ ತೆರೆದು, ಕೆಲವು ನಿಮಿಷ ಬೇಯಿಸಿ ತಿಂದರೆ ಸಾಕು. ಬೇಗ ತಯಾರಾಗುವ ಕಾರಣ, ಇದನ್ನು ಹೆಚ್ಚು ಜನರು ತಮ್ಮ ಮೆಚ್ಚಿನ ತಿಂಡಿಯಾಗಿ ಮಾಡಿಕೊಂಡಿದ್ದಾರೆ. ಕೇವಲ ಐದು ನಿಮಿಷದಲ್ಲಿ ತಯಾರಾಗುವ ನೂಡಲ್ಸ್, ಹಸಿವನ್ನು ತಣಿಸುವ ತ್ವರಿತ ಪರಿಹಾರವಾಗಿದೆ.
ಇನ್ಸ್ಟೆಂಟ್ ನೂಡಲ್ಸ್‌ಗಳ ರುಚಿಯೇ ಜನರನ್ನು ಸೆಳೆಯುವ ಪ್ರಮುಖ ಕಾರಣ. ಅಗ್ಗದ ಬೆಲೆಗೆ ದೊರೆಯುವ ಈ ತಿಂಡಿ ಹೋಟೆಲ್‌ಗಳಲ್ಲಿ 100–200 ರೂಪಾಯಿಗೇ ಜನರು ಬಾಯಿಚಪ್ಪರಿಸಿ ಸವಿಯುತ್ತಾರೆ. ಒಂದಾನೊಂದು ಕಾಲದಲ್ಲಿ ಮ್ಯಾಗಿ ನೂಡಲ್ಸ್‌ನಲ್ಲಿ ಹಾನಿಕಾರಕ ಪದಾರ್ಥ ಪತ್ತೆಯಾಗಿ ಅದನ್ನು ನಿಷೇಧಿಸಿದ್ದೇ ನೆನಪಿಗೆ ಬರುತ್ತದೆ. ಆದರೆ ನಂತರ ಅದರಲ್ಲಿ ಇರುವ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಿ, ಹೊಸ ಪ್ಯಾಕ್ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ ಮತ್ತೆ ಜನಪ್ರಿಯತೆಯನ್ನು ಗಳಿಸಿತ್ತು.
ಈಗೊಂದು ಬೆಚ್ಚಿಬೀಳಿಸುವ ಘಟನೆ ಈಜಿಪ್ಟ್‌ನಲ್ಲಿ ನಡೆದಿದೆ. ಕೇವಲ 13 ವರ್ಷದ ಬಾಲಕನು ಮೂರು ಪ್ಯಾಕೆಟ್ ನೂಡಲ್ಸ್ ತಿಂದು ಸಾವನ್ನಪ್ಪಿದ್ದಾನೆ. ಈ ನೂಡಲ್ಸ್‌ನಲ್ಲಿ ಇರುವ ಟೇಸ್ಟರ್ ವಿಷಕಾರಿ ಎಂಬುದು ಹಲವು ಬಾರಿ ಬಹಿರಂಗವಾಗಿದ್ದರೂ, ಈ ಪ್ರಕರಣದಲ್ಲಿ ಬಾಲಕನು ನೂಡಲ್ಸ್‌ನ್ನು ಬೇಯಿಸದೆ ತಿಂದಿದ್ದಾನೆ. ತಿಂದ ಒಂದು ಗಂಟೆಯೊಳಗೆ ಹೊಟ್ಟೆನೋವು, ವಾಂತಿ, ಬೆವರು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.
ಅಧಿಕಾರಿಗಳು ನೂಡಲ್ಸ್ ವಿಷಪೂರಿತವೋ ಅಥವಾ ಅವಧಿ ಮೀರಿದದ್ದೋ ಎಂದು ಶಂಕಿಸಿದ್ದರು. ನಂತರ ಅದನ್ನು ಮಾರಾಟ ಮಾಡಿದ ಅಂಗಡಿಯ ಮಾಲಿಕನನ್ನು ವಿಚಾರಣೆ ಮಾಡಲಾಯಿತು. ಆದರೆ ಪ್ರಯೋಗಾಲಯ ಪರೀಕ್ಷೆ ಮತ್ತು ಶವಪರೀಕ್ಷೆಯ ನಂತರ, ಬಾಲಕನ ಸಾವಿಗೆ ಕಾರಣವಾಗಿದ್ದು ಕಚ್ಚಾ ನೂಡಲ್ಸ್ ತಿಂದ ಪರಿಣಾಮ ಉಂಟಾದ ತೀವ್ರವಾದ ಕರುಳಿನ ಅಡಚನೆ ಎಂದು ತಿಳಿದುಬಂದಿತು. ತಜ್ಞರ ಪ್ರಕಾರ, ಇನ್‌ಸ್ಟಂಟ್ ನೂಡಲ್ಸ್ ಅನ್ನು ಬೇಯಿಸದೆ ತಿಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ ಹಾಗೂ ಅದು ಜೀರ್ಣಾಂಗದಲ್ಲಿ ನಿರ್ಜಲೀಕರಣ, ಅಡಚಣೆ ಅಥವಾ ಸೋಂಕಿಗೆ ಕಾರಣವಾಗಬಹುದು.
ನೂಡಲ್ಸ್ ಪದೇಪದೇ ತಿನ್ನುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚುತ್ತದೆ. ಭಾರತದ ಪರಿಸ್ಥಿತಿ ನೋಡಿದರೆ, ಪ್ರಪಂಚದಲ್ಲಿಯೇ ಇನ್ಸ್ಟೆಂಟ್ ನೂಡಲ್ಸ್ ಹೆಚ್ಚು ಸೇವಿಸುವ ರಾಷ್ಟ್ರಗಳಲ್ಲಿ ನಮ್ಮ ದೇಶ ನಾಲ್ಕನೇ ಸ್ಥಾನದಲ್ಲಿದೆ. WINA ಮಾಹಿತಿಯ ಪ್ರಕಾರ, 2023 ರ ವೇಳೆಗೆ ಭಾರತದಲ್ಲಿ 8.7 ಬಿಲಿಯನ್ ನೂಡಲ್ಸ್ ಬಳಕೆಯಾಗಿವೆ.







1 thought on “ಇನ್ಸ್ಟೆಂಟ್ ನೂಡಲ್ಸ್ ತಿಂದು ಬಾಲಕ ಸಾವು! ಹಿಗಾಗಲು ಅಸಲಿ ಕಾರಣ ಎನು?”