ಧರ್ಮಸ್ಥಳ ಪ್ರಕರಣ ಬೆಳಕಿಗೆ ಬಂದಾಗಿನಿಂದ, ಸುಜಾತಾ ಭಟ್ ತಮ್ಮ ಮಗಳು ಅನನ್ಯಾ ಭಟ್ ನಾಪತ್ತೆಯಾಗಿರುವ ಬಗ್ಗೆಯೂ ದೊಡ್ಡ ಹೇಳಿಕೆಗಳನ್ನು ನೀಡಿದ್ದಾರೆ.ಆದರೆ ಈಗ ಅವಳು ವಿಷಯವನ್ನು ತಿರುಚಿ ಮತ್ತು ತನಗೆ ಮಗಳಿಲ್ಲ ಎಂದು ಹೇಳುತ್ತಿದ್ದಾರೆ. ಮಗಳು ಇದ್ದದ್ದು ಸುಳ್ಳು. ಸತ್ತದ್ದು ಸುಳ್ಳು. ಎಲ್ಲವೂ ಸುಳ್ಳು ಅಂತ ಕಳೆದ ಒಂದು ಸುದ್ದಿಯಲ್ಲಿದ್ದ ಸುಜಾತ ಭಟ್ ಅವರು ಹೇಳಿದ್ದಾರೆ.
ಸುಜಾತ್ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಕೇಸ್ ನಿಜಾಂಶ ಹೊರಬಂದಿದೆ. ತಾನು ಹೇಳಿದ್ದೆಲ್ಲಾ ಸುಳ್ಳು, ಅನನ್ಯಾ ಭಟ್ ಅನ್ನೋ ಮಗಳೇ ಇರಲಿಲ್ಲ. ನಾನು ಹೇಳಿಕೊಟ್ಟ ಹಾಗೇ ಹೇಳಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಗಿರೀಶ್ ಮಟ್ಟೆಣ್ಣನವರ್,ಜಯಂತ್ ಹೇಳಿದ ಹಾಗೇ ಹೇಳಿದ್ದೇನೆ. ಸುಳ್ಳು ಹೇಳುವ ಪರಿಸ್ಥಿತಿ ಬಂದಿತ್ತು. ಆಸ್ತಿ ಸಿಗಲಿಲ್ಲ ಅನ್ನೋ ಕಾರಣಕ್ಕೆ ಸುಳ್ಳು ಹೇಳಿದೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ಸೈಟ್ರಶ್ಗೆ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಇನ್ಸೈಟ್ರಶ್ಗೆ ಯೂಟ್ಯೂಬ್ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ ಸುಜಾತಾ ಭಟ್ ನಿಮ್ಮ ಮಗಳು ಅನ್ನೋ ಕತೆ ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, “ಅನನ್ಯಾ ಭಟ್ ಅನ್ನೋ ಮಗಳು ಸುಳ್ಳು ಕತೆ, ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ ಹೇಳಿದ ಹಾಗೇ ನಾನು ಹೇಳಿದೆ. ಆಸ್ತಿ ವಿಚಾರವಾಗಿ ಈ ಕತೆ ಹೇಳಿಕೊಟ್ಟಿದ್ದರು. ಹೀಗಾಗಿ ಈ ಕತೆ ಹೇಳಿದೆ. ನನಗೆ ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೂ ಯಾರೂ ಆಫರ್ ಮಾಡಿಲ್ಲ. ಆದರೆ ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನವಾಗಿ ಹೇಗೆ ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಅದು ನನಗೂ ಸಿಗಬೇಕಿತ್ತು. ಆದರೆ ನನಗೆ ಪಾಲು ಸಿಗಲಿಲ್ಲ” ಎಂದ ಸುಜಾತ್ ಭಟ್.
ಮಗಳು ಫೋಟೋ ಬಿಡುಗಡೆ ಮಾಡಿದ್ದು ಸುಳ್ಳು, ಅದು ಖಂಡಿತ ಸುಳ್ಳು ಫೋಟೋ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದೇ ವೇಳೆ ತಾನು ಧರ್ಮಸ್ಥಳದ ಜನರ ನಂಬಿಕೆ, ಜನರ ಭಾವನೆ ಜೊತೆ ಆಟವಾಡಿಲ್ಲ. ಆದರೆ ನನ್ನನ್ನು ಜನರ ಭಾವನೆ ಜೊತೆ ಆಟವಾಡುವಂತೆ ಕೆಲವರು ಮಾಡಿದರು ಎಂದು ಸುಜಾತಾ ಭಟ್ ಹೇಳಿದ್ದಾರೆ. ಆಸ್ತಿಯಲ್ಲಿ ನನಗೆ ಪಾಲು ನೀಡದೆ ಕೊಟ್ಟಿದ್ದಾರೆ. ಈ ನೋವು ನನಗಿದೆ ಎಂದು ಹೇಳಿದ್ದಾರೆ.
“ನನಗೆ ಈ ವಯಸ್ಸಿನಲ್ಲಿ ಇದು ಬೇಡವಾಗಿತ್ತು. ಇವರೆಲ್ಲಾ ಕೂಪ ಮಾಡಿಕೊಂಡು ನನ್ನನ್ನು ಬಳಸಿಕೊಂಡರು. ಈ ರೀತಿ ಆಗುತ್ತೆ, ಇಷ್ಟರ ಮಟ್ಟಕ್ಕೆ ಹೋಗುತ್ತೆ ಅನ್ನೋದು ಗೊತ್ತಿರಲಿಲ್ಲ. ದಯವಿಟ್ಟು ನನ್ನನ್ನು ಇವರು ದುರುಪಯೋಗ ಪಡಿಸಿಕೊಂಡರು. ಈ ಮಟ್ಟಕ್ಕೆ ಆಗುತ್ತೇ ಅನ್ನೋ ಕಲ್ಪನೇ ನನಗೆ ಇರಲಿಲ್ಲ. ನನ್ನ ಉದ್ದೇಶ ಬೇರೆಯಾಗಿತ್ತು. ನನ್ನನ್ನೇ ತೇಜೋವಧೆ ಮಾಡುತ್ತಿದ್ದಾರೆ. ನನ್ನನ್ನೇ ತೇಜೋವಧೆ ಮಾಡುವರು ಯಾರು ಇವರು” ಎಂದು ಸುಜಾತ್ ಭಟ್ ಪ್ರಶ್ನಿಸಿದ್ದರೆ. ವಯಸ್ಸಾದವರನ್ನು ತೇಜೋವಧೆ ಮಾಡುವುದು ಎಷ್ಟು ಸಮಂಜಸ ಎಂದು ಸುಜಾತ್ ಭಟ್ ಪ್ರಶ್ನಿಸಿದ್ದಾರೆ. ನಿಜವಾಗಿಯೂ ನನ್ನಲ್ಲಿ ಒತ್ತಾಯಪೂರ್ವಕವಾಗಿ ಹೇಳಿದ್ದಾರೆ. ನನಗೆ ಇಷ್ಟೆಲ್ಲಾ ಆಗುತ್ತೆ ಅನ್ನೋದು ಗೊತ್ತಿಲ್ಲ. ದಯವಿಟ್ಟು ಬಿಟ್ಟುಬಿಡಿ ಇಲ್ಲಿಗೆ ಸಾಕು ಎಂದು ಸುಜಾತ್ ಭಟ್ ಹೇಳಿದ್ದಾರೆ.






