---Advertisement---

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ದಂಡದಲ್ಲಿ ಶೇ. 50 ರಷ್ಟು ರಿಯಾಯಿತಿ! 50% discount on fines for violating traffic rules

On: August 22, 2025 8:34 AM
Follow Us:
50% discount on fines for violating traffic rules
---Advertisement---

ಈಗ ನಾವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ದಂಡದಲ್ಲಿ ಶೇ. 50 ರಷ್ಟು ರಿಯಾಯಿತಿ ಸಿಗುತ್ತದೆ. ಇಂತಾ ಆದೇಶವನ್ನು ಹೊರಡಿಸಲಾಗಿದೆ. ಇದು ಆಗಸ್ಟ್ 23 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 12 ರವರೆಗೆ ಇರುತ್ತದೆ. 50ರಷ್ಟು ರಿಯಾಯಿತಿ ದಂಡ ಪಾವತಿ ಲಭ್ಯವಿರಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಬಾಕಿ ಇರುವ ಸಂಚಾರ ದಂಡಗಳನ್ನು ಹೇಗೆ ವೀಕ್ಷಿಸಬಹುದು ಮತ್ತು ಪಾವತಿಸಬಹುದು ಎಂಬುದು ಮೊದಲಿಗೆ ತಿಳಿದುಕೊಳ್ಳಬೇಕು. ಇಲ್ಲಿ ಉದಾಹರಣೆಗೆ ನಿಮ್ಮ ದಂಡ ಒಂದು ಸಾವಿರ ರೂಪಾಯಿ ಇದ್ದರೆ 50 ಶೇಕಡಾ ಕಡಿಮೆ ಎಂದರೆ 500 ರೂಪಾಯಿ ಪಾವತಿಸಿದರೆ ಆ ದಂಡ ಮುಕ್ತವಾಗುತ್ತದೆ.

• ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
• ಬೆಂಗಳೂರು ಸಂಚಾರ ವಿಭಾಗವು ಪರಿಚಯಿಸಿರುವ BTP ASTraM ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು.
• ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು ಒದಗಿಸುವ ಮೂಲಕ ಪಾವತಿಗಳನ್ನು ಪಾವತಿಸಬಹುದು.
• ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಗಳನ್ನು ಮಾಡಬಹುದು.
• ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ವೆಬ್‌ಸೈಟ್‌ಗಳಲ್ಲಿಯೂ ವಿವರಗಳನ್ನು ಪಡೆಯಬಹುದು ಮತ್ತು ಪಾವತಿ ಮಾಡಬಹುದು.-
• ಪೇಟಿಎಂ ಆಪ್ ಮೊಬೈಲ್ ಅಪ್ಲಿಕೇಶನ್ ಬಳಸಿ ಸಹ ದಂಡ ಪಾವತಿಸಬಹುದು. (ಆದರೆ ಇದು 2023ರ ವೇಳೆ ಅವಕಾಶ ನೀಡಲಾಗಿತ್ತು)

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ದಂಡದಲ್ಲಿ ಶೇ. 50 ರಷ್ಟು ರಿಯಾಯಿತಿ ಪಡೆಯುವುದು ಹೇಗೆ How to get 50% discount on fines for violating traffic rules

  • karnatakaone.gov.in ವೆಬ್‌ ಸೈಟ್‌ ಓಫನ್‌ ಮಾಡಿ
  • ಇದೀಗ ನಿಮಗೆ ರಿಜಿಸ್ಟರ್‌ ಮೊಬೈಲ್‌ ನಂಬರ್‌ ಹಾಕಿ ಸೆಂಡ್‌ OTP ಮೇಲೆ ಕ್ಲಿಕ್‌ ಮಾಡಿ.
  • ಇದೀಗ ನಿಮ್ಮ ಮೊಬೈಲ್‌ ಸಂಖ್ಯೆಗೆ ಒಂದು OTP ಬರುತ್ತದೆ.
  • ಇದೀಗ ನಿಮಗೆ ಯಾವ ಜಾಗ ಎಂದು ಕೇಳುತ್ತದೆ. ಬಳಿಕ ನಿಮ್ಮ ವಾಹನ ಸಂಖ್ಯೆ ನಮೂದಿಸಿ.
  • ಇದೀಗ ನಿಮ್ಮ ವಾಃನದ ಮೇಲಿನ ದಂಡ ಎಷ್ಟಿದೆ ಎಂದು ತೋರಿಸುತ್ತದೆ.
  • ಬಳಿಕ ಇರುವ ದಂಡದ ಮೊತ್ತವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಿದರೆ ಆಯಿತು.

ಅಧಿಕೃತ ಆದೇಶದ ಪ್ರಕಾರ 2023ರ ಫೆಬ್ರವರಿ 11ರ ವರೆಗೆ ದಾಖಲಾಗಿರುವ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಿಗೆ ಈ ಶೇಕಡಾ 50ಷ್ಟು ದಂಡದ ರಿಯಾಯಿತಿ ಅನ್ವಯವಾಗಲಿದೆ. ಈ ಅವಧಿಯ ನಂತರ ದಾಖಲಾದ ಪ್ರಕರಣಗಳಿಗೆ ರಿಯಾಯಿತಿ ಸಿಗುವುದಿಲ್ಲ. ಈ ರಿಯಾಯತಿ ಅವಧಿ ಮುಗಿದ ನಂತರ ಏನಾದರೂ ನೀವು ದಂಡ ಪಾವತಿ ಮಾಡದೇ ಪೊಲೀಸರ ಕೈಗೆ ಸಿಕ್ಕಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಪೂರ್ಣ ಪ್ರಮಾಣದ ಹಣವನ್ನು ಕಟ್ಟಬೇಕಾಗುತ್ತದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment