ತಾನು ಬೆಳೆದ ತೊಗರಿ ಬೆಳೆ ಒಣಗಿ ಹಾಳಾಗಿ ನಷ್ಟವಾಗಿದೆ ಎಂಬ ನೋವು ಮನವಿ ಮಾಡಲು ಬಂದಿದ್ದ ಯುವ ರೈತನೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಲಬುರಗಿಯಲ್ಲಿ ಅಸಹನೆ ಹಾಗೂ ಅಸಮಾಧಾನ ತೋರಿದ ಘಟನೆ ಬೆಳಕಿಗೆ ಬಂದಿದೆ. ತೊಗರಿ ಬೆಳೆ ಒಣಗಿದ ಪರಿಣಾಮ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೈತನು ತನ್ನ ಹಾನಿ ಬಗ್ಗೆ ವಿವರಿಸಲು ಮುಂದಾದಾಗ, ಖರ್ಗೆ ಅವರು ಸಿಟ್ಟು ತೋರಿದರು. ಈ ಘಟನೆಯಿಂದ ಸ್ಥಳೀಯವಾಗಿ ಚರ್ಚೆ ಏರ್ಪಟ್ಟಿದ್ದು, ಖರ್ಗೆ ಅವರ ನಡೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ, ಯುವ ರೈತನೊಬ್ಬ ತನ್ನ ತೊಗರಿ ಬೆಳೆ ಹಾಳಾಗಿದೆ ಎಂದು ಕಷ್ಟ ಹೇಳಿಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬಳಿ ಬಂದಿದ್ದ. ಆತ ತನ್ನ ಬೆಳೆ ಗಿಡ ಸಮೇತ ತಂದು ತೋರಿಸಿ, “ನಾನು ಬೆಳೆದ ತೊಗರಿ ಬೆಲೆ ಸಂಪೂರ್ಣ ಹಾಳಾಗಿದೆ, ಬೆಳೆ ಒಣಗಿ ಹೋಗುತ್ತಿದೆ, ನನಗೆ ತುಂಬಾ ನಷ್ಟವಾಗಿದೆ” ಎಂದು ಮನವಿ ಮಾಡಿದ್ದ. ಆದರೆ ಈ ಸಂದರ್ಭದಲ್ಲಿ ಖರ್ಗೆ ಕೋಪಗೊಂಡು, “ನಿನ್ನದು 4 ಎಕರೆ ಹಾಳಾಗಿದೆ ಅಂದ್ರೆ, ನನ್ನದು 40 ಎಕರೆ ಹಾಳಾಗಿದೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇದಷ್ಟೇ ಅಲ್ಲ, “ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂತಾಗಿದೆ” ಎಂದು ಗೊಣಗಿಕೊಂಡು, ಕಷ್ಟವನ್ನು ಹೇಳಿಕೊಂಡು ಬಂದಿದ್ದ ಆ ಯುವ ರೈತನನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ರೈತನ ನೋವಿಗೆ ಸ್ಪಂದಿಸುವ ಬದಲು ಖರ್ಗೆಯ ವರ್ತನೆ ಅಸಮಾಧಾನಕ್ಕೆ ಕಾರಣವಾಗಿದೆ.
ಹಾಳಾದ ತೊಗರಿ ಬೆಳೆ ತೋರಿಸಲು ಬಂದ ಯುವ ರೈತನನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೋಪದಿಂದ ಕೇಳಿದರು, “ನೀನು ಹಾಳಾಗಿರುವ ಬೆಳೆ ತೋರಿಸಲು ಬಂದಿದ್ದೀಯಾ, ಎಷ್ಟು ಹಾಳಾಗಿದೆ?” ಯುವಕ ನಿರ್ಧಾರದಿಂದ “ನಾಲ್ಕು ಎಕರೆ ಹಾಳಾಗಿದೆ” ಎಂದು ಉತ್ತರಿಸಿದನು. ಆದರೆ ಖರ್ಗೆ ಅವರ ಕೋಪ ಅಡಗಿಸದೆ, “ನಿನ್ನದು ನಾಲ್ಕು ಎಕರೆ ನನ್ನದು ನಲವತ್ತು ಎಕರೆ ಹಾಳಾಗಿದೆ” ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿದರು. ಈ ಮೂಲಕ ಹಳೆ ಬೆಳೆ ಸಮಸ್ಯೆ ಎದುರಿಸುತ್ತಿರುವ ರೈತನ ಕಷ್ಟವನ್ನು ಗಮನಕ್ಕೆ ತರುವುದರೊಂದಿಗೆ, ದೇಶದ ಪ್ರಮುಖ ನಾಯಕರೊಬ್ಬರ ಕೋಪಭರಿತ ಪ್ರತಿಕ್ರಿಯೆಯು ಗೋಚರಿಸಿತು.
ಖರ್ಗೆ ಅವರು ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಹೇಳಿದ್ದು, ಬರೀ ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಹಾಳಾದ ಬೆಳೆಗಳೂ ಬಹಳ ಪ್ರಮಾಣದಲ್ಲಿ ಹಾಳಾಗಿದೆ. “ನೀನು ಇಲ್ಲಿ ಕೇವಲ ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡಬೇಡ” ಎಂದಿದ್ದಾರೆ. ಖರ್ಗೆ ಆರೋಪಿಸಿದರು, ದೇಶದಲ್ಲಿ ಅತಿವೃಷ್ಟಿಯಿಂದ ಹಾಳಾದ ಬೆಳೆಗಳನ್ನು ಮೋದಿ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಈ ಸಮಯದಲ್ಲಿ ದ್ವಿಭಾಷಾ ನೀತಿಯ ಬಗ್ಗೆ ಸಹ ಅವರು ಮಾತನಾಡಿದ್ದು, ರಾಜ್ಯದಲ್ಲಿ ದ್ವಿಭಾಷ ಪದ್ದತಿ ಜಾರಿ ಮಾಡುತ್ತಿರುವುದನ್ನ ಸ್ವಾಗತಿಸಿದ್ದಾರೆ. . ದ್ವಿಭಾಷಾ ಪದ್ದತಿ ಜಾರಿ ಮಾಡುವ ಬಗ್ಗೆ ಆಯಾ ಸರ್ಕಾರ, ಆಯಾ ಇಲಾಖೆಗೆ ಅಧಿಕಾರವಿರುತ್ತದೆ. ನಮ್ಮ ರಾಜ್ಯದಲ್ಲಿ ಏನು ಮಾಡುತ್ತಾರೆ ನೋಡಬೇಕಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇರುತ್ತದೆ. ತಮಿಳುನಾಡಿನಲ್ಲಿ ಮತ್ತು ಕೇರಳದಲ್ಲಿ ಇದನ್ನ ಒಪ್ಪುವುದಿಲ್ಲ. ನಮ್ಮ ಸರ್ಕಾರ ಕೇಂದ್ರದಲ್ಲಿ ಇದ್ದಾಗ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ದತಿ ಅಳವಡಿಕೆ ಮಾಡಲು ಆಲೋಚನೆ ಮಾಡಿದ್ವಿ ಎಂದು ಖರ್ಗೆ ಹೇಳಿದ್ದಾರೆ.
ಮತಗಳ್ಳತನದ ಬಗ್ಗೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಇವಿಎಮ್ ನಿಷೇಧಿಸಿ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿರುವುದನ್ನು ಅವರು ಸ್ವಾಗತಿಸಿ ಶ್ಲಾಘಿಸಿದ್ದಾರೆ. ಜೊತೆಗೆ, ಕಳೆದ ಚುನಾವಣೆಯಲ್ಲಿ ಇವಿಎಮ್ನಲ್ಲಿ ದೊಡ್ಡ ಮಟ್ಟದ ಮೋಸ ನಡೆದಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. “ನಾನು ಸೋತಾಗ ಸಹ ಇದೇ ರೀತಿಯ ಅಭಿಪ್ರಾಯ ಬಂದಿದೆ, ಏಕೆಂದರೆ ನಾನು ಜನರಿಗಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜನರಿಂದ ಸ್ಫೂರ್ತಿದಾಯಕ ಸ್ವೀಕೃತಿ ಸಿಕ್ಕಿತ್ತು, ಹಾಗಾಗಿ ಗೆಲ್ಲುವುದೆಂದು ವಿಶ್ವಾಸವಿತ್ತು. ಆದರೆ ಫಲಿತಾಂಶ ಉಲ್ಟಾ ಬಿದ್ದಿತು” ಎಂದು ಅವರು ಬೇಸರ ವ್ಯಕ್ತಪಡಿಸಿದರು.






