ಇತ್ತೀಚೆಗೆ ಆವಾಸಸ್ಥಾನದಲ್ಲಿ ಅನೇಕ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಕೊಲ್ಲಲಾಗುತ್ತಿವೆ. ಇದಕ್ಕೂ ಮೊದಲು ಮಲೆ ಮಹಾದೇವಪ್ಪನ ಬೆಟ್ಟದಲ್ಲಿ 5 ಹುಲಿಗಳನ್ನು ವಿಷಪ್ರಾಶನ ಮಾಡಿ ಕೊಲ್ಲಲಾಗಿತ್ತು. ಈಗ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ 19 ನವಿಲುಗಳು ಸತ್ತು ಬಿದ್ದಿದ್ದು, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ತುಂಬಾ ಅನುಮಾನಕ್ಕೆ ಕೂಡ ಕಾರಣವಾಗಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನಲ್ಲಿ ಸುಮಾರು 19 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಕಂಡು ಬಂದಿದೆ. ಜಮೀನು ಒಂದರಲ್ಲಿ ಈ ದುರ್ಘಟನೆ ನಡೆದಿದ್ದು, ಜಮೀನಿಗೆ ತೆರಳಿದ್ದ ಮಾಲೀಕರು ಜಮೀನಿನಲ್ಲಿ ಸತ್ತು ಬಿದ್ದಿದ್ದ ನವಿಲುಗಳನ್ನು ಕಂಡು ಸ್ಥಳೀಯ ಪೊಲೀಸರಿಗೂ ಹಾಗೂ ವಲಯದ ಅರಣ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆಗಸ್ಟ್ 1 ರಂದು ರಾತ್ರಿ ಸ್ಥಳೀಯರು ನಡೆದುಕೊಂಡು ಹೋಗುತ್ತಿರುವಾಗ ಇದ್ರ ಬಗ್ಗೆ ತಿಳಿದು ಬಂದಿದೆ.
14 ಹೆಣ್ಣು ನವಿಲು ಹಾಗು 5 ಗಂಡು ನವಿಲುಗಳು ಸಾವು
ಮೇಲ್ಕಂಡ ಮಾಹಿತಿಯ ಪ್ರಕಾರ ಅರಣ್ಯಾಧಿಕಾರಿಗಳು ನವಿಲುಗಳ ಪೈಕಿ 14 ಹೆಣ್ಣು ನವಿಲು ಹಾಗು 5 ಗಂಡು ನವಿಲುಗಳು ಸಾವನ್ನಪ್ಪಿದೆ ಎಂದು ದೃಡಪಾದಿಸಿದ್ದರೆ. ಸದ್ಯ ಸತ್ತ ನವಿಲುಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ನವಿಲುಗಳ ಸಾವಿಗೆ ಕಾರಣ ಗೊತ್ತಾಗಲಿದೆ.
ಇನ್ನು ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನ್, ವಲಯ ಅರಣ್ಯ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ವಿಷಾಹಾರ ತಿಂದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
ಸಾಕಿದ್ದ ಹಸುವನ್ನು ಹುಲಿಗಳು ಬೇಟೆಯಾಡಿ ಕೊಂದಿದ್ದಕ್ಕೆ ಸಿಟ್ಟಾದ ಮಾಧುರಾಜು ಈ ನಷ್ಟದ ಸೇಡು ತೀರಿಸಿಕೊಳ್ಳಲೆಂದು ಮೃತಪಟ್ಟಿದ್ದ ಹಸುವಿನ ದೇಹದ ಮೇಲೆ ವಿಷವನ್ನು ಸಿಂಪಡಿಸಿದ್ದಾನೆ. ಮಾಧುರಾಜು ಸ್ನೇಹಿತರಾದ ಕುನ್ನಪ್ಪ ಮತ್ತು ನಾಗರಾಜು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದರು.
ಹೀಗೆ ವಿಷ ತಿಂದ ಹುಲಿಗಳು ಸಾವನ್ನಪ್ಪಿದ್ದು, ಈ ಪ್ರಕರಣದ ಸಂಬಂಧ ಆರೋಪಿಗಳಾದ ಮಾಧುರಾಜು, ನಾಗರಾಜು ಹಾಗೂ ಕುನ್ನಪ್ಪ ನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಅರಣ್ಯ ಅಧಿಕಾರಿಗಳ ಕರ್ತವ್ಯಲೋಪ, ನಿರ್ಲಕ್ಷ್ಯ ಕೂಡ ಎದ್ದುಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಚಕ್ರಪಾಣಿ ಸೇರಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಶಿಫಾರಸು ಮಾಡಿದ್ದಾರೆ.
ಇನ್ನು ಚಾಮರಾಜನಗರದಲ್ಲಿ ಕಂದೇಗಾಲ – ಕೊಡಸೋಗೆ ರಸ್ತೆಯಲ್ಲಿ ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದರು. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿತ್ತು. ಎರಡು ಕೋತಿಗಳು ಬದುಕಿತ್ತು ಎನ್ನಲಾಗಿದೆ.