ಇಂದಿನ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಸಾಗರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲಾ ಕೇಂದ್ರದ ಎಸ್‌ಬಿಐ ಮತ್ತು ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಸಮಿತಿ (DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (DLRC) ಸಭೆ ನಡೆಯಿತು.
ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ₹100 ಕೋಟಿ ಮೌಲ್ಯದ ಶಿಕ್ಷಣ ಸಾಲ ವಿತರಣೆ ಮಾಡಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನಾನು ಬ್ಯಾಂಕುಗಳಿಗೆ ನೀಡಿದ್ದೇನೆ. ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳಲು ಹಣದ ಅಡಚಣೆ ಆಗಬಾರದು. ಆರ್‌ಬಿಐ ಮಾರ್ಗಸೂಚಿಯಂತೆ ಯಾವುದೇ ಭದ್ರತೆ ಇಲ್ಲದೆ ಶೈಕ್ಷಣಿಕ ಸಾಲ ಲಭ್ಯವಾಗಬೇಕು.
ಕೇಂದ್ರ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ವಿಸ್ತ್ರತವಾಗಿ ಪರಿಶೀಲನೆ
- ಸಭೆಯಲ್ಲಿ ಪಿಎಂ ವಿಶ್ವಕರ್ಮ, ಪಿಎಂ ಮುದ್ರಾ, ಪಿಎಂಇಜಿಪಿ ಮತ್ತು ಪಿಎಂ ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳು, ಕೃಷಿ ಸಾಲ, ಸೇರಿದಂತೆ ವಿವಿಧ ಕೇಂದ್ರ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿ ಕುರಿತು ವಿಸ್ತ್ರತವಾಗಿ ಪರಿಶೀಲನೆ.
- ರೈತರಿಗೆ ಕೃಷಿ ಸಾಲ ನಿರಾಕರಿಸದಂತೆ ಬ್ಯಾಂಕುಗಳಿಗೆ ಸೂಚನೆ ನೀಡಿ, ಬ್ಯಾಂಕಿಂಗ್ ಸೇವೆ ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವಂತೆ ಬಲವಾದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
- ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ₹100 ಕೋಟಿ ಮೌಲ್ಯದ ಶಿಕ್ಷಣ ಸಾಲ ವಿತರಣೆ
ALSO READ: ಬಸವ ಪುರಸ್ಕಾರಕ್ಕೆ ಬಸವರಾಜ ಧನ್ನೂರ ಆಯ್ಕೆ
1 thought on “ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ₹100 ಕೋಟಿ ಮೌಲ್ಯದ ಶಿಕ್ಷಣ ಸಾಲ ವಿತರಣೆ 100 Cr education loans to be disbursed this academic year”