ದೆವದುರ್ಗ ತಾಲೂಕಿನ ಕೆ. ಇರಬಗೇರಾ ಗ್ರಾಮದಲ್ಲಿ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ನಡೆದ ಪೊಲೀಸ್ ತನಿಖೆಯಲ್ಲಿ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ. ಈ ಘಟನೆ ಮೊದಲು ಕೌಟುಂಬಿಕ ಕಲಹದಿಂದಾಗಿ ನಡೆದಿದೆ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಪ್ರೇಮ ಸಂಬಂಧವೇ ಈ ದಾರುಣ ಘಟನೆಯ ನಿಜವಾದ ಕಾರಣವೆಂಬುದು ಸ್ಪಷ್ಟವಾಗಿದೆ.
ಈ ಪ್ರಕರಣದಲ್ಲಿ ಮೃತಪಟ್ಟ ರೇಣುಕಾ (18), ಹಾಗೂ ಬದುಕುಳಿದ ತಿಮ್ಮಕ್ಕ (24) ಮತ್ತು ಮತ್ತೊಬ್ಬ 17 ವರ್ಷದ ಅಪ್ರಾಪ್ತೆಯ ಮೂವರಿಗೂ ಪ್ರೇಮ ಸಂಬಂಧಗಳಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ. ಇವರಲ್ಲಿ ರೇಣುಕಾಳಿಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಿಗದಿಯಾಗಿರುವುದು, ಆತ್ಮಹತ್ಯೆಗೆ ಮುಂದಾಗಲು ಮುಖ್ಯ ಕಾರಣವಾಗಿದೆ.
ಈ ಘಟನೆದಲ್ಲಿ ರೇಣುಕಾ ಮೃತಪಟ್ಟಿದ್ದು, ತಿಮ್ಮಕ್ಕ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಮತ್ತು ಅಪ್ರಾಪ್ತ ಯುವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೇಣುಕಾ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಆಕೆಯ ಪೋಷಕರು ದೇವದುರ್ಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ರೇಣುಕಾ ಹೊಲದಲ್ಲಿ ಇದ್ದಾಗ ಈ ಘಟನೆ ಸಂಭವಿಸಿದ್ದು, ಆಕೆಯ ಸಾವಿಗೆ ತಿಮ್ಮಕ್ಕ ಹಾಗೂ ಮತ್ತೊಬ್ಬ ಯುವತಿಯೇ ಕಾರಣವೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆದರೆ, ಪೊಲೀಸರು ನಡೆಸಿದ ತನಿಖೆಯಲ್ಲಿ ಆತ್ಮಹತ್ಯೆ ಹಿಂದಿನ ಲವ್ ಸ್ಟೋರಿ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಹಿಂದೆಯೇ ಮೂವರು ಯುವತಿಯರು ಆತ್ಮಹ*ತ್ಯೆ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಇದರ ಬಗ್ಗೆ ಪರಸ್ಪರ ಚರ್ಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ಪರಿಶೀಲಿಸುತ್ತಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಒಂದೇ ಗ್ರಾಮದ ಮೂವರು ಯುವತಿಯರು ತಮ್ಮ ಪ್ರೇಮಿಗಳ ಜೊತೆಗಿನ ಸಂಬಂಧ, ಭೇಟಿಗಳು ಮತ್ತು ಮಾತುಕತೆಗಳನ್ನು ಪರಸ್ಪರ ಹಂಚಿಕೊಂಡಿದ್ದರು. ಇವರನ್ನು ಪ್ರೀತಿಸುತ್ತಿದ್ದ ಯುವಕರು ಕೂಡ ಮದುವೆಗೆ ಸಮ್ಮತಿ ಸೂಚಿಸಿದ್ದರು. ಈ ವಿಷಯವನ್ನು ಹುಡುಗಿಯರು ಮನೆಯವರಿಗೂ ತಿಳಿಸಿ, ತಾವು ಪ್ರೀತಿಸುವವರ ಜೊತೆ ಮದುವೆ ಮಾಡಿಕೊಡಲು ಮನವಿ ಮಾಡಿದ್ದರು. ಆದರೆ ಕುಟುಂಬದವರು ಇದನ್ನು ನಿರಾಕರಿಸಿ, ತ್ವರಿತವಾಗಿ ರೇಣುಕಾಳ ಮದುವೆಯನ್ನು ನಿಗದಿಪಡಿಸಿದ್ದರು ಎಂದು ತಿಳಿದುಬಂದಿದೆ.
ಪ್ರೀತಿ ಮಾಡುವವನನ್ನು ಬೇರೊಬ್ಬರೊಂದಿಗೆ ಮದುವೆ ಮಾಡಲಾಗುತ್ತೆ ಎಂಬ ಭಯದಿಂದ, ಮೂವರು ಸ್ನೇಹಿತೆಯರು ಹೊಲಕ್ಕೆ ಹೋಗಿ ವಿಷ ಸೇವನೆ ಮಾಡುವುದಾಗಿ ನಿರ್ಧರಿಸಿದ್ದರು. ತಿಮ್ಮಕ್ಕ ವಿಷ ಕುಳಿತುಕೊಂಡಾಗ ಮತ್ತೊಬ್ಬ ಯುವತಿ ಸ್ಥಳಕ್ಕೆ ಬಂದು ವಿಷದ ಬಾಟಲಿಯನ್ನು ಮುರಿದುಹಾಕಿದರು. ತಕ್ಷಣ ವಿಷ ಸೇವಿಸಿದ ತಿಮ್ಮಕ್ಕ ನರಳಾಡಿ ಮುರ್ಛೆಗೆ ಹೋಗಿದ್ದಾನೆ. ರೇಣುಕಾ ಮತ್ತು ಅಪ್ರಾಪ್ತ ಯುವತಿ ಭಯದಿಂದ ಪಕ್ಕದ ಬಾವಿಗೆ ಹಾರಿದರು. ಸ್ಥಳಕ್ಕೆ ಬಂದ ಅಕ್ಕ-ಪಕ್ಕದ ಜನರು ಅವರನ್ನು ರಕ್ಷಿಸಿದರು. ಈ ವೇಳೆ ರೇಣುಕಾ ಸಾವನ್ನಪ್ಪಿದ್ದು, ಅಪ್ರಾಪ್ತ ಯುವತಿ ಬದುಕುಳಿದಿದ್ದಾರೆ.
ರಾಯಚೂರು: ಮೂವರು ಯುವತಿಯರ ಆತ್ಮಹತ್ಯೆ ಯತ್ನ ಪ್ರಕರಣ; ಪ್ರೇಮ ಕಥೆ ನೀಡಿದ ರೋಚಕ ಟ್ವಿಸ್ಟ್!
By krutika naik
On: September 17, 2025 7:25 PM
---Advertisement---






