ಭಾರತದಲ್ಲಿ ಐಫೋನ್ 17 ನ ಅಧಿಕೃತ ಮಾರಾಟ (ಸೆ.19) ಆರಂಭಗೊಳ್ಳುತ್ತಿದೆ. ಗ್ರಾಹಕರು ಈ ಫೋನ್‌ನ್ನು ಆಯಪಲ್ ಸ್ಟೋರ್, ಅಧಿಕೃತ ರಿಟೇಲ್ ಔಟ್‌ಲೆಟ್‌ಗಳು ಹಾಗೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದು. ಆಕರ್ಷಕ ಡಿಸ್ಕೌಂಟ್ ಆಫರ್‌ಗಳೊಂದಿಗೆ ಫೋನ್ ಖರೀದಿಗೆ ಅವಕಾಶ ಸಿಗಲಿದೆ.
ಐಫೋನ್ 17 ಸರಣಿಯೊಂದಿಗೆ ಐಫೋನ್ 17 ಪ್ರೋ, ಐಫೋನ್ 17 ಪ್ರೋ ಮ್ಯಾಕ್ಸ್ ಹಾಗೂ ಐಫೋನ್ ಏರ್ ಕೂಡ ನಾಳೆಯಿಂದ ಲಭ್ಯವಾಗಲಿದೆ. ಈಗಾಗಲೇ ಆಯಪಲ್ ಕಂಪನಿ ಈ ಹೊಸ ಮಾದರಿಗಳನ್ನು ಲಾಂಚ್ ಮಾಡಿದ್ದು, ಗ್ರಾಹಕರು ನಾಳೆಯಿಂದಲೇ ಎಲ್ಲಾ ಅಧಿಕೃತ ಮಾರ್ಗಗಳ ಮೂಲಕ ಫೋನ್ ಪಡೆದುಕೊಳ್ಳಬಹುದು.
ಐಫೋನ್ 17ಗೆ ಭರ್ಜರಿ ಆಫರ್ ಘೋಷಿಸಿದ ಆಯಪಲ್.ಆಯಪಲ್ ವೆಬ್‌ಸೈಟ್ ಮೂಲಕ ಐಫೋನ್ 17 ಖರೀದಿಸುವ ಗ್ರಾಹಕರಿಗೆ ಕೆಲ ಆಫರ್ ನೀಡಲಾಗಿದೆ. ಕ್ಯಾಶ್‌ಬ್ಯಾಕ್ ಆಫರ್, ನೋ ಕಾಸ್ಟ್ ಇಎಂಐ, ಎಕ್ಸ್‌ಚೇಂಜ್ , ಕ್ರೆಡಿಟ್ ಆಫರ್ ನೀಡಲಾಗಿದೆ.
ಐಫೋನ್ 17 ಖರೀದಿಸುವ ಗ್ರಾಹಕರಿಗೆ ಹಲವು ಆಕರ್ಷಕ ಆಫರ್‌ಗಳನ್ನು ನೀಡಲಾಗಿದೆ. ಪ್ರಮುಖ ಬ್ಯಾಂಕ್‌ಗಳ ಮೂಲಕ ನೋ ಕಾಸ್ಟ್ ಇಎಂಐ ಸೌಲಭ್ಯ ಲಭ್ಯವಿದ್ದು, ಅಮೆರಿಕನ್ ಎಕ್ಸ್‌ಪ್ರೆಸ್, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10,000 ರೂಪಾಯಿ ವರೆಗೆ ತಕ್ಷಣದ ಕ್ಯಾಶ್‌ಬ್ಯಾಕ್ ಸಿಗಲಿದೆ. ಜೊತೆಗೆ, ತಿಂಗಳಿಗೆ 19,150 ರೂಪಾಯಿ ಕಂತಿನಲ್ಲಿ ಐಫೋನ್ ಏರ್ ಫೋನ್ ಪಡೆಯಬಹುದಾದ ಅವಕಾಶವಿದ್ದು, 1,19,900 ರೂಪಾಯಿಗಳ ವಿಶೇಷ ಆಫರ್ ಬೆಲೆಯಲ್ಲಿಯೂ ಖರೀದಿ ಸಾಧ್ಯವಾಗಿದೆ.
ಐಫೋನ್ 17 ಖರೀದಿಗೆ ಹಲವು ವೇದಿಕೆಗಳಲ್ಲಿ ಆಕರ್ಷಕ ಆಫರ್‌ಗಳು ಲಭ್ಯವಿವೆ. ತಿಂಗಳಿಗೆ 12,983 ರೂಪಾಯಿ ಕಂತು ಪಾವತಿ ಆಯ್ಕೆಯೊಂದಿಗೆ ಇನ್‌ಸ್ಟಾಂಟ್ ಕ್ಯಾಶ್‌ಬ್ಯಾಕ್ ಹಾಗೂ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡಲಾಗುತ್ತಿದೆ. ವಿಶೇಷ ಆಫರ್ ಅಡಿ 82,900 ರೂಪಾಯಿಗಳಲ್ಲಿ ಫೋನ್ ಪಡೆಯುವ ಅವಕಾಶವಿದೆ. ಆಪಲ್ ಟ್ರೇಡ್ ಇನ್ ಸೌಲಭ್ಯ ಬಳಸಿಕೊಂಡು ಗರಿಷ್ಠ 64,000 ರೂಪಾಯಿ ವರೆಗೆ ಉಳಿತಾಯ ಮಾಡಬಹುದಾಗಿದೆ, ಜೊತೆಗೆ ಎಕ್ಸ್‌ಚೇಂಜ್ ಆಫರ್‌ಗಳೂ ಲಭ್ಯವಿವೆ. ಕ್ರೋಮಾ ತನ್ನ ಗ್ರಾಹಕರಿಗೆ 6,000 ರೂಪಾಯಿ ಫ್ಲ್ಯಾಟ್ ಡಿಸ್ಕೌಂಟ್ ಘೋಷಿಸಿದ್ದು, ಈ ಎಲ್ಲಾ ಆಫರ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಎರಡೂ ಮಾರ್ಗಗಳಿಂದ ಪಡೆಯಬಹುದಾಗಿದೆ.
ಐಫೋನ್ 17ಗೆ ದೇಶಾದ್ಯಂತ ಭರ್ಜರಿ ಸ್ಪಂದನೆ ದೊರಕುತ್ತಿದೆ. ಗ್ರಾಹಕರು ಖರೀದಿಗೆ ಮುಗಿಬಿದ್ದಿರುವುದರಿಂದ ಆಪಲ್ ಕಂಪನಿ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದೆ. ಬೇಡಿಕೆಯನ್ನು ಪೂರೈಸಲು ಉತ್ಪಾದನೆಯ ವೇಗವನ್ನು ಹೆಚ್ಚಿಸಲಾಗಿದೆ. ಆಫ್‌ಲೈನ್ ಮತ್ತು ಆನ್‌ಲೈನ್ ಮಾರ್ಗಗಳ ಮೂಲಕ ಫೋನ್ ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಕಳೆದ ವರ್ಷ ಐಫೋನ್ 16ಗೆ ದೊರೆತ ಪ್ರತಿಕ್ರಿಯೆಗಿಂತ ಈ ಬಾರಿ ಐಫೋನ್ 17ಗೆ ಹೆಚ್ಚು ಜನಪ್ರಿಯತೆ ದೊರೆತಿದೆ. ಭಾರತದಲ್ಲಿ ಐಫೋನ್ 17 ದಾಖಲೆಯ ಮಟ್ಟದ ಮಾರಾಟ ಸಾಧಿಸುವ ಸಾಧ್ಯತೆ ಗಟ್ಟಿಯಾಗಿ ವ್ಯಕ್ತವಾಗಿದ್ದು, ಆಪಲ್‌ಗೆ ಇದು ದೊಡ್ಡ ಯಶಸ್ಸಾಗಲಿದೆ ಎಂಬ ನಿರೀಕ್ಷೆಯಿದೆ.






