ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಉಗಾರ ಗ್ರಾಮದಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದು, ಅದನ್ನು ಅಪಘಾತವೆಂದು ತೋರಿಸಿದ ಪತಿಯೊಂದಿಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೇಯಸಿಗಾಗಿ ಗರ್ಭಿಣಿ ಪತ್ನಿಯನ್ನು ಕೊಂದು, ಅಪಘಾತದಂತೆ ತೋರಿಸಲು ಯತ್ನಿಸಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಪತಿ ವಕೀಲ ಪ್ರದೀಪ್ ಕಿರಣಿ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬಂಧಿತರಲ್ಲಿ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದ ರಾಜೇಂದ್ರ ಕಾಂಬಳೆ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯ ಸದ್ದಾಂ ಇನಾಂದಾರ್ ಸೇರಿದ್ದಾರೆ. ಕಾಗವಾಡ ತಾಲೂಕಿನ ಬಿಕೆ ಹೂಗಾರ್ ಗ್ರಾಮದಲ್ಲಿ ಈ ಕೊಲೆ ನಡೆದಿದೆ.
ಪ್ರೇಯಸಿಗಾಗಿ 15 ಲಕ್ಷ ಸುಪಾರಿ ಕೊಟ್ಟು ಚಟ್ಟ ಕಟ್ಟಿದ ಪತಿ, ರಾಡ್ ನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಸೆಪ್ಟೆಂಬರ್ 7ರಂದು ಬಿಕೆ ಉಗಾರ ಗ್ರಾಮದ ಚೈತಲೀ ಕಿರಣಗಿ ಕೊಲೆಯಾಗಿದೆ. ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಪ್ರದೀಪ್ ಚೈತಾಲಿ ಜೊತೆಗೆ ಮದುವೆಯಾಗಿದ್ದಾನೆ. ಪ್ರೇಮ ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಲವ್ ನಲ್ಲಿ ಇದ್ದ. ಕಾನೂನು ಪದವಿ ಮುಗಿಸಿದ ಪ್ರದೀಪ್ ವಕೀಲನಾಗಿ ಕೆಲಸ ಮಾಡುತ್ತಿದ್ದ. ಕಾಗವಾಡ ಕೋರ್ಟ್ನಲ್ಲಿ ಪ್ರದೀಪ್ ವಕೀಲನಾಗಿ ಕೆಲಸ ಮಾಡುತ್ತಿದ್ದ. ಸೀನಿಯರ್ ಬುಟ್ಟಿಗೆ ಹಾಕಿಕೊಳ್ಳಲು ಪ್ರದೀಪ್ ಮದುವೆ ಆಗಿಲ್ಲ ಎಂದು ಸುಳ್ಳು ಹೇಳಿದ್ದಾನೆ. ಪ್ರದೀಪ್ ಮಾತು ನಂಬಿ ಸೀನಿಯರ್ ವಕೀಲೆ ಆತನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ.
ಇದರಿಂದ ಪತ್ನಿ ಕೊಲೆಗೆ ಸ್ನೇಹಿತ ರಾಜೇಂದ್ರ ಸುಪಾರಿ ನೀಡಿದ್ದ 15ಲಕ್ಷ ರೂಪಾಯಿ ನೀಡಿ ಪ್ರದೀಪ್ ಪತ್ನಿ ಕೊಲೆಗೆ ಸಂಚು ಹಾಕಿದ್ದಾನೆ. ಸೆಪ್ಟೆಂಬರ್ 7 ರಂದು ರಾಜೇಂದ್ರ ಸದ್ದಾಮ ಜೊತೆ ಸೇರಿ ಪ್ರದೀಪ್ ಗರ್ಭಿಣಿ ಪತ್ನಿಯನ್ನು ಕೋಂದಿದ್ದಾನೆ. ಪತ್ನಿ ಕೊಲೆ ಮಾಡಿ ಪೊಲೀಸರಿಗೆ ಅಪಘಾತ ಆಗಿದೆ. ಎಂದು ಫೋನ್ ಮೂಲಕ ತಿಳಿಸಿದ್ದಾನೆ. ಸೆಪ್ಟೆಂಬರ್ 7 ರಾತ್ರಿ ಕಾಗವಾಡ ಪೊಲೀಸರಿಗೆ ಪ್ರದೀಪ್ ಫೋನ್ ಮಾಡಿ ತಿಳಿಸಿದ್ದಾನೆ. ಪೊಲೀಸರಿಗೆ ಕರೆ ಮಾಡಿ ಕಾಗವಾಡ ಆಸ್ಪತ್ರೆಗೆ ಸೇರಿಸುವುದಾಗಿ ಹೇಳಿದ್ದಾನೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕಾಗವಾಡ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ ಶವ ಇಲ್ಲದಿದ್ದರಿಂದ ಮತ್ತೆ ಪೊಲೀಸರು ಪ್ರದೀಪ್ ಗೆ ಕರೆ ಮಾಡಿದ್ದಾರೆ.
ಪ್ರೇಯಸಿಯನ್ನು ಮೀರಜ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿತು. ಪೊಲೀಸರಿಗೆ ಪ್ರದೀಪ್ ಮನೆಯ ಬಳಿ ಕಾರು ನಿಂತಿರುವುದು ಅನುಮಾನಕಾರಿಯಾಗಿ ಕಂಡಿತು. ಮೀರಜ್ ಆಸ್ಪತ್ರೆ ಭೇಟಿ ನೀಡಿ ಚೈತಲಿ ಶವವನ್ನು ಪರಿಶೀಲಿಸಿದ ನಂತರ, ಇದು ಕೊಲೆ ಎನ್ನುವ ಶಂಕೆ ಹೊರಬಂದಿತು. ಪ್ರದೀಪ್ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ಬಾರಿಮುಖವಾಗಿ ಸಾಬೀತಾಗಿದೆ. ಅವರು ತಪ್ಪಿತಸ್ಥತೆಯನ್ನು ಒಪ್ಪಿಕೊಂಡಿದ್ದಾರೆ. ನಂತರ ರಾಜೇಂದ್ರ ಹಾಗೂ ಸದ್ದಾಂ ಅವರನ್ನು ಬಂಧಿಸಲಾಗಿದೆ, ಉಳಿದ ಇಬ್ಬರನ್ನು ಹುಡುಕಲಾಗುತ್ತಿದೆ.






