ಕನ್ನಡ ಚಿತ್ರರಂಗದಲ್ಲಿ ಶಿಸ್ತಿಗೆ ಹೆಸರುವಾಸಿಯಾದ ಕಲೆ ಸಾಮ್ರಾಟ್ ಎಸ್. ನಾರಾಯಣ್ ವಿರುದ್ಧ ಅವರ ಸೊಸೆ ವರದಕ್ಷಿಣೆ ಪ್ರಕರಣ ದಾಖಲಾಗಿದ್ದು, ಇದೀಗ ಕೋರ್ಟ್ ಮೆಟ್ಟಿಲಿಗೆ ಬಂದಿದೆ. ಪುತ್ರ ಪವನ್ ಅವರ ಪತ್ನಿ ಪವಿತ್ರಾ ಜ್ಞಾನ ಭಾರತಿ ಈ ಸಂಬಂಧ ಪತಿ, ಎಸ್. ನಾರಾಯಣ್ ಹಾಗೂ ಭಾಗ್ಯವತಿಗೆ ವಿರುದ್ಧ ಪೊಲೀಸ್ ವರದಕ್ಷಿಣೆ ನೀಡಿದ್ದಾರೆ.
ಎಸ್. ನಾರಾಯಣ್ ವಿರುದ್ಧ ಅವರ ಸೊಸೆ ಸಲ್ಲಿಸಿರುವ ದೂರು ಚಿತ್ರರಂಗಕ್ಕೆ ದೊಡ್ಡ ಏರ್ಪಾಡು ತಂದುಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಸ್. ನಾರಾಯಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಇದೀಗ ಈ ವರದಕ್ಷಿಣೆ ಪ್ರಕರಣ ಕೋರ್ಟ್ ಮೆಟ್ಟಿಲು ತಲುಪಿದೆ. ಇತ್ತೀಚಿನ ಸಂದರ್ಶನದಲ್ಲಿ ಅವರು ಇಂದಿನ ಪೀಳಿಗೆಯ ಹೆಣ್ಣು ಮಕ್ಕಳ ನಡೆಗೆ ಪ್ರಶ್ನೆ ಎತ್ತಿದ್ದಾರೆ ಮತ್ತು ತಮ್ಮ ಸೊಸೆ ಮನೆಲ್ಲಿಯ ವರ್ತನೆ ಕುರಿತು ವಿವರಿಸಿದ್ದಾರೆ.
“ಲವ್ ಮಾಡಿ ಮದುವೆ ಆಗಿದ್ದಾರೆ ಅಂದರೆ, ಗಂಡನನ್ನಾಗಿ, ಅವನಿಗೆ ಜನ್ಮ ಕೊಟ್ಟವರನ್ನಾಗಲಿ ಬಿಟ್ಟು ಕೊಡಬಾರದು. ಯಾಕಂದ್ರೆ, ಈ ಕುಟುಂಬದ ಸಾರಥಿ ಅವಳು ಆಗುತ್ತಾಳೆ. ಸಾರಥಿ ಕೆಲಸ ಏನು? ಕುಟುಂಬದ ಟೈರ್ ಪಂಕ್ಚರ್ ಮಾಡಿ ಹೋಗುವುದಲ್ಲ. ಪಂಕ್ಚರ್ ಆಗಿರುವ ಟೈರ್ ಅನ್ನು ಸರಿ ಮಾಡಿಕೊಂಡು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಆ ಕೆಲಸ ಮಾಡುವುದಕ್ಕೆ ಯೋಗ್ಯತೆ ಇಲ್ಲ ಮದುವೆ ಮಾಡಿಕೊಳ್ಳಬಾರದು. ಲವ್ ಮಾಡಬಾರದು. ಬರಬಾರದು ನಮ್ಮಂತಹವರ ಕುಟುಂಬಕ್ಕೆ. ನಿನಗೆ ಎಲ್ಲಿ ಯೋಗ್ಯವೋ ಅಲ್ಲಿಗೆ ಹೋಗಬೇಕು.” ಎಂದು ಎಸ್.ನಾರಾಯಣ್ ಕಿಡಿ ಕಾರಿದ್ದಾರೆ.
“ಅವರ ಅಗತ್ಯ ಏನೋ ಇದೆಯೋ, ಅದು ಸಿಗಲಿಲ್ವಾ? ಅತ್ತೆಯನ್ನೂ ಕೇರ್ ಮಾಡಲ್ಲ. ಮಾವನನ್ನೂ ಕೇರ್ ಮಾಡಲ್ಲ. ಅವರ ವಯಸ್ಸನ್ನು ಕೇರ್ ಮಾಡುವುದಿಲ್ಲ. ಯಾಕಮ್ಮ ಹೀಗೆ ಅಂದರೆ ಪೊಲೀಸ್ ಸ್ಟೇಷನ್‌ಗೆ ಹೋಗುವುದು. ಹೀಗಾದಾಗ ಸಂಬಂಧಗಳಿಗೆ ಬೆಲೆ ಎಲ್ಲಿರುತ್ತೆ? ಪ್ರೀತಿ ಎಲ್ಲಿ ಸಿಗುತ್ತೆ? ಹೀಗಾಗಿ ಸೊಸೆಯಾದವಳು ಇದ್ದ ಕಡೆ ಶುದ್ಧವಾಗಿದ್ದರೆ ತಾನೇ ಬಹಳ ಹೊತ್ತು ನಿಲ್ಲುವುದಕ್ಕೆ ಆಗೋದು. ಹಾಗೇ ಸೊಸೆಯಾದವಳು ಪ್ರೀತಿ ಸಂತೋಷವನ್ನು ಗಳಿಸಿಕೊಳ್ಳಬೇಕು” ಎಂದಿದ್ದಾರೆ.
ಮಗಳ ವಿರುದ್ಧ ಕುಟುಂಬದವರೇ ಠಾಣೆಗೆ ದೂರು, “7 ತಿಂಗಳ ಹಿಂದೆ ಅವರ ಕುಟುಂಬದವರೇ ಅದೇ ಪೊಲೀಸ್ ಠಾಣೆಯಲ್ಲಿ ದೂರನ್ನು ಕೊಟ್ಟಿದ್ದಾರೆ. ಅವಳು ಬಾಳಲಾರದೆ ಗಂಡನನ್ನು ಬಿಟ್ಟು ಬಂದಿದ್ದಾಳೆ. ಮನೆಯಲ್ಲಿ ಬುದ್ದಿ ಹೇಳಿದರೆ ಕೂಗಾಡುತ್ತಾಳೆಂದು ದೂರು ದಾಖಲಿಸಿದ್ದಾರೆ. ನನ್ನ ಪ್ರತಿಯೊಂದು ಹೇಳಿಕೆ ನನ್ನ ಕುಟುಂಬಕ್ಕಷ್ಟೇ ಸೀಮಿತ ಅಲ್ಲ. ಇಡಿ ಸಮಾಜಕ್ಕೆ ಅನ್ವಯ ಆಗುತ್ತೆ.” ಎಂದಿದ್ದಾರೆ.
“ಇವತ್ತು ಮದುವೆಯಾಗಿರುವ ಗೃಹಿಣಿಯ ಕುತ್ತಿಗೆಯಲ್ಲಿ ತಾಳಿ ಇರಲ್ಲ. ಕಾಲಲ್ಲಿ ಉಂಗುರ ಇರೋದಿಲ್ಲ. ತಾಳಿಯನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವಾಗ ಹಾಕೋತಾರೆ. ನಾವು ತಾಳಿಯಲ್ಲಿ ಏನಾದರೂ ಒಂದು ಚೂರು ಕಟ್ಟಾದರೂ ನೂರೆಂಟು ಶಾಂತಿ ಮಾಡಿಸುತ್ತಾರೆ. ಅಪಶಕುನಾ ಅಂತಾರೆ. ಈಗಿನವರ ಕತ್ತಿನಲ್ಲಿ ತಾಳಿಯೇ ಇರೋದಿಲ್ಲ. ನನ್ನ ಸೊಸೆಯ ಕುತ್ತಿಗೆಯಲ್ಲೂ ತಾಳಿಯನ್ನೇ ನೋಡಿಲ್ಲ. ಕಾಲುಂಗುರ ಇಲ್ಲ. ಹೇಗಿರಬೇಕು ಯೋಚನೆ ಮಾಡಿ. ನಮ್ಮ ಪೂರ್ವಿಕರು ಸುಮ್ಮನೆ ಇದನ್ನೆಲ್ಲ ಮಾಡಿಲ್ಲ. ಹೆಣ್ಣು ಮಗಳನ್ನು ನೋಡಿದರೆ, ತಾಯಿಯ ರೂಪದಲ್ಲಿ ನೋಡುವುದಕ್ಕೆ ಬಯಸುತ್ತಾನೆ. ಅಲ್ಲಿ ಬೇರೆ ಭಾವನೆ ಬರಬಾರದು.” ಎಂದು ಹೇಳಿದ್ದಾರೆ.
“ನಾವು ಏನನ್ನೂ ನಿರೀಕ್ಷೆ ಮಾಡಿಲ್ಲ. ನೀವು ನೀರು ಕೊಡಬೇಡಿ, ಕಾಫಿನೂ ಕೊಡಬೇಡಿ. ನೀವು ಚೆನ್ನಾಗಿ ಇರುತ್ತೀರಾ? ಸಿಂಗಲ್ ಲೈನ್‌ನಲ್ಲಿ ಕೇಳಿದ್ವಿ. ಅವರು ಒಂದು ದಿನ ನಮ್ಮ ಮನೆ ಒಲೆಯ ಹತ್ತಿರ ಬಂದಿಲ್ಲ. ಒಂದು ದಿನ ದೇವರ ಮನೆಗೆ ಬಂದಿಲ್ಲ. ಒಂದು ಲೋಟ ನೀರು ನನಗೆ ತಂದುಕೊಟ್ಟಿಲ್ಲ. ನಮ್ಮ ಮನೆಯವರು ಅಡುಗೆ ಮಾಡಿದ್ದನ್ನು ತೆಗೆದುಕೊಂಡು ಹೋಗಿ ನಾನು ಊಟ ಬಡಿಸಿದ್ದೀನಿ. ನಮ್ಮ ಮನೆಗೆ ಒಗ್ಗಿಕೊಳ್ಳಲಿ. ಸ್ವಲ್ಪ ಸಮಯ ಕೋಡೋಣ ಅಂತ. ಎಲ್ಲವನ್ನೂ ಕೋರ್ಟ್ ಮುಂದೆ ಹೇಳುತ್ತೇನೆ.” ಎಂದು ಎಸ್.ನಾರಾಯಣ್ ಸಂದರ್ಶನದಲ್ಲಿ ಹೇಳಿದ್ದಾರೆ.
“ಸಮಸ್ತ ಜನತೆಗೆ ನಾನು ಹೇಳೋದು ಇಷ್ಟೇನೆ. ಇಂತಹ ಘಟನೆಗಳು ಯಾರ ಕುಟುಂಬದಲ್ಲೂ ನಡೆಯಬಾರದು. ನಾವ್ಯಾರೂ ವಿಚಲಿತರಾಗಿಲ್ಲ. ಯಾಕಂದ್ರೆ, ಧರ್ಮದ ಹಾದಿಯಲ್ಲಿ ಬದುಕನ್ನು ಸಾಗಿಸುತ್ತಿದ್ದೇವೆ. ನಾವು ಯಾವತ್ತು ಸಮಾಜದ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡುತ್ತೇನೋ ಬಹುಶ: ಅವತ್ತು ನಾನು ಬದುಕಿರೋದಿಲ್ಲ. ನಾನು ಅಂತಹ ವ್ಯಕ್ತಿ.” ಎಂದು ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದಾರೆ.






