ನಗರದಿಂದ ಹಳ್ಳಿಗೆ ತೆರಳಿ ಅಲ್ಲಿ ಜೀವನ ನಡೆಸೋದು ಅಷ್ಟು ಸರಳ ವಿಷಯವಲ್ಲ. ಹಳ್ಳಿ ಜೀವನವು ಹಲವಾರು ಕಷ್ಟ-ಸವಾಲುಗಳಿಂದ ಕೂಡಿದೆ. ‘ಹಳ್ಳಿ’ ಪವರ್‌ನಲ್ಲಿ ಭಾಗವಹಿಸಿದ್ದ 12 ಸ್ಪರ್ಧಿಗಳ ಪೈಕಿ, ನಾಲ್ವರು ಈಗಾಗಲೇ ಹೊರಗುಳಿದಿದ್ದಾರೆ. ಒಬ್ಬರು ಎಲಿಮಿನೇಟ್, ಒಬ್ಬರು ಗಾಯಾಳು, ಉಳಿದಿಬ್ಬರು ವೈಯಕ್ತಿಕ ಕಾರಣಕ್ಕಾಗಿ ಹೊರಬಂದಿದ್ದಾರೆ. ಶೋನಿಂದ ಹೊರ ಬಂದ ಆ್ಯಶ್ ಮೆಲೋ ಸ್ಕೈಲರ್ ಒಂದು ಗಂಭೀರ ಆರೋಪ ಮಾಡಿದ್ದಾರೆ.
ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಚಿತ್ರದಲ್ಲಿ ಆ್ಯಶ್ ಮೆಲೋ ಸ್ಕೈಲರ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರೀಲ್ಸ್ ಮೂಲಕವೇ ಜನಪ್ರಿಯತೆ ಗಳಿಸಿದ್ದ ಅವರಿಗೆ ಸಿನಿಮಾದಿಂದ ಹೆಚ್ಚಿನ ಹೆಸರು ಬಂದಿತು. ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ 10 ಲಕ್ಷ ಫಾಲೋವರ್ಸ್ ಇರುವ ಅವರು, ‘ಹಳ್ಳಿ ಪವರ್’ ಶೋನಲ್ಲಿ ಕಂಗೊಳಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೇವಲ ಏಳು ದಿನಗಳಲ್ಲಿ ಅವರೇ ಸುಸ್ತಾಗಿದ್ದಾರೆ.
‘ಹಳ್ಳಿ ಪವರ್’ ಶೋನಲ್ಲಿ ವೈಯಕ್ತಿಕ ಕಾರಣ ನೀಡಿ ಮಂಗಳೂರಿನ ಸ್ನೇಹಾ ಶೆಟ್ಟಿ ಹೊರಬರುತ್ತಿದ್ದಾಗಿ ಅಕುಲ್ ಬಾಲಾಜಿಗೆ ತಿಳಿಸಿದರು. ನಂತರ ಅಕುಲ್, “ಇನ್ನೂ ಯಾರಾದರೂ ಶೋ ಬಿಟ್ಟುಕೊಡಲು ಬಯಸಿದರೆ ಕೈ ಎತ್ತಿ” ಎಂದು ಕೇಳಿದಾಗ, ಆ್ಯಶ್ ಕೈ ಎತ್ತಿದರು. ಆ ಸಂದರ್ಭದಲ್ಲಿ ಅವರು ವೈಯಕ್ತಿಕ ಕಾರಣವಷ್ಟೇ ತಿಳಿಸಿದ್ದಾರೆ.
ಶೋನಿಂದ ಹೊರಬಂದ ನಂತರ ಆ್ಯಶ್ ಇನ್ಸ್ಟಾಗ್ರಾಂ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಬರೆದಿರುವಂತೆ, “ನನ್ನ ಪ್ರೇಕ್ಷಕರಿಗೆ ಮತ್ತು ಕಾರ್ಯಕ್ರಮ ವೀಕ್ಷಕರಿಗೆ ನಾನು ಸದಾ ಗೌರವ ನೀಡುತ್ತೇನೆ. ಆದರೆ ನನ್ನ ಮಾತುಗಳನ್ನು ತಪ್ಪಾಗಿ ತೋರಿಸಿ, ಕೆಟ್ಟ ರೀತಿಯಲ್ಲಿ ಚಿತ್ರಿಸಿರುವುದರಿಂದಲೇ ಶೋ ತೊರೆಯಬೇಕಾಯಿತು. ನಾನು ಹೇಳಿದ ಪ್ರತಿಯೊಂದು ಮಾತು ಪ್ರೇಕ್ಷಕರಿಗೂ, ಶೋಗೂ ಗೌರವ ಸಲ್ಲಿಸುವಂತೆಯೇ ಇತ್ತು, ಆದರೆ ಅದನ್ನು ವಿಕೃತಗೊಳಿಸಲಾಯಿತು” ಎಂದಿದ್ದಾರೆ.
“ನನ್ನ ಮಾತುಗಳನ್ನು ತಪ್ಪಾಗಿ ತೋರಿಸಿ, ಕೆಟ್ಟ ರೀತಿಯಲ್ಲಿ ಚಿತ್ರಿಸಿರುವುದರಿಂದಲೇ ಶೋ ತೊರೆಯಬೇಕಾಯಿತು” ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್..
By krutika naik
On: September 10, 2025 8:02 AM
---Advertisement---






