ದಾವಣಗೆರೆಯನ್ನು ಅತಿಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಗಣಪತಿ ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಮದೀನಾ ರಸ್ತೆ ಹಾಗೂ ಆಟೋ ನಿಲ್ದಾಣದ ಮಾರ್ಗಗಳಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.
ಆದರೆ ಭಕ್ತರು ಹಳೆಯ ಮಾರ್ಗದಲ್ಲೇ ಮೆರವಣಿಗೆ ನಡೆಸಬೇಕು ಎಂದು ಪಟ್ಟು ಹಿಡಿದ ಕಾರಣ ಮೆರವಣಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ನಿರ್ಧಾರವನ್ನು ವಿರೋಧಿಸಿ ಗಣೇಶ ಮೂರ್ತಿಗೆ ಕಪ್ಪು ಬಟ್ಟೆ ಹೊದಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆಯ ಮಾರ್ಗ ಬದಲಾವಣೆ ವಿಚಾರವು ಗೊಂದಲ ಮತ್ತು ಹೈಡ್ರಾಮಾಗೆ ಕಾರಣವಾಗಿದೆ. ನಗರದ ಬಸವರಾಜಪೇಟೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದ ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ಯುವಾಗ ವಿವಾದ ಪ್ರಾರಂಭವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿಯ ಮೆರವಣಿಗೆ ಮದೀನಾ ಆಟೋ ಸ್ಟ್ಯಾಂಡ್ ಮತ್ತು ಹಂಸಬಾವಿ ವೃತ್ತದ ಮೂಲಕ ಹಾದುಹೋಗುತ್ತಿತ್ತು. ಆದರೆ ಆ ಸಮಯದಲ್ಲಿ ಕಲ್ಲು ತೂರಾಟದಂತಹ ಅಹಿತಕರ ಘಟನೆಗಳು ನಡೆದ ಕಾರಣ, ಭದ್ರತಾ ದೃಷ್ಟಿಯಿಂದ ಪೊಲೀಸರು ಆ ಮಾರ್ಗವನ್ನು ರದ್ದುಪಡಿಸಿ ಹೊಸ ಮಾರ್ಗವನ್ನು ನಿಗದಿಪಡಿಸಿದ್ದಾರೆ. ಈ ನಿರ್ಧಾರದಿಂದ ಭಕ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಸ್ಥಳೀಯ ಮಹಿಳೆಯರು ಹಾಗೂ ಯುವಕರು ಹಳೆಯ ಮಾರ್ಗದಲ್ಲೇ ಮೆರವಣಿಗೆ ನಡೆಯಬೇಕು ಎಂದು ಪಟ್ಟು ಹಿಡಿದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅವರು ಗಣೇಶ ಮೂರ್ತಿಗೆ ಕಪ್ಪು ಬಟ್ಟೆ ಹಾಕಿ ಪ್ರತಿಭಟಿಸಿದ್ದು, ಹಳೆಯ ಮಾರ್ಗಕ್ಕೆ ಅವಕಾಶ ನೀಡದಿದ್ದರೆ ಮೆರವಣಿಗೆ ನಡೆಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. “ಮದೀನಾ ಆಟೋ ಸ್ಟ್ಯಾಂಡ್ ಹಾಗೂ ಹಂಸಬಾವಿ ಸರ್ಕಲ್ ಮೂಲಕವೇ ಮೆರವಣಿಗೆ ಸಾಗಬೇಕು” ಎಂಬುದಾಗಿ ಮಹಿಳೆಯರು ಮತ್ತು ಯುವಕರು ಒತ್ತಾಯ ವ್ಯಕ್ತಪಡಿಸಿದ್ದಾರೆ.
ಗಣೇಶ ಮೂರ್ತಿಗೆ ಕಪ್ಪು ಬಟ್ಟೆ ಹಾಕಿ ಪೊಲೀಸರು ಹಳೆಯ ಮಾರ್ಗಕ್ಕೆ ಅವಕಾಶ ನೀಡದಿದ್ದರೆ ಮೆರವಣಿಗೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಾವು ಮದೀನಾ ಆಟೋ ಸ್ಟ್ಯಾಂಡ್ ಮತ್ತು ಹಂಸಬಾವಿ ಸರ್ಕಲ್ ಮೂಲಕವೇ ಹೋಗಲು ಅವಕಾಶ ನೀಡಿ ಎಂದು ಮಹಿಳೆಯರು ಮತ್ತು ಯುವಕರು ಒತ್ತಾಯಿಸಿದ್ದಾರೆ.
ದಾವಣಗೆರೆ: ಅಹಿತಕರ ಘಟನೆ ತಪ್ಪಿಸಲು ಗಣಪತಿ ಮೆರವಣಿಗೆಯಲ್ಲಿ ಮಾರ್ಗ ನಿರ್ಬಂಧ, ಕಪ್ಪು ಪಟ್ಟಿ ವಿವಾದ
By krutika naik
On: September 16, 2025 11:06 AM
---Advertisement---






