ಕನ್ನಡದ ಖ್ಯಾತ ನಿರ್ದೇಶಕ ಎಸ್. ನಾರಾಯಣ ಹಾಗೂ ಅವರ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಸೊಸೆಯೊಬ್ಬರು ನೀಡಿದ ದೂರು ಆಧಾರವಾಗಿ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ನಿರ್ದೇಶಕರ ಕುಟುಂಬದ ಮೇಲೆ ಕೇಸ್ ದಾಖಲಿಸಲಾಗಿದೆ.
ವರದಕ್ಷಿಣೆ ಹಿಂಸೆ ನೀಡಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾವ ನಾರಾಯಣ, ಅತ್ತೆ ಭಾಗ್ಯವತಿ, ಪತಿ ಪವನ್ ವಿರುದ್ಧ ಸೊಸೆ ಪವಿತ್ರ ಬೆಂಗಳೂರಿನ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ.
2021ರಲ್ಲಿ ನಿರ್ದೇಶಕ ಎಸ್. ನಾರಾಯಣ ಪುತ್ರ ಪವನ್ ಹಾಗೂ ಪವಿತ್ರ ಅವರ ವಿವಾಹ ನೆರವೇರಿತ್ತು. ಮದುವೆಯ ಸಮಯದಲ್ಲಿ ವರದಕ್ಷಿಣೆಯಾಗಿ ಹಣ ಮತ್ತು ಆಭರಣಗಳನ್ನು ನೀಡಲಾಗಿದ್ದು, ಬಳಿಕ ಇನ್ನಷ್ಟು ಹಣಕ್ಕೆ ಒತ್ತಾಯ ಮಾಡಲಾಗಿದೆ ಎಂಬ ಆರೋಪ ಸೊಸೆಯಿಂದ ಕೇಳಿಬಂದಿದೆ.
ಮದುವೆಯ ವೇಳೆ ಒಂದು ಲಕ್ಷ ರೂಪಾಯಿ ಮೌಲ್ಯದ ಉಂಗುರ ಹಾಗೂ ಮದುವೆ ಖರ್ಚುಗಳನ್ನು ಭರಿಸಲಾಯಿತು. ಆದರೆ, ಪವನ್ ಕೆಲಸ ಮಾಡದೇ ಮನೆಯಲ್ಲೇ ಇರುವುದರಿಂದ, ಕುಟುಂಬದವರಿಂದ ವರದಕ್ಷಿಣೆ ಹಿಂಸೆ ನಡೆಯುತ್ತಿದೆ ಎಂದು ದೂರು ನೀಡಲಾಗಿದೆ.
ಪವಿತ್ರ ಅವರು ಪೊಲೀಸರಿಗೆ ನೀಡಿದ ದೂರು ಪ್ರಕಾರ, ಆರ್ಥಿಕ ಸಂಕಷ್ಟದ ಹಿನ್ನೆಲೆ ಅವರು ಕೆಲಸ ಮಾಡಿ ಮನೆ ನಡೆಸುತ್ತಿದ್ದರು. ಈ ಅವಧಿಯಲ್ಲಿ ಪವಿತ್ರ ಅವರ ತಾಯಿ ಒಡೆಯವೇಯನ್ನು ಅಡವಿಟ್ಟು ಹಣ ನೀಡಿ ಸಹಾಯ ಮಾಡಿದ್ದರು.
ಆದರೆ, ಪವನ್ ನಡೆಸುತ್ತಿದ್ದ ಕಲಾ ಸಾಮ್ರಾಟ್ ಟೀಮ್ ಅಕಾಡೆಮಿ ನಷ್ಟಕ್ಕೀಡಾಗಿ ಮುಚ್ಚಲ್ಪಟ್ಟಿತು. ಬಳಿಕ ಪವಿತ್ರ ಅವರು 10 ಲಕ್ಷ ರೂ. ಸಾಲ ಮಾಡಿ ಪತಿಯ ಪವನ್‌ಗೆ ನೀಡಿದ್ದರೂ, ತಮಗೆ ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.






