ಕೊಪ್ಪಳ ಜಿಲ್ಲೆಯ ಕವಲೂರು ಓಣಿ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕ ಮಂಜುನಾಥ್ ನಾಯಕ್ ಅವರನ್ನು ಅಬ್ದುಲ್ ರಜಾಕ್ ಅವಮಾನ ಪೂರಕವಾಗಿ ನಿಂದಿಸಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ಫೋನ್ ಕರೆ ಮೂಲಕ ನಡೆದಿದೆ ಎಂದು ತಿಳಿದು ಬಂದಿದೆ.
ಯುವಕ ಈ ನಿಂದನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದು, ಸ್ಥಳೀಯ ಅಧಿಕಾರಿಗಳು ಪ್ರಕರಣವನ್ನು ಗಮನದಲ್ಲಿ ತೆಗೆದುಕೊಂಡಿದ್ದಾರೆ. ಘಟನೆ ಸ್ಥಳೀಯ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಂಭಾಷಣೆ ವಿಡಿಯೋ ರೆಕಾರ್ಡ್ ಆಗಿದ್ದು ಅದರಲ್ಲಿ ನಿಂದಿಸಿರುವುದು ದಾಖಲಾಗಿದೆ.
ಸೆಪ್ಟೆಂಬರ್ 3, 2025 ರಂದು ಟಿವಿ ಡಿಬೇಟ್‌ನಲ್ಲಿ ಬಳಸಿದ ಭಾಷೆ ಸಂಬಂಧವಾಗಿ, ಮಂಜುನಾಥ್ ನಾಯಕ್ ಎಂಬ ಯುವಕ ಅಬ್ದುಲ್ ರಜಾಕ್ ಅವರನ್ನು ಕರೆ ಮಾಡಿ, “ನೀವು ಮಾದ್ಯಮದಲ್ಲಿ ಮಾತನಾಡುವಾಗ ‘ಇಡಿಯಟ್’ ಎಂದು ಹೇಳುವುದು ಸರಿ ಅಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವೇಳೆ ಅಬ್ದುಲ್ ರಜಾಕ್ ಅವರು “ಫೋನ್ ಇಡಲೋ ಸುವ್ವರ್” ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ. ಈ ಘಟನೆ ಸಂಪೂರ್ಣವಾಗಿ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್‌ನಲ್ಲಿ ದಾಖಲಾಗಿದ್ದು, ಮಂಜುನಾಥ್ ಅವರು ಈ ಕುರಿತು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಜುನಾಥ್ ನಾಯಕ್ ಅವರು ಅಬ್ದುಲ್ ರಜಾಕ್ ಅವರಿಂದ “ಸುವ್ವರ್” ಎಂದು ನಿಂದನೆಯಾಗಿದ್ದು, ಇದರಿಂದ ಮಾನಸಿಕ ನೋವು ಅನುಭವಿಸಿದ್ದರಂತೆ. ಅವರು ಈ ನಿಂದನೆ ಸ್ಪಷ್ಟವಾಗಿ ಜಾತಿ ಆಧಾರಿತವಾಗಿದೆ ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲೇಖಿಸಿ, ಜಾತಿ ನಿಂದನೆ ನಡೆಸಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋ ರೆಕಾರ್ಡಿಂಗ್ ಸಹಿತ ದೂರು ನಗರ ಪೊಲೀಸ್ ಠಾಣೆಗೆ ಸಲ್ಲಿಸಲಾಗಿದೆ. ಪೊಲೀಸರು ದೂರು ಸ್ವೀಕರಿಸಿ ಪ್ರಕರಣದ ವಿಚಾರಣೆಗೆ ಮುಂದಾಗಿದ್ದಾರೆ.






